ʻಪಬ್ಲಿಕ್‌ ಟಿವಿʼ 12ನೇ ವರ್ಷದ ಗಣೇಶೋತ್ಸವಕ್ಕೆ ಅದ್ಧೂರಿ ತೆರೆ – ಜೆಪಿ ಪಾರ್ಕ್‌ ಕೆರೆಯಲ್ಲಿ ಗಣೇಶ ವಿಸರ್ಜನೆ

Public TV
1 Min Read
Public TV Ganesha 4

ಬೆಂಗಳೂರು: ಕನ್ನಡದ ಸುದ್ದಿವಾಹಿನಿ ʻಪಬ್ಲಿಕ್‌ ಟಿವಿʼ (Public TV) ಕಚೇರಿಯಲ್ಲಿ 12ನೇ ವರ್ಷದ ಗಣೇಶೋತ್ಸವಕ್ಕೆ ಅದ್ಧೂರಿ ತೆರೆ ಎಳೆಯಲಾಯಿತು. ಸೋಮವಾರ ಸಂಜೆ ನಗರದ ಜೆ.ಪಿ ಪಾರ್ಕ್‌ ಕೆರೆಯಲ್ಲಿ ಗಣೇಶ ಮೂರ್ತಿ (Ganesha Idol) ವಿಸರ್ಜನೆ ಮಾಡಲಾಯಿತು.

Public TV Ganesha

ʻಪಬ್ಲಿಕ್ ಟಿವಿʼಯಲ್ಲಿ ಸತತವಾಗಿ 12 ವರ್ಷಗಳಿಂದ ಅದ್ಧೂರಿ ಗಣೇಶೋತ್ಸವ ಆಚರಿಸಲಾಗುತ್ತಿದೆ. ಅದರಂತೆ ಈ ಬಾರಿಯೂ 12 ನೇ ವರ್ಷದ ಗಣೇಶೋತ್ಸವ ಅದ್ಧೂರಿಯಾಗಿ ಆಚರಿಸಲಾಯಿತು. `ಕೈಲಾಸದಲ್ಲಿ ಗಣಪ’ ಈ ಬಾರಿಯ ವಿಶೇಷವಾಗಿತ್ತು. ಸಹೋದ್ಯೋಗಿಗಳು ಹಾಡು, ಕುಣಿತ ಪ್ರದರ್ಶಿಸುವ ಮೂಲಕ ಮೆರವಣಿಗೆಯೊಂದಿಗೆ ಕೊಂಡೊಯ್ದು ಗಣೇಶಮೂರ್ತಿಯನ್ನು ಜೆ.ಪಿ ಪಾರ್ಕ್‌ ಕೆರೆಯಲ್ಲಿ ವಿಸರ್ಜನೆ ಮಾಡಲಾಯಿತು. ಇದನ್ನೂ ಓದಿ: ಆಪರೇಷನ್ ಕಮಲ ಸಕ್ಸಸ್ – ಚಾಮರಾಜನಗರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಬಿಜೆಪಿ ಪಾಲು

Public TV Ganesha 3

ಕಳೆದ ಮೂರು ದಿನಗಳಿಂದಲೂ ಬೆಳಗ್ಗೆ ಮತ್ತು ಸಂಜೆ ಗಣೇಶ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಇದೇ ವೇಳೆ ಸಹೋದ್ಯೋಗಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು. ಸೋಮವಾರ ಮಧ್ಯಾಹ್ನ ಸಹೋದ್ಯೋಗಿಗಳಿಗೆ ವಿಶೇಷ ಭೋಜನ ಕೂಟವನ್ನು ಏರ್ಪಡಿಸಲಾಗಿತ್ತು. ಸಂಜೆ ಪೂಜೆ ನೆರವೇರಿಸಿದ ಬಳಿಕ ಪ್ರಸಾದ ವಿತರಣೆ ಮಾಡಿ, ಬಳಿಕ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು. ಬಳಿಕ ಸಾರ್ವಜನಿಕರಿಗೆ ಪ್ರಸಾದ ವಿತರಣೆ ಮಾಡಲಾಯಿತು. ಇದನ್ನೂ ಓದಿ: ಕ್ಯಾನ್ಸರ್ ಔಷಧಿಗಳ ಮೇಲಿನ ಜಿಎಸ್‌ಟಿ ದರ ಕಡಿತ

Public TV Ganesha 5

ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್, ಸಿಇಒ ಅರುಣ್‌ಕುಮಾರ್‌, ಸಂಪಾದಕರಾದ ಸಿ.ದಿವಾಕರ್ ಸೇರಿದಂತೆ ಪಬ್ಲಿಕ್ ಟಿವಿಯ ಎಲ್ಲಾ ಸಿಬ್ಬಂದಿ ಗಣೇಶೋತ್ಸವದಲ್ಲಿ ಪಾಲ್ಗೊಂಡಿದ್ದರು. ಇದನ್ನೂ ಓದಿ: 60 ಲಕ್ಷ ಬಿಪಿಎಲ್‌ ಕಾರ್ಡ್‌ ರದ್ದು ಮಾಡಲು ರಾಜ್ಯ ಸರ್ಕಾರ ತಯಾರಿ: ಆರ್‌. ಅಶೋಕ್‌ ಬಾಂಬ್‌

Share This Article