ಬೆಂಗಳೂರು: ವಿದ್ಯುತ್ ಸಂಪರ್ಕವಿಲ್ಲದೇ ಕತ್ತಲಲ್ಲಿ ವಾಸಿಸುತ್ತಿದ್ದ 30 ಕುಟುಂಬಗಳಿಗೆ `ಪಬ್ಲಿಕ್ ಟಿವಿ’ (PUBLiC TV) ವರದಿಯಿಂದಾಗಿ ಬೆಳಕಿನ ಭಾಗ್ಯ ದೊರೆತಿದೆ.
ಒಂದು ವಾರದಿಂದ ವಿದ್ಯುತ್ ಸಂಪರ್ಕವಿಲ್ಲದೇ ಕತ್ತಲಲ್ಲಿ ವಾಸಿಸುತ್ತಿದ್ದ ಕುಟುಂಬಗಳ ಕುರಿತು `ಪಬ್ಲಿಕ್ ಟಿವಿ’ ವರದಿಯನ್ನು ಬಿತ್ತರಿಸಿತ್ತು. ವರದಿಯ ಬೆನ್ನಲ್ಲೇ ವಿದ್ಯುತ್ ಸಂಪರ್ಕ ಕಡಿತ ಮಾಡಿ ನಿರ್ಲಕ್ಷ್ಯ ತೋರಿದ್ದ ಸ್ಥಳೀಯ ಇಂಜಿನಿಯರ್‌ಗಳಿಗೆ ಮೇಲಾಧಿಕಾರಿಗಳು ಸಕತ್ ಕ್ಲಾಸ್ ತೆಗೆದುಕೊಂಡಿದ್ದಾರೆ.ಇದನ್ನೂ ಓದಿ: ನೆ ಮನೆಯಲ್ಲಿ ಮತ್ತೆ ಮುಸುಕಿನ ಗುದ್ದಾಟ – ಮದ್ದರೆಯಲು ಅಖಾಡಕ್ಕಿಳೀತಾರಾ ದೊಡ್ಡಗೌಡರು..?
Advertisement
Advertisement
ದಾಸರಹಳ್ಳಿ (Dasarahalli) ವಿಧಾನಸಭಾ ಕ್ಷೇತ್ರದ ಮಾರುತಿ ಮಾರ್ಕಂಡಯ್ಯ ಲೇಔಟ್‌ನ (Markandeya Layout) ಪಿಳ್ಳಪ್ಪನಕಟ್ಟೆ (Pillappana katte) ರಸ್ತೆಯಲ್ಲಿ ವಿದ್ಯುತ್ ಕಂಬವನ್ನ ತೆಗೆದು ಬೇರೆ ಕಡೆಗೆ ಶಿಫ್ಟ್ ಮಾಡಲಾಗಿತ್ತು. ಹೀಗಾಗಿ ಒಂದು ವಾರದಿಂದ ವಿದ್ಯುತ್ ಸಂಪರ್ಕವಿಲ್ಲದೇ ಜನರು ಕತ್ತಲಲ್ಲೇ ಜೀವನ ನಡೆಸುತ್ತಿದ್ದರು. ಈ ಕುರಿತು `ಪಬ್ಲಿಕ್ ಟಿವಿ’ ಎರಡು ದಿನದ ಹಿಂದೆ ವರದಿ ಪ್ರಸಾರ ಮಾಡಿತ್ತು. ವರದಿಯ ಬಳಿಕ ಎಚ್ಚೆತ್ತ ಬೆಸ್ಕಾಂ ಅಧಿಕಾರಿಗಳು, ಕೂಡಲೇ ಸ್ಥಳಾಂತರ ಮಾಡಿದ್ದ ಕಂಬವನ್ನು ತಂದು, ಅದೇ ಜಾಗದಲ್ಲಿ ಅಳವಡಿಸಿ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಕೊಟ್ಟಿದ್ದಾರೆ.
Advertisement
Advertisement
ಖಾಸಗಿ ವ್ಯಕ್ತಿಯೊಬ್ಬರು ನಮ್ಮ ಜಾಗದಲ್ಲಿ ವಿದ್ಯುತ್ ಕಂಬವಿದೆ ಎಂದು ಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ಆದೇಶದ ಪ್ರತಿ ಮೇರೆಗೆ ಬೆಸ್ಕಾಂ ಅಧಿಕಾರಿಗಳು, ವಿದ್ಯುತ್ ಕಂಬವನ್ನು ಸ್ಥಳಾಂತರ ಮಾಡಿದ್ದರು. ಸ್ಥಳಾಂತರ ಮಾಡಿ ಒಂದು ವಾರವಾದರೂ ಮನೆಗಳಿಗೆ ವಿದ್ಯುತ್ ಸಂಪರ್ಕವನ್ನು ನೀಡದೇ ನಿರ್ಲಕ್ಷ್ಯ ತೋರಿದ್ದರು.
ಸದ್ಯ ಪಿಳ್ಳಪ್ಪನಕಟ್ಟೆ ಏರಿಯಾದ ಜನರಿಗೆ ಬೆಳಕಿನ ಭಾಗ್ಯ ಸಿಕ್ಕಿದ್ದು, `ಪಬ್ಲಿಕ್ ಟಿವಿ’ಯ ಸಾಮಾಜಿಕ ಕಳಕಳಿಯ ವರದಿಗೆ ಸ್ಥಳೀಯರು ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ರಾತ್ರಿ ಸಮಯದಲ್ಲಿ ಕ್ರಿಮಿಕೀಟಗಳ ಭಯದಲ್ಲಿ ಓಡಾಡುತ್ತಿದ್ದ ಏರಿಯಾದ ಜನ ಇದೀದ ಬೀದಿ ದೀಪಗಳು ಇರುವುದರಿಂದ ನಿರಾತಂಕವಾಗಿ ಓಡಾಡುತ್ತಿದ್ದಾರೆ. ಇದಕ್ಕೆ ಕಾರಣವಾದ ಪಬ್ಲಿಕ್ ಟಿವಿಗೆ ಧನ್ಯವಾದ ಹೇಳಿದ್ದಾರೆ.ಇದನ್ನೂ ಓದಿ: ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ – ಅದಾನಿ ಹಗರಣ, ವಕ್ಫ್, ಮಣಿಪುರ ಗದ್ದಲ ಅಸ್ತ್ರ ಪ್ರಯೋಗ