– ವರದಿಯಿಂದ ಎಚ್ಚೆತ್ತ ಬಿಡಿಎ ಅಧಿಕಾರಿಗಳು
ಬೆಂಗಳೂರು: ಕಳಪೆ ಕಾಮಗಾರಿಯಿಂದ ಅಪಾಯಕ್ಕಾಗಿ ಆಹ್ವಾನಿಸುತ್ತಿದ್ದ ಹೆಬ್ಬಾಳ ಫ್ಲೈ ಓವರ್ ಗೆ ಡಾಂಬರೀಕರಣ ಭಾಗ್ಯ ದೊರೆತಿದೆ. ಪಬ್ಲಿಕ್ ಟಿವಿ ವರದಿಯಿಂದ ಎಚ್ಚೆತ್ತ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧಿಕಾರಿಗಳು ಹೆಬ್ಬಾಳ ಫ್ಲೈ ಓವರ್ ಮೇಲೆ ಡಾಂಬರೀಕರಣ ಮಾಡುತ್ತಿದ್ದು, ಸವೆದಿದ್ದ ಕಬ್ಬಿಣದ ಡ್ರಿಲ್‍ಗಳನ್ನ ಸರಿಪಡಿತ್ತಿದ್ದಾರೆ.
ಕಳಪೆ ಕಾಮಗಾರಿಯಿಂದ ಮೇಲ್ಸೇತುವೆ ಮೇಲೆ ಕಬ್ಬಿಣದ ಡ್ರಿಲ್ ಸವೆದು, ಎರಡು ಕಡೆ ಗುಂಡಿ ಬಿದ್ದು ಕುಸಿಯುವ ಮಟ್ಟಕ್ಕೆ ತಲುಪಿತ್ತು. ಈ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ವರದಿ ಬೆನ್ನಲ್ಲೇ ಬಿಡಿಎ ಅಧಿಕಾರಿಗಳು ಎಚ್ಚೆತ್ತುಕೊಂಡು ಹೆಬ್ಬಾಳ ಫ್ಲೈ ಓವರ್ ಮೇಲೆ ಗುಂಡಿ ಬಿದ್ದ ಕಡೆ ಡಾಂಬರೀಕರಣ ಆರಂಭಿಸಿದ್ದಾರೆ. ಇದನ್ನೂ ಓದಿ: ಅಪಾಯ ಆಹ್ವಾನಿಸುತ್ತಿದೆ ಹೆಬ್ಬಾಳ ಫ್ಲೈಓವರ್
Advertisement
Advertisement
ಹೆಬ್ಬಾಳ ಫ್ಲೈ ಓವರ್ ಮೇಲೆ ನಿಂತು ಕೆಳಗಡೆ ನೋಡುದರೆ ಗುಂಡಿಗಳಲ್ಲಿ ಸೇತುವೆಯ ಕೆಳಗಡೆ ಓಡಾಡುವ ಜನ, ವಾಹನಗಳು ಕಾಣುತ್ತಿದ್ದರು. ಈ ಪ್ರಮಾಣದಲ್ಲಿ ಅಪಾಯ ಸೃಷ್ಟಿಯಾಗಿ ಮೇಲ್ಸೇತುವೆ ಯಾವಾಗ ಕುಸಿಯುತ್ತದೆಯೋ ಅಂತ ವಾಹನ ಸವಾರರು ಭಯದಲ್ಲೇ ಓಡಾಡುತ್ತಿದ್ದರು. ಪಬ್ಲಿಕ್ ಟಿವಿ ವರದಿ ಪ್ರಸಾರ ಮಾಡಿದ ವರದಿ ಬಳಿಕ ಬಿಡಿಎ ಅಧಿಕಾರಿಗಳು ಎಚ್ಚೆತ್ತು, ಕಬ್ಬಿಣದ ಡ್ರಿಲ್ ಸರಿಪಡಿಸಿ, ಡಾಂಬರ್ ಹಾಕುತ್ತಿದ್ದಾರೆ.
Advertisement
ಈ ಕಳಪೆ ಕಾಮಗಾರಿಯ ಫ್ಲೈ ಓವರ್ ಬಗ್ಗೆ ಪಬ್ಲಿಕ್ ಟಿವಿಯು ಸಂಚಾರ ತಜ್ಞರ ಅಭಿಪ್ರಾಯ ಸಂಗ್ರಹಿಸಿತ್ತು. ಹೆಬ್ಬಾಳ ಫ್ಲೈ ಓವರ್ ಪರಿಸ್ಥಿತಿ ಮನಗಂಡು ಸಂಚಾರ ತಜರ್ಞರು ಆತಂಕ ವ್ಯಕ್ತಪಡಿಸಿದ್ದರು. ಸರಿಯಾದ ನಿರ್ವಹಣೆ ಮಾಡದಿದ್ದರೆ ಎರಡ್ಮೂರು ತಿಂಗಳಲ್ಲಿ ಅಪಾಯ ಸಂಭವಿಸುತ್ತದೆ. ಅಪಾಯ ಕಟ್ಟಿಟ್ಟ ಬುತ್ತಿ ಎಂದು ಬಿಡಿಎಗೆ ಎಚ್ಚರಿಕೆ ನೀಡಿದ್ದರು. ಇದನ್ನು ಮನಗಂಡ ಬಿಡಿಎ ಅಧಿಕಾರಿಗಳು ಅಪಾಯ ಸಂಭವಿಸುವುದಕ್ಕೂ ಮುನ್ನವೇ ದುರಸ್ತಿ ಕಾಮಗಾರಿ ಆರಂಭಿಸಿದ್ದಾರೆ.
Advertisement
ಇದೇ ರೀತಿ ಬೆಂಗಳೂರಿನ ಕೆಲವು ಫ್ಲೈ ಓವರ್ ಗಳು ಅಪಾಯದ ಅಂಚಿನಲ್ಲಿವೆ. ಅಧಿಕಾರಿಗಳು ಇನ್ನದರೂ ಎಚ್ಚೆತ್ತು ಕಳಪೆ ಕಾಮಗಾರಿ ಫ್ಲೈ ಓವರ್ ಗಳನ್ನ ಸರಿಪಡಿಸುತ್ತಾರಾ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.