Districts
ಎಚ್‍ಆರ್ ರಂಗನಾಥ್‍ಗೆ ಪಿತೃ ವಿಯೋಗ

ಮೈಸೂರು: ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್. ರಂಗನಾಥ್ ಅವರ ತಂದೆ ಎಚ್.ಕೆ. ರಾಮಕೃಷ್ಣಯ್ಯ (92) ಶುಕ್ರವಾರ ಸಂಜೆ ನಿಧನರಾಗಿದ್ದಾರೆ.
ಮೈಸೂರಿನ ವಿಜಯನಗರದ ರೈಲ್ವೆ ಲೇ ಔಟ್‍ನ ಎರಡನೇ ಮೇನ್‍ನಲ್ಲಿರುವ ನಿವಾಸದಲ್ಲಿ ರಾಮಕೃಷ್ಣಯ್ಯ ನಿಧನರಾಗಿದ್ದಾರೆ.
ರೈಲ್ವೇ ಇಲಾಖೆಯ ನಿವೃತ್ತ ನೌಕರರಾಗಿದ್ದ ರಾಮಕೃಷ್ಣಯ್ಯ ಪತ್ನಿ ಲೀಲಾ ಹಾಗೂ ನಾಲ್ಕು ಹೆಣ್ಣು, ಮೂರು ಗಂಡು ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಶನಿವಾರ ಬೆಳಗ್ಗೆ 11 ಗಂಟೆಗೆ ಗೋಕುಲಂ ನಲ್ಲಿರುವ ಸ್ಮಶಾನದಲ್ಲಿ ನಡೆಯಲಿದೆ.
