ಬೆಂಗಳೂರು: ನಮ್ಮ ಕ್ಲಿನಿಕ್‌ಗಳಲ್ಲಿ (Namma Clinic) ಆರೋಗ್ಯ ಸೇವೆ ಸಿಗದೇ ಜನ ಪರದಾಡ್ತಿದ್ದಾರೆ. ಮೂರು ತಿಂಗಳಿಂದ ಔಷಧಿನೂ ಇಲ್ಲ. ಲ್ಯಾಬ್ ಟೆಸ್ಟೂ ಮಾಡಂಗಿಲ್ಲ.. ʻಪಬ್ಲಿಕ್ ಟಿವಿʼ ನಡೆಸಿದ ರಿಯಾಲಿಟಿ ಚೆಕ್‌ನಲ್ಲಿ ನಮ್ಮ ಕ್ಲಿನಿಕ್‌ಗಳ ಅವ್ಯವಸ್ಥೆ ಬಯಲಾಗಿದೆ.
ನಮ್ಮ ಕ್ಲಿನಿಕ್‌ಗಳು ಬಡವರ ಪಾಲಿನ ಸಂಜೀವಿನಿ. ಉಚಿತವಾಗಿ ಆರೋಗ್ಯ ಸೇವೆ ಕೊಡುವ ನಮ್ಮ ಕ್ಲಿನಿಕ್ ಗಳು ಅದೆಷ್ಟೋ ಬಡ ರೋಗಿಗಳಿಗೆ ಆಸರೆಯಾದ ಆಸ್ಪತ್ರೆಗಳು (Hospitals). ಆದ್ರೆ ಇದೀಗಾ ಸರ್ಕಾರದ ನಿರ್ಲಕ್ಷ್ಯಕ್ಕೆ ನಮ್ಮ ಕ್ಲಿನಿಕ್‌ಗಳಲ್ಲಿ ಅವ್ಯವಸ್ಥೆ ಶುರುವಾಗಿದೆ. ಇದನ್ನೂ ಓದಿ: ಡೇಟಿಂಗ್ ಸುದ್ದಿ ನಡುವೆ ಮಾಜಿ ಪತಿಯ 2ನೇ ಮದುವೆ ಬಗ್ಗೆ ಸಮಂತಾ ಶಾಕಿಂಗ್ ಕಾಮೆಂಟ್
ಬೆಂಗಳೂರಿನ ಹಲವು ವಾರ್ಡ್‌ಗಳ ನಮ್ಮ ಕ್ಲಿನಿಕ್‌ಗಳಲ್ಲಿ 2-3 ತಿಂಗಳಿಂದ ಮೆಡಿಸಿನ್ನೇ ಬಂದಿಲ್ಲ. ರಕ್ತ ಪರೀಕ್ಷೆ, ಥೈರಾಯಿಡ್, ಡೆಂಗ್ಯೂ ಸೇರಿ 20ಕ್ಕೂ ಹೆಚ್ಚು ಮಾದರಿಯ ದುಬಾರಿ ಟೆಸ್ಟ್‌ಗಳನ್ನ ಉಚಿತವಾಗಿ ಮಾಡಿಕೊಡಲಾಗ್ತಿತ್ತು. ಆದ್ರೆ ಹಲವು ನಮ್ಮ ಕ್ಲಿನಿಕ್ ಗಳಲ್ಲಿ ಲ್ಯಾಬ್ ಗಳಿದ್ರೂ ಅವುಗಳು ಕಾರ್ಯಾಚರಣೆ ಮಾಡದೇ ಧೂಳು ಹಿಡಿಯುತ್ತಿವೆ. ಆರೋಗ್ಯ ಸೇವೆಗಳು ಸಿಗದೇ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ನಿಗಮದ ಅಧಿಕಾರಿಗಳಿಗೆ ಇನ್‌ಡೆಂಟ್ ಕೊಟ್ರೂ ಬೇಡಿಕೆಗೆ ತಕ್ಕಂತೆ ಔಷಧಿಗಳನ್ನ ಕೊಡ್ತಿಲ್ಲ. ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಹೇಳಿದ್ರೂ ತಲೆ ಕೆಡಿಸಿಕೊಳ್ತಿಲ್ಲ. ಬಡವರ ಆರೋಗ್ಯವನ್ನ ಸರಿ ಮಾಡಬೇಕಿದ್ದ ನಮ್ಮ ಕ್ಲಿನಿಕ್‌ಗಳು, ಇಗ ನಮ್ಮ ಕ್ಲಿನಿಕ್ ಗಳ ಆರೋಗ್ಯವೇ ಕೆಟ್ಟಂತಿದೆ. ಕೆಲವು ಕ್ಲಿನಿಕ್ ಗಳಲ್ಲಿ ವೈದ್ಯಕೀಯ ಸಿಬ್ಬಂದಿ ಕೂಡ ಇರೋದಿಲ್ಲ. ಇದನ್ನೂ ಓದಿ: ಗೌತಮ್ ಅದಾನಿ ಪುತ್ರನ ವಿವಾಹ ಪ್ರತಿಜ್ಞೆ – ಪ್ರತಿ ವರ್ಷ 500 ಅಂಗವಿಕಲ ಹೆಣ್ಣುಮಕ್ಕಳ ವಿವಾಹಕ್ಕೆ 10 ಲಕ್ಷ ನೆರವು ಘೋಷಣೆ
ಮಹಾಲಕ್ಷ್ಮಿ ಲೇಔಟ್‌ನ ಜೈ ಮಾರುತಿ ನಗರದ ನಮ್ಮ ಕ್ಲಿನಿಕ್‌ನಲ್ಲಿ ಲ್ಯಾಬ್‌ನ ಯಂತ್ರೋಪಕರಗಳಿದ್ರೂ ಅದಕ್ಕೆ ಬೇಕಾದ ಸಲಕರಣೆಗಳಿಲ್ಲ. ಬ್ಲಡ್ ಟೆಸ್ಟ್ ಬಿಟ್ರೆ ಬೇರೆ ಯಾವ ಟೆಸ್ಟಿಂಗ್ ಮಾಡೋದಿಲ್ಲ. ಮೆಡಿಸಿನ್ ಕೊರತೆಯ ಬಗ್ಗೆಯೂ ಅಲ್ಲಿನ ಸಿಬ್ಬಂದಿಯೇ ಅಸಹಾಯಕತೆ ತೋರಿದ್ದಾರೆ. ನಮ್ಮಲ್ಲಿ ಮಿಷಿನ್ಸ್ ಎಲ್ಲಾ ಇದೆ. ಕೆಲವೊಂದು ಮೆಡಿಸನ್ ಸಪ್ಲೈ ಇಲ್ಲ ಸರ್ಕಾರದಿಂದ. ಫಂಡ್ ಇಲ್ಲ ಅಂತ ಒಂದು ತಿಂಗಳಿಂದ ತಡೆಹಿಡಿದಿದ್ದಾರೆ. ಮಿಷಿನ್ಸ್ ಇದೆ. ಸಪ್ಲೈ ಮಾಡಿದ್ರೆ ಅಲ್ವಾ ನಾನು ಮಾಡಿಕೊಡೊದು ಸರ್. ಅದಕ್ಕೆ ಕೆಲವೊಂದು ಲ್ಯಾಬ್ ಟೆಸ್ಟ್ ಸ್ಟಾಪ್ ಆಗಿದೆ ಅಂತಾರೆ ಇಲ್ಲಿನ ಸಿಬ್ಬಂದಿ.
ಕೇವಲ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದಲ್ಲಿ ಮಾತ್ರವಲ್ಲ. ಜಯನಗರ, ಪದ್ಮನಾಭನಗರ, ಮಲ್ಲೇಶ್ವರಂ, ಶಿವಾಜಿನಗರ ಕ್ಷೇತ್ರಗಳ ನಮ್ಮ ಕ್ಲಿನಿಕ್‌ಗಳಲ್ಲೂ ಆರೋಗ್ಯ ಸೇವೆಯಿಂದ ಜನ ವಂಚಿತರಾಗ್ತಿದ್ದಾರೆ. ಕೆಲವು ಮಾತ್ರೆಗಳು ಆಸ್ಪತ್ರೆಯಲ್ಲಿ ಸಿಕ್ಕಿದ್ರೆ, ಇನ್ನೂ ಕೆಲವು ಮಾತ್ರೆಗಳು ಹೊರಗಡೆ ಬರೆದುಕೊಡ್ತಾರೆ. ಲ್ಯಾಬ್ ಟೆಸ್ಟ್ ಕೂಡ ಹೊರಗಡೆನೇ ಬರೆದುಕೊಡ್ತಾರೆ. ಇದನ್ನೂ ಓದಿ: ಬಾಂಗ್ಲಾದಲ್ಲಿ ಹಿಂಸಾಚಾರದ ಕಿಡಿ ಹೊತ್ತಿಸಿದ ಭಾಷಣ – ಉದ್ರಿಕ್ತರಿಂದ ಶೇಖ್ ಹಸೀನಾ ತಂದೆ ನಿವಾಸ ಧ್ವಂಸ
ಮತ್ತೊಂದೆಡೆ ನಮ್ಮ ಕ್ಲಿನಿಕ್‌ಗಳಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯಕೀಯ ಸಿಬ್ಬಂದಿಗಳಿಗೆ ಮೂರು ತಿಂಗಳಿಂದ ಸಂಬಳವೇ ಆಗಿಲ್ಲ. ಜೀವನ ನಿರ್ವಹಣೆಯೂ ಕಷ್ಟ ಆಗ್ತಿದ್ದು, ಸಂಬಳಕ್ಕಾಗಿ ಪ್ರತಿ ತಿಂಗಳು ಕಾಯುವ ಸ್ಥಿತಿ ಇದೆ. ಇನ್ನೂ ಕೆಲ ಆಸ್ಪತ್ರೆಗಳಲ್ಲಿ ವೈದ್ಯರೇ ಕೈಯಿಂದ ಹಣ ಖರ್ಚು ಮಾಡಿ ಮೆಡಿಸಿನ್ ತರ್ತಾರೆ. ಆದ್ರೆ ಆ ಹಣವನ್ನ ಇಲಾಖೆ ಬೇಗ ರೀಫಂಡ್ ಮಾಡೋದಿಲ್ಲ. ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ನಮ್ಮ ಕ್ಲಿನಿಕ್ ವೈದ್ಯರು ಧಾನಿಗಳಿಂದ ಮೆಡಿಸಿನ್ ತರಿಸಿಕೊಳ್ತಿದ್ದಾರೆ. ಆರೋಗ್ಯ ಇಲಾಖೆಯ ಸಚಿವ್ರು ಈ ಅವ್ಯವಸ್ಥೆಗೆ ಏನ್ ಪ್ರತಿಕ್ರಿಯೆ ಕೊಡ್ತಾರೆ ಕಾದು ನೋಡಬೇಕಿದೆ.