ಬೆಂಗಳೂರು: ಒಂದನೇ ವರ್ಷದ ಆಹಾರ ಮೇಳ ಯಶಸ್ವಿಯಾದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಎರಡನೇ ವರ್ಷದ ಆಹಾರ ಮೇಳವನ್ನು ಆಯೋಜಿಸುತ್ತಿದೆ.
ಜನವರಿ 25 ಮತ್ತು 26ರಂದು ಆಹಾರ ಮೇಳವನ್ನು ಆಯೋಜಿಸಲಾಗಿದೆ. ಆಹಾರ ಮೇಳ ಮಲ್ಲೇಶ್ವರಂ ಮೈದಾನದ ಮುಂಭಾಗದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿದ್ದು, ಒಂದೇ ಸೂರಿನಡಿಯಲ್ಲಿ 30ಕ್ಕೂ ಹೆಚ್ಚು ಆಹಾರ ಮಳಿಗೆಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಈ ವಿಶೇಷ ಆಹಾರ ಮೇಳದಲ್ಲಿ ಕರ್ನಾಟಕ ಹಾಗೂ ಭಾರತದ ಇತರೇ ರಾಜ್ಯಗಳ ಪ್ರಸಿದ್ಧ ಖಾದ್ಯಗಳನ್ನು ಪ್ರದರ್ಶಿಸಲಾಗುತ್ತಿದೆ.
Advertisement
Advertisement
ಈ ಮೇಳಕ್ಕೆ ಆಗಮಿಸುವ ಸಾರ್ವಜನಿಕರಿಗೆ ಸ್ಥಳದಲ್ಲಿಯೇ ಇಷ್ಟವಾಗುವ ಆಹಾರಗಳನ್ನು ತಯಾರಿಸಿ ಸರ್ವ್ ಮಾಡಲು ವ್ಯವಸ್ಥೆ ಮಾಡಲಾಗಿದೆ. ಸಸ್ಯಾಹಾರ ಹಾಗೂ ಮಾಂಸಾಹಾರ ಎರಡು ರೀತಿಯ ಅಡುಗೆ ರುಚಿಯನ್ನು ಸ್ಥಳದಲ್ಲಿಯೇ ಸವಿಯಬಹುದು. ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಬೆಳಗ್ಗೆ 10:30 ರಿಂದ ರಾತ್ರಿ 9 ಗಂಟೆಯವರೆಗೆ ಈ ಆಹಾರ ಮೇಳಕ್ಕೆ ಭೇಟಿ ನೀಡಬಹುದು. ಆಹಾರ ಮೇಳ ಅಂಗವಾಗಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಇದರ ಜೊತೆಯಲ್ಲಿ ಜ.25 ರಂದು ಮಹಿಳೆಯರಿಗೆ ಪಾನಿಪುರಿ, ಜ.26 ರಂದು ಪುರುಷರಿಗೆ ಇಡ್ಲಿ ತಿನ್ನುವ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಉಚಿತ ಪ್ರವೇಶ ಇರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಹುಮಾನ ಮತ್ತು ಗಿಫ್ಟ್ ಹ್ಯಾಂಪರ್ ಗಳನ್ನು ಗೆಲ್ಲಬಹುದಾಗಿದೆ.
Advertisement
ಆಹಾರ ಮೇಳದಲ್ಲಿ ಏನಿರಲಿದೆ?
* 30 ಕ್ಕೂ ಹೆಚ್ಚು ಮಳಿಗೆಗಳಲ್ಲಿ ವಿವಿಧ ಆಹಾರಗಳ ಪ್ರದರ್ಶನ
* ಕರ್ನಾಟಕ ಹಾಗೂ ಭಾರತದ ಇತರೇ ರಾಜ್ಯಗಳ ಪ್ರಸಿದ್ಧ ಖಾದ್ಯಗಳ ಪ್ರದರ್ಶನ
* ಸ್ಥಳದಲ್ಲೇ ಸಸ್ಯಾಹಾರಿ ಮತ್ತು ಮಾಂಸಾಹಾರಿ ಖಾದ್ಯದ ಲೈವ್ ಕೌಂಟರ್
* ಪ್ರತಿ 30 ನಿಮಿಷಕ್ಕೆ ನೋಂದಾಯಿತ ಗ್ರಾಹಕರಿಗೆ ಲಕ್ಕಿ ಡ್ರಾ ಮೂಲಕ ಸಿಗಲಿದೆ ಗಿಫ್ಟ್
Advertisement
ರಂಗೋಲಿ ಸ್ಪರ್ಧೆ:
* ರಂಗೋಲಿ ಸ್ಪರ್ಧೆ ಮಲ್ಲೇಶ್ವರದ 6ನೇ ಕ್ರಾಸ್‍ನಲ್ಲಿ ಜನವರಿ 25 ಶನಿವಾರ ಬೆಳಗ್ಗೆ 8 ಗಂಟೆಗೆ ನಡೆಯಲಿದೆ
* ಸ್ಪರ್ಧೆಯಲ್ಲಿ ಭಾಗವಹಿಸುವವರು 96209 40365 ನಂಬರಿಗೆ ಎಸ್‍ಎಂಎಸ್ ಅಥವಾ ವಾಟ್ಸಪ್ ಮೆಸೇಜ್ ಮಾಡಿ ಹೆಸರು ನೋಂದಾಯಿಸಬೇಕು
* ಮೊದಲು ಹೆಸರು ನೋಂದಾಯಿಸಿದವರಿಗೆ ಮತ್ತು 100 ಮಂದಿಗೆ ಮಾತ್ರ ಸ್ಪರ್ಧಿಸಲು ಅವಕಾಶ
* ವಿಜೇತರಾದವರಿಗೆ ಸಿಗಲಿದೆ ಬಹುಮಾನ
ರಂಗೋಲಿ ಸ್ಪರ್ಧೆಯ ನಿಯಮಗಳು:
* ಮಹಿಳೆಯರಿಗೆ ಮಾತ್ರ ಅವಕಾಶ
* 120 ನಿಮಿಷದಲ್ಲಿ ರಂಗೋಲಿ ಬಿಡಿಸಬೇಕು
* ಸ್ಪರ್ಧೆಗೆ ಹೆಸರು ನೋಂದಾಯಿಸಿದವರು ಬೆಳಗ್ಗೆ 7.30ಕ್ಕೆ ಸ್ಥಳದಲ್ಲಿ ಹಾಜರಿರಬೇಕು
* ನಾವು ರಂಗೋಲಿ ಪುಡಿಯನ್ನು ಮಾತ್ರ ನೀಡುತ್ತೇವೆ
* ಗಣರಾಜ್ಯೋತ್ಸವಕ್ಕೆ ಸಂಬಂಧಿಸಿದ ವಿಷಯವನ್ನು ರಂಗೋಲಿಯಲ್ಲಿ ಬಿಡಿಸಬೇಕು
* ಸ್ಪರ್ಧೆಯಲ್ಲಿ ಭಾಗವಹಿಸುವರು ತಾವೇ ತಮಗೆ ಬೇಕಾದ ವಸ್ತುಗಳನ್ನು ತರಬೇಕು ಮತ್ತು ಒಂದೇ ಮಾದರಿಯನ್ನು ಬಳಸಬೇಕು. ಬಣ್ಣಗಳು/ ಪುಷ್ಪ ದಳಗಳು/ ಪುಡಿ/ ಧಾನ್ಯಗಳು/ ಅಕ್ಕಿ ಇತ್ಯಾದಿಗಳ ಪೈಕಿ ಒಂದು ವಸ್ತುವನ್ನು ಮಾತ್ರ ಬಳಸಿ ರಂಗೋಲಿ ಹಾಕಬೇಕು
* ಸಂಘಟಕರು ನೀಡುವ ಸ್ಥಳದಲ್ಲಿ ಸ್ಪರ್ಧಿಗಳು ರಂಗೋಲಿಯನ್ನು ಸಿದ್ಧ ಪಡಿಸಬೇಕು
* ಕೊರೆಯಚ್ಚನ್ನು ಬಳಸುವಂತಿಲ್ಲ
* ಒಬ್ಬರಿಗೆ ಮಾತ್ರ ಅವಕಾಶ
* ಸ್ಪರ್ಧೆ ಒಂದೇ ಸುತ್ತಿನಲ್ಲಿ ಮುಗಿಯಲಿದೆ
* ಸ್ಪರ್ಧಿಗಳು ರಂಗೋಲಿ ಬಿಡಿಸಲು ಯಾವುದೇ ಮುದ್ರಿತ ವಸ್ತುಗಳನ್ನು ಬಳಸುವಂತಿಲ್ಲ
* ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ
ರಂಗೋಲಿ ಸ್ಪರ್ಧೆಯಲ್ಲಿ ಭಾಗವಹಿಸುವವರು ಎಸ್‍ಎಂಎಸ್ ಅಥವಾ ವಾಟ್ಸಪ್ ಮೂಲಕ 96209 40365 ಮಸೇಜ್ ಕಳುಹಿಸಿ ಹೆಸರು ನೋಂದಾಯಿಸಬೇಕು.