ಬೆಂಗಳೂರು: ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ಎಚ್ಚೆತ್ತಿರುವ ಬಿಬಿಎಂಪಿ, ಬೆಂಗಳೂರಿನ ಆರ್ಟರಿಯಲ್, ಸಬ್ – ಆರ್ಟರಿಯಲ್ ರಸ್ತೆಗಳು, ಹೈ-ಡೆನ್ಸಿಟಿ ಕಾರಿಡಾರ್ ರಸ್ತೆಗಳು ಸೇರಿದಂತೆ ಎಲ್ಲಾ ವಾರ್ಡ್ ರಸ್ತೆಗಳಲ್ಲಿನ ರಸ್ತೆಗುಂಡಿಗಳನ್ನು ಮುಚ್ಚಿ ಸುಗಮ ವಾಹನ ಸಂಚಾರವನ್ನು ಒದಗಿಸಲು ಅನುವಾಗುವಂತೆ ಪಾಲಿಕೆ ವ್ಯಾಪ್ತಿಯಲ್ಲಿ ಸ್ಥಾಪಿಸಿರುವ ಡಾಂಬರು ಮಿಶ್ರಣ ತಯಾರಿಕಾ ಘಟಕವನ್ನು ಬಳಸಿಕೊಂಡು ಡಾಂಬರು ಮಿಶ್ರಣವನ್ನು ಉತ್ಪಾದಿಸಿ ರಸ್ತೆಗುಂಡಿಗಳನ್ನು ಮುಚ್ಚಲು ಗುತ್ತಿಗೆ ನೀಡಿದೆ.
Advertisement
ರಸ್ತೆ ಮೂಲಭೂತ ಸೌಕರ್ಯ ವಿಭಾಗದ ವತಿಯಿಂದ ಆರ್ಟಿರಿಯಲ್, ಸಬ್-ಆರ್ಟರಿಯಲ್ ರಸ್ತೆಗಳ ಅಭಿವೃದ್ಧಿ, ಯೋಜನೆ(ಕೇಂದ್ರ) ವಿಭಾಗದಿಂದ ವೈಟ್ ಟಾಪಿಂಗ್ ಮತ್ತು ಟೆಂಡರ್ ಶ್ಯೂರ್ ರಸ್ತೆಗಳ ಅಭಿವೃದ್ಧಿ ಮತ್ತು ವಲಯಗಳಿಂದ ವಾರ್ಡ್ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
Advertisement
Advertisement
ಎಲ್ಲಾ ವಲಯದಲ್ಲಿ ಸಂಬಂಧಪಟ್ಟ ವಲಯದ ಮುಖ್ಯ ಅಭಿಯಂತರರು, ವಿಭಾಗದ ಕಾರ್ಯಪಾಲಕ ಅಭಿಯಂತರರು, ಸಹಾಯಕ ಕಾರ್ಯಪಾಲಕ ಅಭಿಯಂತರರು ಮತ್ತು ವಾರ್ಡ್ ಅಭಿಯಂತರರನ್ನು ಒಳಗೊಂಡಂತೆ ರಸ್ತೆಗುಂಡಿಗಳನ್ನು ಮುಚ್ಚಲು ಟಾಸ್ಕ್ ಫೋರ್ಸ್ ರಚನೆ ಮಾಡುವುದು.
Advertisement
ವಲಯ ಮಟ್ಟದಲ್ಲಿನ ವಿಭಾಗದ ಕಾರ್ಯಪಾಲಕ ಅಭಿಯಂತರರು ತಮ್ಮ ವ್ಯಾಪ್ತಿಗೆ ಒಳಪಡುವ ಎಲ್ಲಾ ರಸ್ತೆಗಳ (ಆರ್ಟರಿಯಲ್ & ಸಬ್ ಆರ್ಟಿರಿಯಲ್ ರಸ್ತೆಗಳನ್ನು ಸೇರಿದಂತೆ) ಪಟ್ಟಿ ಮಾಡಿ ರಸ್ತೆಗುಂಡಿಗಳನ್ನು ಗುರುತಿಸಿ ಅಗತ್ಯಕ್ಕೆ ತಕ್ಕಂತೆ ಡಾಂಬರು ಮಿಶ್ರಣದ ಪ್ರಮಾಣಕ್ಕೆ ಬೇಡಿಕೆ ಸಲ್ಲಿಸಿ ರಸ್ತೆಗುಂಡಿಗಳನ್ನು ಮುಚ್ಚಲು ಅಗತ್ಯ ಕ್ರಮವಹಿಸುವುದು. ಇದಕ್ಕೆ ಪೂರಕವಾಗಿ ರಸ್ತೆಮೂಲಭೂತಸೌಕರ್ಯ, ಯೋಜನೆ-ಕೇಂದ್ರದ ಕಾರ್ಯಪಾಲಕ ಅಭಿಯಂತರರು/ಸಹಾಯಕ ಕಾರ್ಯಪಾಲಕ ಅಭಿಯಂತರರು ಸಮನ್ವಯ ಸಾಧಿಸಿ ಅಗತ್ಯ ಮಾಹಿತಿ ಒದಗಿಸಿ ರಸ್ತೆಗುಂಡಿಗಳನ್ನು ಮುಚ್ಚಲು ಸಹಕರಿಸುವುದು.
ರಸ್ತೆಮೂಲಭೂತಸೌಕರ್ಯ ಯೋಜನೆ-ಕೇಂದ್ರದ ಕಾರ್ಯಪಾಲಕ ಅಭಿಯಂತರರು ಈಗಾಗಲೇ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ದೋಷಮುಕ್ತ ಅವಧಿಯಲ್ಲಿರುವ ರಸ್ತೆ ಭಾಗದ ವಿವರಗಳನ್ನು ಸಂಬಂಧಪಟ್ಟ ವಿಭಾಗದ ಕಾರ್ಯಪಾಲಕ ಅಭಿಯಂತರರಿಗೆ ನೀಡುವುದು. ಈ ರಸ್ತೆಗಳಲ್ಲಿ ಗುಂಡಿಗಳು ಉಂಟಾದಲ್ಲಿ ಅಥವಾ ಇತರೆ ದುರಸ್ಥಿ ಇದ್ದಲ್ಲಿ ಕೂಡಲೇ ಸರಿಪಡಿಸಲು ಕ್ರಮವಹಿಸುವಂತೆ ವಿಭಾಗದ ಕಾರ್ಯಪಾಲಕ ಅಭಿಯಂತರರು ಸಂಬಂಧಪಟ್ಟ ರಸ್ತೆಮೂಲಭೂತಸೌಕರ್ಯ/ಯೋಜನೆ – ಕೇಂದ್ರದ ವಿಭಾಗಕ್ಕೆ ಸೂಚಿಸಿ ದುರಸ್ಥಿಪಡಿಸಿರುವುದನ್ನು ದೃಢಿಕರಿಸಿಕೊಳ್ಳುವುದು.
ವಾರ್ಡ್ ಅಭಿಯಂತರರು ತಮ್ಮ ವಾರ್ಡ್ ವ್ಯಾಪ್ತಿಯಲ್ಲಿನ ಎಲ್ಲಾ ರಸ್ತೆಗಳ ರಸ್ತೆವಾರು ಮಾಹಿತಿಯನ್ನು ಸಂಗ್ರಹಸಿಡತಕ್ಕದ್ದು. ಇದರಲ್ಲಿ ವಾರ್ಡ್ ರಸ್ತೆಗಳನ್ನು ಸೇರಿದಂತೆ ರಸ್ತೆಮೂಲಭೂತಸೌಕರ್ಯ/ಯೋಜನೆ – ಕೇಂದ್ರ 1 ಅಥವಾ ಇತರೆ ವಿಭಾಗದಿಂದ ಅಭಿವೃದ್ಧಿಪಡಿಸಿರುವ/ದೋಷಮುಕ್ತ ಅವಧಿಯಲ್ಲಿರುವ/ಕಾಮಗಾರಿ ಪ್ರಗತಿಯಲ್ಲಿರುವ ರಸ್ತೆಭಾಗದ ವಿವರಗಳು ಇರತಕ್ಕದ್ದು. ತಮ್ಮ ವಾರ್ಡ್ ವ್ಯಾಪ್ತಿಯಲ್ಲಿ ರಸ್ತೆಗುಂಡಿಗಳನ್ನು ಆಗಿಂದ್ದಾಗೆ ಮುಚ್ಚಲು ಕ್ರಮವಹಿಸುವುದು.
ವಲಯ ಮಟ್ಟದಲ್ಲಿನ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಇತರೆ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಮಾಹಿತಿಗಳನ್ನು ವಿಭಾಗದ ಕಾರ್ಯಪಾಲಕ ಅಭಿಯಂತರವರಿಗೆ ನೀಡುವುದು. ತಮ್ಮ ವಾರ್ಡ್‍ಗಳ ವ್ಯಾಪ್ತಿಯಲ್ಲಿನ ರಸ್ತೆಗಳ ರಸ್ತೆಗುಂಡಿ ಮುಚ್ಚುವ ಕಾರ್ಯದ ಮೇಲುಸ್ತುವಾರಿ ವಹಿಸುವುದು. ಇದನ್ನೂ ಓದಿ: ಸಿದ್ಧಾರ್ಥ್ ಶುಕ್ಲಾ ಕುಸಿದ ವೀಡಿಯೋ ವೈರಲ್ – ಸತ್ಯ ಇಲ್ಲಿದೆ
ಕಾರ್ಯಪಾಲಕ ಅಭಿಯಂತರರು, ರಸ್ತೆಮೂಲಭೂತಸೌಕರ್ಯ-ಟಿ.ಇ.ಸಿ ವಿಭಾಗರವರು ವಲಯದ ಕಾರ್ಯಪಾಲಕ ಅಭಿಯಂತರರ ಬೇಡಿಕೆ ಅನುಸಾರ ಯಾವುದೇ ವಿಳಂಬಕ್ಕೆ ಆಸ್ಪದ ನೀಡದೇ ಡಾಂಬರು ಮಿಶ್ರಣವನ್ನು ಸರಬರಾಜು ಮಾಡುವುದು. ಡಾಂಬರು ಮಿಶ್ರಣ ತಯಾರಿಕಾ ಘಟಕದಿಂದ ಪ್ರತಿ ದಿನ ವಲಯವಾರು ಸರಬರಾಜು ಮಾಡಿರುವ ಡಾಂಬರು ಮಿಶ್ರಣದ ಪ್ರಮಾಣದ ಆಯಾ ವಲಯದ ಮುಖ್ಯ ಅಭಿಯಂತರರುಗಳಿಗೆ ಮಾಹಿತಿ ಸಲ್ಲಿಸುವುದು. ಇದನ್ನೂ ಓದಿ: ಹತ್ತಾರು ಎಕರೆ, ಮಾವಿನ ತೋಪು, ನಿರ್ಜನ ಪ್ರದೇಶ – ನೂರಾರು ಜನ… ಕೋಟಿ ಕೋಟಿ ವ್ಯವಹಾರ!
ವಲಯದ ಮುಖ್ಯ ಅಭಿಯಂತರರು ತಮ್ಮ ವಲಯ ವ್ಯಾಪ್ತಿಯಲ್ಲಿನ ರಸ್ತೆಗಳ ರಸ್ತೆಗುಂಡಿಗಳನ್ನು ಮುಚ್ಚುವ ಕಾರ್ಯದ ಸಂಪೂರ್ಣ ಮೇಲ್ವಿಚಾರಣೆ ವಹಿಸುವುದು. ವಿವಿಧ ವಿಭಾಗಗಳೊಂದಿಗೆ ಸಮನ್ವಯ ಕೊರತೆಯಾಗದಂತೆ ನಿಗಾವಹಿಸಿ ಅಗತ್ಯ ನೆರವು ನೀಡುವುದು. ಪ್ರತಿದಿನ ತಮ್ಮ ವಲಯ ವ್ಯಾಪ್ತಿಯಲ್ಲಿ ರಸ್ತೆಗುಂಡಿಗಳನ್ನು ಮುಚ್ಚಿರುವ ಬಗ್ಗೆ ವಿಭಾಗವಾರು ರಸ್ತೆಗಳ ವಿವರವನ್ನು ಕ್ರೂಢಿಕರಿಸಿ ತಮ್ಮ ವಲಯ ಆಯುಕ್ತರುಗಳಿಗೆ ಮಾಹಿತಿಯನ್ನು ಸಲ್ಲಿಸುವುದು.