– ಮೈಸೂರಿನಲ್ಲಿ ಎಂ.ವೆಂಕಟಕೃಷ್ಣಯ್ಯನವರ ಜಯಂತೋತ್ಸವದಲ್ಲಿ ‘ಪಬ್ಲಿಕ್ ಟಿವಿ’ ಮುಖ್ಯಸ್ಥರು ಭಾಗಿ
– ದಿ ಅನಾಥಾಲಯದ ಯೋಜನೆಗಳು ಬೇಗ ಸಾಕಾರವಾಗಲಿ
ಮೈಸೂರು: ಈಗ ಸೇವೆಗಳಲ್ಲಿ ಸಾರ್ಥ ಬಂದಿದೆ. ಹೀಗಾಗಿ ಜನರಿಗೆ ಸಂಸ್ಥೆಗಳ ಮೇಲೆ ನಂಬಿಕೆ ಹೋಗಿದೆ ಎಂದು ‘ಪಬ್ಲಿಕ್ ಟಿವಿ’ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ (H.R.Ranganath) ಬೇಸರ ವ್ಯಕ್ತಪಡಿಸಿದರು.
Advertisement
ಮೈಸೂರಿನ (Mysuru) ದಿ ಅನಾಥಾಲಯದಲ್ಲಿ (The Anathalaya) ವೃದ್ಧ ಪಿತಾಮಹ ದಯಸಾಗರ ಎಂ.ವೆಂಕಟಕೃಷ್ಣಯ್ಯನವರ 108 ನೇ ಜಯಂತ್ಯೋತ್ಸವ ಭಾನುವಾರ ನಡೆಯಿತು. ಈ ವೇಳೆ ಮಾತನಾಡಿದ ಹೆಚ್.ಆರ್. ರಂಗನಾಥ್ ಅವರು, ಈಗ ಸೇವೆಗಳಲ್ಲಿ ಸ್ವಾರ್ಥ ಬಂದಿದೆ. ಹೀಗಾಗಿ ಜನಕ್ಕೆ ಸಂಸ್ಥೆಗಳ ಮೇಲೆ ನಂಬಿಕೆ ಹೋಗಿದೆ. ಆದರೆ ಅನಾಥಾಲಯದ ಆಡಳಿತ ಮಂಡಳಿ ಮಾತ್ರ ಬಹಳ ನಿಸ್ವಾರ್ಥವಾಗಿ ಸೇವೆ ಮಾಡುತ್ತಿದೆ. ಇನ್ನೂ ಬಹಳ ದೊಡ್ಡ ಮಟ್ಟದಲ್ಲಿ ಅನಾಥಾಲಯದ ಸೇವೆ ವಿಸ್ತರಣೆ ಆಗುವ ಯೋಜನೆಗಳನ್ನು ಆಡಳಿತ ಮಂಡಳಿ ಇಟ್ಟುಕೊಂಡಿದೆ. ಈ ಯೋಜನೆಗಳು ಬೇಗ ಸಾಕಾರವಾಗಲಿ. ಈ ಸಂಸ್ಥೆ ಸದಾ ಕಾಲ ಉಳಿಯಬೇಕು ಎಂದು ಆಶಿಸಿದರು. ಇದನ್ನೂ ಓದಿ: ಶ್ರೀ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಅಗತ್ಯ ಸಿದ್ಧತೆಗೆ ಬೋಸರಾಜು ಸೂಚನೆ
Advertisement
Advertisement
ಪಾಪಿಗಳು ಒಮ್ಮೊಮ್ಮೆ ಬಹುದಾನಿಗಳಂತೆ ನನಗೆ ಕಾಣಿಸುತ್ತಾರೆ. ಅವರ ಪಾಪವನ್ನು ನಮ್ಮಂಥವರ ಮೂಲಕ ಕಳೆದುಕೊಳ್ಳುವ ಮನಸ್ಥಿತಿ ಸದಾಕಾಲ ಅವರಲ್ಲಿರುತ್ತದೆ. ಸಾಮಾಜಿಕ ಕಳಕಳಿ, ಸೇವೆ, ಮನೋಭಾವ ಸ್ಥಿರವಾಗಿದ್ದರೆ, ಅದು ಸತ್ವವಾಗಿದ್ದರೆ, ಅದರಲ್ಲಿ ಸ್ವಾರ್ಥ ಇಲ್ಲದಿದ್ದರೆ, ಅಂತಹ ಸಮಾಜಸೇವೆ ಈ ಸಮಾಜ ಗುರುತಿಸಿ ಕಾಪಾಡುತ್ತದೆ. ಇಲ್ಲದಿದ್ದರೆ ಆ ಸಂಸ್ಥೆಗಳು ಮುಳುಗಿ ಹೋಗುತ್ತವೆ ಎಂದು ತಿಳಿಸಿದರು.
Advertisement
ವ್ಯಕ್ತಿಯಾಗಿ ಸೇವೆ, ಸಹಾಯ ಮಾಡುವುದು ಬಹಳ ಸುಲಭ. ಸಂಸ್ಥೆಗಳಾಗಿ ಸೇವಾ ಕಾರ್ಯಗಳನ್ನು ಮುಂದುವರಿಸುವುದು ಬಹಳ ಕಷ್ಟ. ಯಾಕೆಂದರೆ ಸಂಸ್ಥೆಗಳ ಒಳಗಡೆ ಬಹಳಷ್ಟು ಕಾಲ ಖೋ ಖೋ ಮತ್ತೆ ಕಬಡ್ಡಿ ಆಟ ನಡೆಯುತ್ತಿರುತ್ತದೆ. ಒಬ್ಬರು ಖೋ ಕೊಡುತ್ತಾರೆ, ಮತ್ತೊಬ್ಬರು ಕಾಲು ಎಳೀತಾರೆ. ಈ ಎರಡೂ ದೇಶೀಯ ಆಟಗಳನ್ನು ನಾವು ಚೆನ್ನಾಗಿಯೇ ಆಡುತ್ತೇವೆ ಎಂದು ಆಧುನಿಕ ವ್ಯವಸ್ಥೆ ಬಗ್ಗೆ ವ್ಯಂಗ್ಯಾತ್ಮಕವಾಗಿ ಮಾತನಾಡಿದರು. ಇದನ್ನೂ ಓದಿ: ಸಂಸದ ಡಾ.ಮಂಜುನಾಥ್ ನನ್ನ ಪರ ಇದ್ದಾರೆ, ಟಿಕೆಟ್ ಸಿಗುವ ವಿಶ್ವಾಸ ಇದೆ: ಸಿ.ಪಿ ಯೋಗೇಶ್ವರ್
ರಾಮಕೃಷ್ಣ ಆಶ್ರಮದ ಸ್ವಾಮಿ ನಿರ್ಭಯಾನಂದ ಸರಸ್ವತಿ, ದಿ ಅನಾಥಾಲಯದ ಅಧ್ಯಕ್ಷರಾದ ಸಿ.ವಿ.ಗೋಪಿನಾಥ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಡಾ. ಹೆಚ್.ವಿ.ಮೃತ್ಯುಂಜಯ ಹಾಗೂ ರಾಘವೇಂದ್ರ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.