ಬೆಂಗಳೂರು: ಸಚಿವ ಕೆ.ಎನ್ ರಾಜಣ್ಣ ಪುತ್ರನೂ ಆಗಿರುವ ಎಂಎಲ್‌ಸಿ ರಾಜೇಂದ್ರ (Rajendra Rajanna) ಹತ್ಯೆಗೆ ಸುಪಾರಿ ನೀಡಿದ್ದ ಪ್ರಕರಣದ ತನಿಖೆಯನ್ನು ಪೊಲೀಸರು (Tumakuru Police) ಚುರುಕುಗೊಳಿಸಿದ್ದಾರೆ. ಈ ನಡುವೆಯೇ ಸುಪಾರಿಗೆ ಸಂಚು ರೂಪಿಸಿದ್ದ ಸ್ಫೋಟಕ ಆಡಿಯೋ ʻಪಬ್ಲಿಕ್ ಟಿವಿʼಗೆ ಲಭ್ಯವಾಗಿದೆ.
ರಾಜೇಂದ್ರ ರಾಜಣ್ಣ ಅವರು, ತುಮಕೂರು ಎಸ್ಪಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿ ಪೆನ್‌ಡ್ರೈವ್‌ನಲ್ಲಿ ನೀಡಿದ್ದ ಆಡಿಯೋ ಈಗ ʻಪಬ್ಲಿಕ್ ಟಿವಿʼಗೆ ಲಭ್ಯವಾಗಿದೆ. ಈ ಆಡಿಯೋದಲ್ಲಿ ಸುಪಾರಿ ಸಂಚಿನ ಇಂಚಿಂಚೂ ಮಾಹಿತಿ ಬಯಲಾಗಿದೆ. ತನ್ನ ಹತ್ಯೆಗೆ ಸುಪಾರಿ ನೀಡಿದ್ದ ವಿಚಾರ ರಾಜೇಂದ್ರ ರಾಜಣ್ಣ ಅವರಿಗೆ ತಿಳಿದಿದ್ದು ಸಹ ಇದೇ ಆಡಿಯೋದಿಂದ ಅನ್ನೋದು ಗೊತ್ತಾಗಿದೆ. ಇದನ್ನೂ ಓದಿ: ಸಚಿವ ರಾಜಣ್ಣ ಪುತ್ರನ ಹತ್ಯೆಗೆ ಯತ್ನ ಕೇಸ್ – 18 ನಿಮಿಷಗಳ ಸುಪಾರಿ ಆಡಿಯೋ FSLಗೆ
ಇದೇ ಆಡಿಯೋ ಆಧರಿಸಿ ರಾಜೇಂದ್ರ ಅವರು ದೂರು ದಾಖಲಿಸಿದ್ದಾರೆ. ಕಳೆದ ಡಿಸೆಂಬರ್‌ನಲ್ಲಿ ಪುಷ್ಪಾ ಹಾಗೂ ರಾಕಿ ಎನ್ನುವವರ ನಡುವೆ ಸಂಭಾಷಣೆ ನಡೆದಿತ್ತು. ಈ ಆಡಿಯೋನಲ್ಲಿ ಪ್ರಕರಣದ ಎ1 ಆರೋಪಿ ಸೋಮನ ಪ್ಲ್ಯಾನ್ ಬಗ್ಗೆ ಪುಷ್ಪಾ ಎನ್ನುವ ಮಹಿಳೆ ಇಂಚಿಂಚೂ ಮಾಹಿತಿಯನ್ನ ಬಿಚ್ಚಿಟ್ಟಿದ್ದಾಳೆ. ಇದನ್ನೂ ಓದಿ: ನನ್ನ ಕೊಲೆಗೆ 70 ಲಕ್ಷ ಸುಪಾರಿ ಕೊಡಲಾಗಿದೆ – ತುಮಕೂರು ಎಸ್ಪಿಗೆ ಸಚಿವ ರಾಜಣ್ಣ ಪುತ್ರ ದೂರು
ಆರೋಪಿ ಸೋಮ ರಾಜೇಂದ್ರರನ್ನ ಹತ್ಯೆ ಮಾಡಲು ಸುಪಾರಿ ಪಡೆದಿರುವುದಾಗಿ ಪುಷ್ಪಾಳ ಬಳಿ ಹೇಳಿಕೊಂಡಿದ್ದಾನೆ. ಆ ಬಳಿಕವೇ ಪುಷ್ಪಾ ಸುಪಾರಿ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕಿದ್ದಳು. ಸೋಮನ ಜೊತೆಗಿದ್ದುಕೊಂಡೇ ಕೊಲೆ ಸಂಚಿನ ಮಾಹಿತಿ ಕಲೆಹಾಕಿದ್ದಳು, ಬಳಿಕ ಈ ವಿಚಾರವನ್ನ ರಾಜೇಂದ್ರ ಅವರಿಗೆ ತಿಳಿಸಲು ಪುಷ್ಪಾ ಮುಂದಾಗಿದ್ದಾಳೆ. ರಾಜೇಂದ್ರ ಅವರಿಗೆ ವಿಷಯ ತಿಳಿಸಲು ರಾಕಿ ಎನ್ನುವ ಹುಡುಗನ್ನ ಬಳಸಿಕೊಂಡಿದ್ದಾಳೆ. ಅದಕ್ಕಾಗಿ ಕೊಲೆ ಸಂಚಿನ ಬಗ್ಗೆ ಪುಷ್ಪ ಹೇಳಿದ್ದನ್ನ ರಾಕಿ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ. ಬಳಿಕ ರಾಜೇಂದ್ರ ಅವರಿಗೆ ಈ ಆಡಿಯೋವನ್ನ ತಲುಪಸಿಲಾಗಿತ್ತು. ಆಡಿಯೋ ಕೇಳಿದ ಎಂಎಲ್‌ಸಿ ಶಾಕ್ ಆಗಿದರು, ಕೂಡಲೇ ಅಲರ್ಟ್ ಆದರು. ಬಳಿಕ ತುಮಕೂರು ಎಸ್ಪಿ ಬಳಿ ದೂರು ದಾಖಲಿಸಿದ್ದಾರೆ.
ಸದ್ಯ ಆಡಿಯೋ ಪಡೆದುಕೊಂಡಿರುವ ಪೊಲೀಸರು ಅದನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ. ಆರೋಪಿ ಸೋಮ, ಭರತ್, ಅಮಿತ್, ಗುಂಡಾ, ಯತೀಶ್ ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ತುಮಕೂರು ಜಿಲ್ಲಾ ಕಾಂಗ್ರೆಸ್‌ನಲ್ಲಿ ಶೀತಲ ಸಮರ; ಡಾ.ರಂಗನಾಥ್-ರಾಜಣ್ಣ ಕುಟುಂಬ ನಡುವೆ ವಾರ್
ಸ್ಫೋಟಕ ಮಾಹಿತಿ ನೀಡಿದ ಪುಷ್ಪಾ:
ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸುಪಾರಿ ನೀಡಿದ ವಿಚಾರದ ಬಗ್ಗೆ ಆಡಿಯೋನಲ್ಲಿ ಕೇಳಿಬಂದಿರುವ ಪುಷ್ಪಾ ಎಂಬ ಮಹಿಳೆ ಸ್ಪೋಟಕ ಮಾಹಿತಿ ಹಂಚಿಕೊಂಡಿರುವುದು ಬಯಲಾಗಿದೆ. ಕಳೆದ ನವೆಂಬರ್‌ನಲ್ಲಿ ರಾಜೇಂದ್ರ ಅವರ ಮಗಳ ಬರ್ತ್‌ಡೇ ಡೆಕೋರೇಷನ್‌ಗೆ ಜೈಪುರದ ಇಬ್ಬರು ಹುಡುಗರು ಬಂದಿದ್ದರು. ಆ ಇಬ್ಬರನ್ನೂ ಸೋಮ ಕಳುಹಿಸಿದ್ದ, ಆಗಲೇ ಹತ್ಯೆಗೆ ಯತ್ನ ನಡೆದಿತ್ತು ಅಂತ ಆಡಿಯೋನಲ್ಲಿ ಪುಷ್ಪಾ ಮಾಹಿತಿ ನೀಡಿದ್ದಾಳೆ. ಅಲ್ಲದೇ ಸೋಮನಿಗೆ 5 ಲಕ್ಷ ಹಣ ಬಂದಿರೋದು ಸತ್ಯ ಸತ್ಯ ಸತ್ಯ. ಪೊಲೀಸರು ಕರೆದುಕೊಂಡು ಹೋಗಿ ವಿಚಾರಣೆ ಮಾಡಿದ್ರೆ ಎಲ್ಲಾ ಗೊತ್ತಾಗುತ್ತೆ. ರಾಜೆಂದ್ರ ಅವ್ರ ಮುಂದೆ ನಾನೇ ಹೇಳ್ತೀನಿ, ನನ್ನ ಕರೆದುಕೊಂಡು ಹೋಗು ಅಂತ ರಾಕಿ ಎನ್ನುವವನೊಂದಿಗೆ ಪುಷ್ಪಾ ಹೇಳಿಕೊಂಡಿದ್ದಾಳೆ. ಜೊತೆಗೆ ಜೈಪುರದ ಮತ್ತೋರ್ವ ರೌಡಿಶೀಟರ್ ಪ್ರಸಿಯನ್ನೂ ಮರ್ಡರ್ ಮಾಡೋದಾಗಿ ಸೋಮ ಹೇಳಿದ್ದಾನೆ. ಅದಕ್ಕಾಗಿ ಬೆಂಗಳೂರಿನ ಕಲಾಸಿಪಾಳ್ಯದಿಂದ ಇಬ್ಬರು ತಮಿಳು ಹುಡುಗರನ್ನ ಸೋಮ ಕರೆಸಿಕೊಳ್ತಿದ್ದಾನೆ. ಜೈಲಿನಲ್ಲಿರುವ ಸ್ಟೀಫನ್ ಗುಂಡನನ್ನ ಪೆರೋಲ್ ಮೇಲೆ ಕರೆದುಕೊಂಡು ಬರಲು ಸೋಮ ಪ್ಲಾನ್ ಮಾಡಿದ್ದಾನೆ. ಅವನನ್ನ ಕರೆಸಿ ನೆಟ್‌ವರ್ಕ್ ಇಲ್ದೇ ಇರೋ ಜಾಗದಲ್ಲಿ ಇಡೋಕೆ ಮನೆ ಮಾಡ್ತಿದ್ದಾನೆ ಈ ಬಗ್ಗೆಯೂ ಆಡಿಯೋನಲ್ಲಿ ಪುಷ್ಪಾ ಎನ್ನುವ ಮಹಿಳೆ ಮಾಹಿತಿ ನೀಡಿದ್ದಾಳೆ. ಇದನ್ನೂ ಓದಿ: ಹನಿಟ್ರ್ಯಾಪ್ ಮಾಡಲು ಬಂದವರಿಗೆ ಕಪಾಳಕ್ಕೆ ಹೊಡೆದಿದ್ದು ನಿಜ – ವಿಷ ಕನ್ಯೆಯರ ರಹಸ್ಯ ಹೇಳಿದ ರಾಜಣ್ಣ
ಆಡಿಯೋ ಸಂಭಾಷಣೆಯಲ್ಲಿ ರಹಸ್ಯ ಸ್ಫೋಟ
ಪುಷ್ಪಾ: ಅಣ್ಣ ಏನಂತು..?
ರಾಕಿ: ಏನ್ ವಿಷಯ ಹೇಳಬೇಕು.. ಎತ್ತಾ ಅಂತಾ..
ಪುಷ್ಪಾ: ಸೋಮ ಈ ರೀತಿ ಎಲ್ಲಾ ಮಾಡ್ತಿದ್ದಾನೆ ಸಾರ್.. ಕಿವಿಗೆ ಬಿದ್ದಂತೆ.. ಆ ಹುಡುಗಿನೇ ಬಂದು ಹೇಳ್ತಾಳೆ ಸರ್.. ನಂಬಿಕೆ ಇಲ್ಲಾ ಅಂದ್ರೆ, ಅವಳ ಕಿವಿಗೆ ಬಿದ್ದಿರೋದನ್ನು ಹೇಳ್ತಾಳೆ ಸರ್ ಅನ್ನಿ.. ಸುಳ್ಳು ಪಳ್ಳು ಹೇಳಲ್ಲ… ಅವಳು ಇರೋದನ್ನು ಹೇಳ್ತಾಳೆ.. ಚಿಕ್ಕವರಿಂದ ನೋಡಿದ್ದೀವಿ ಹೇಳಿ ಅಂತಾ ಹೇಳಿ… ನಮಗೇನು ಆಗಬೇಕಿಲ್ಲ… ನಮಗೇನು ಆಸ್ತಿನೂ ಇದೆ… ಆ ವಯ್ಯಗೆ ಬಂದು ಹೇಳಿದ್ರೆ, ನಮಗೇನು ಕೊಡಲ್ಲ.. ಒಟ್ನಲ್ಲಿ ಈ ತರ ಮಾತನಾಡ್ಕೊಂಡಿರೋದು ಸತ್ಯ… ಅವನ ಮೇಲೆ ಒಂದು ಕಣ್ಣಿಡಿ ಸರ್.. ಪೊಲೀಸ್ ಅವರಿಗೆ ಹೇಳಿ.. ಅದರ ಮೇಲೆ ಅವನಿಷ್ಟ..
ರಾಕಿ: ಅಡ್ವಾನ್ಸ್ ಬಂದಿರೋದು ನಿಜಾನಾ..?
ಪುಷ್ಪಾ: ಹೌದು ನಮ್ಮ ಅಮ್ಮನ ಮೇಲೆ ಆಣೆ ಬಂದಿದೆ.. 5 ಲಕ್ಷ ಎಲ್ಲಿಂದ ಬಂತು ಅಂತಾ ತನಿಖೆ ಆಗಲಿ..
ಪುಷ್ಪಾ: ಅಮಿತ್ ಮಾತ್ರ ಇರೋದು… ಎಲ್ಲಾ ಗೊತ್ತು, ಈ ನನ್ಮಂಗನ್ನ ಎತ್ತಾಕ್ಕೊಂಡು ಹೋದ್ರೆ ಎಲ್ಲಾ ಬಾಯಿ ಬಿಡ್ತಾನೆ…
ರಾಕಿ: ಅವನು ಬಾಯಿ ಬಿಡಲ್ಲ..
ಪುಷ್ಪಾ: ಅವನ ಜೀವ ಹೋದ್ರೂ ಅವನು ಬಾಯಿ ಬಿಡಲ್ಲ. ಅದಂತೂ ಸತ್ಯ.. ಅವನಿಗೆ ಎಲ್ಲಾ ಗೊತ್ತು… ಅವನ ಬಾಸ್‌ಗೋಸ್ಕರ ಜೈಲಿಗೋದ್ರೂ ಇದ್ದುಬಿಡ್ತಿನಿ ಅಂತಾನೆ… ಇವನನ್ನು ಎತ್ತಿ ಬಿಟ್ಟರೆ, ನಮ್ಮ ಬಾಸ್ ಜೈಪುರದಲ್ಲಿ ದೊಡ್ಡವರು ಅಂದವ್ನೆ.. ಇದನ್ನು ನಾನು ಅಣ್ಣಂಗೆ ಹೇಳೇ ಹೇಳ್ತಿನಿ… ಹಿಂಗೇ ಅಂದ ಅಣ್ಣ ಅಂತಾ ಹೇಳ್ತಿನಿ ನಾನು.. ಇವರ ಮುಂದೆ ಕರೆದುಕೊಂಡು ಹೋಗಪ್ಪಾ ನಿಂಗ್ಯಾಕೆ ನಾನು ಹೇಳೇ ಹೇಳ್ತಿನಿ…