ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ‘ಕೋಟಿ’ (Kotee Film) ಸಿನಿಮಾ ಜೂನ್ 14ರಂದು ರಿಲೀಸ್‌ಗೆ ಸಿದ್ಧವಾಗಿದೆ. ಕೋಟಿ ಎಂಬ ಮಿಡಲ್ ಕ್ಲಾಸ್ ಹುಡುಗ ನಿಷ್ಠೆಯಿಂದ ಕೋಟಿ ರೂಪಾಯಿ ಗಳಿಸಬೇಕು ಎಂಬ ಗುರಿ ಇಟ್ಟುಕೊಂಡಿರುತ್ತಾನೆ. ಆ ಕನಸಿನ ಹಾದಿಯಲ್ಲಿ ಬರುವ ಸವಾಲುಗಳು ಹೇಗಿರುತ್ತದೆ ಎಂಬುದನ್ನು ಸಿನಿಮಾದಲ್ಲಿ ತೋರಿಸಿದ್ದಾರೆ. ಆದರೆ ಚಿತ್ರದ ಇಂಟ್ರಸ್ಟಿಂಗ್ ವಿಚಾರಗಳನ್ನು ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್. ರಂಗನಾಥ್ (HR Ranganath) ಜೊತೆ ಡೈರೆಕ್ಟರ್ ಪರಮ್ ಹಂಚಿಕೊಂಡಿದ್ದಾರೆ.
Advertisement
ಇಂದಿನ ಜೀವನ ಶೈಲಿಯಲ್ಲಿ ಹೇಗಾದ್ರು ಓಕೆ ನಾವು ದುಡ್ಡು ಮಾಡಬೇಕು ಎಂಬ ಮನಸ್ಥಿತಿ ಇದೆ. ಹೀಗಿರುವಾಗ ನಾನು ಕೂಡ ಮಿಡಲ್ ಕ್ಲಾಸ್ ಕುಟುಂಬದಿಂದ ಬಂದ ವ್ಯಕ್ತಿಯಾಗಿರೋದ್ರಿಂದ ಕೋಟಿ ಚಿತ್ರದ ಕಥೆ ಜನರಿಗೆ ಕನೆಕ್ಟ್ ಆಗುತ್ತೆ ಅನ್ನುವ ನಂಬಿಕೆ ಇದೆ. ಶ್ರದ್ಧೆ, ನಿಷ್ಠೆ, ನಂಬಿಕೆ ಇದ್ದರೆ ಕೋಟಿ ಗಳಿಸಲು ಸಾಧ್ಯವಾಗುತ್ತದೆ ಎಂದು ಓಪನ್ ಆಗಿ ಸಿನಿಮಾ ಕುರಿತು ಡೈರೆಕ್ಟರ್ ಪರಮ್ ಮಾತನಾಡಿದ್ದಾರೆ.
Advertisement
Advertisement
1 ಕೋಟಿ ರೂಪಾಯಿಯನ್ನು ನ್ಯಾಯವಾಗಿ ಗಳಿಸಬೇಕು. ತಪ್ಪಿಲ್ಲದೇ ಮುಂದೆ ಹೋಗಬೇಕು. ನಾಯಕ ಅನುಭವಿಸುವ ಕಷ್ಟಗಳು, ಕಥೆಯ ಸಾರಾಂಶ ಜನರಿಗೆ ಕನೆಕ್ಟ್ ಆಗುತ್ತೆ ಎಂದು ನಂಬಿಕೆಯಿದೆ. ಕೊನೆಗೂ ಹೀರೋ ಕೋಟಿ ಹೇಗೆ ಗಳಿಸುತ್ತಾರೆ ಎಂಬ ಪ್ರಶ್ನೆಗೆ ಸಿನಿಮಾದಲ್ಲಿ ಉತ್ತರ ಸಿಗಲಿದೆ ಎಂದು ಪರಮ್ ಮಾತನಾಡಿದರು. ಇದನ್ನೂ ಓದಿ:ಟ್ರೇಲರ್‌ನಲ್ಲಿ ಆಕ್ಷೇಪಾರ್ಹ ಸಂಭಾಷಣೆಗಳಿವೆ: ‘ಹಮಾರೆ ಬಾರಹ್’ ಸಿನಿಮಾ ಬಿಡುಗಡೆಗೆ ಸುಪ್ರೀಂ ತಡೆ
Advertisement
ಅಂದಹಾಗೆ, ‘ಕೋಟಿ’ (Kotee Film) ಚಿತ್ರದ ತಾರಾಗಣದಲ್ಲಿ ಡಾಲಿ ಧನಂಜಯ (Daali Dhananjay) ಜೊತೆ ನಾಯಕಿಯಾಗಿ ಮೋಕ್ಷಾ ಕುಶಾಲ್ ನಟಿಸಿದ್ದಾರೆ. ಖಳನಾಯಕನಾಗಿ ರಮೇಶ್ ಇಂದಿರಾ ಅಬ್ಬರಿಸಿದ್ದಾರೆ. ಉಳಿದಂತೆ ಹಿರಿಯ ನಟರಾದ ರಂಗಾಯಣ ರಘು, ತಾರಾ, ಸರ್ದಾರ್ ಸತ್ಯ ಜೊತೆಗೆ ಪೃಥ್ವಿ ಶಾಮನೂರು, ತನುಜಾ ವೆಂಕಟೇಶ್, ಅಭಿಷೇಕ್ ಶ್ರೀಕಾಂತ್, ವಿಜಯ್ ಶೋಭರಾಜ್ ಪವೂರ್ ಮುಂತಾದವರು ಅಭಿನಯಿಸಿದ್ದಾರೆ.
‘ಕೋಟಿ’ ಚಿತ್ರದಲ್ಲಿ ಐದು ಹಾಡುಗಳಿದ್ದು, ವಾಸುಕಿ ವೈಭವ್‌ಮ ರಾಗ ಸಂಯೋಜಿಸಿದ್ದಾರೆ. ಈ ಹಾಡುಗಳಿಗೆ ಯೋಗರಾಜ್ ಭಟ್ ಮತ್ತು ವಾಸುಕಿ ವೈಭವ್ ಸಾಹಿತ್ಯ ರಚಿಸಿದ್ದಾರೆ. ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು 777 ಚಾರ್ಲಿ ಖ್ಯಾತಿಯ ನೊಬಿನ್ ಪೌಲ್ ಹೊತ್ತಿದ್ದಾರೆ.