ಬೀದರ್: ಜಿಲ್ಲೆಯ ಔರಾದ್ ತಾಲೂಕಿನ ಡಿಗ್ಗಿ ಗ್ರಾಮದ ಶಾಲೆಗೆ ಬರೋ ವಿದ್ಯಾರ್ಥಿಗಳ ಸಂಕಷ್ಟಕ್ಕೆ ಕೊನೆಗೂ ಪರಿಹಾರ ಸಿಕ್ಕಿದೆ. ಈ ಗ್ರಾಮದ ಶಾಲೆಗೆ ಬರೋ ಸುತ್ತಮುತ್ತಲಿನ ಊರಿನ ನೂರಾರು ವಿದ್ಯಾರ್ಥಿಗಳು ಬಸ್ ಸಿಗದೇ ಪರದಾಡುತ್ತಿದ್ದರು.
ಮಕ್ಕಳ ಪ್ರತಿದಿನ ಪರದಾಡೋದನ್ನು ನೋಡಿ ಪೋಷಕರು ಕೂಡ ಕಂಗಾಲಾಗಿದ್ದರು. ಈ ಬಗ್ಗೆ ನಿಮ್ಮ ಪಬ್ಲಿಕ್ ಟಿವಿ ಎಕ್ಸ್ ಕ್ಲೂಸಿವ್ ಸುದ್ದಿ ಪ್ರಸಾರ ಮಾಡಿತ್ತು. ಬಳಿಕ ಎಚ್ಚೆತ್ತ ಸಾರಿಗೆ ಇಲಾಖೆಯ ಅಧಿಕಾರಿಗಳು ದಿಡೀರನೆ ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರ ಸಮಸ್ಯೆ ಆಲಿಸಿ, ಬಸ್ ನಿಲ್ಲಿಸೊಕೆ ಸಿಬ್ಬಂದಿಗೆ ಡಿಪೋ ಮ್ಯಾನೇಜರ್ ಖಡಕ್ ಸೂಚನೆ ನೀಡಿದ್ದಾರೆ. ನಿಮ್ಮ ಪಬ್ಲಿಕ್ ಟಿವಿ ಸಾಮಾಜಿಕ ಕಳಕಳಿಯಿಂದ “ಬಸ್ ನಿಲ್ಲಿಸಿ ಪ್ಲೀಸ್” ಎಂಬ ಶೀರ್ಷಿಕೆಯಲ್ಲಿ ಮಾಡಿದ್ದ ಎಕ್ಸ್ ಕ್ಲೂಸಿವ್ ಸುದ್ದಿಗೆ ಕೊನೆಗೂ ವಿದ್ಯಾರ್ಥಿಗಳ ಕಣ್ಣೀರಿಗೆ ನ್ಯಾಯ ಸಿಕ್ಕಿದೆ.
Advertisement
ಸೋಮವಾರದಿಂದ ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಸಕಾಲಕ್ಕೆ ಬಸ್‍ನಲ್ಲಿ ಪ್ರಯಾಣ ಮಾಡಬಹುದಾಗಿದ್ದು ಕುಗ್ರಾಮದ ವಿದ್ಯಾರ್ಥಿಗಳಿಗೆ ನ್ಯಾಯ ಸಿಕ್ಕಂತ್ತಾಗಿದೆ. ಈಗಾಗಲೇ ನಾನು ಗ್ರಾಮಕ್ಕೆ ಭೇಟಿ ನೀಡಿದ್ದು ಬಸ್ ನಿಲ್ಲಿಸದೆ ಸಿಬ್ಬಂದಿ ನಿರ್ಲಕ್ಷ್ಯ ತೋರಿರುವುದು ಗಮನಕ್ಕೆ ಬಂದಿದೆ. ಈಗಿನಿಂದಲೇ ಬಸ್ ನಿಲ್ಲಿಸಲು ಕೆಎಸ್.ಆರ್.ಟಿಸಿ ಸಿಬ್ಬಂದಿಗೆ ಆದೇಶ ನೀಡಿದ್ದೇವೆ ಅಂತ ಔರಾದ್ ಡಿಪೋ ಮ್ಯಾನೇಜರ್ ಅಶೋಕ್ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
Advertisement
https://www.youtube.com/watch?v=aQxF7N7ovys
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv