Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪಬ್ಲಿಕ್‌ ಟಿವಿಗೆ 14ರ ಸಂಭ್ರಮ – ವೀರ ಸೈನಿಕರಿಗೆ ವಾರ್ಷಿಕೋತ್ಸವ ಅರ್ಪಣೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಪಬ್ಲಿಕ್‌ ಟಿವಿಗೆ 14ರ ಸಂಭ್ರಮ – ವೀರ ಸೈನಿಕರಿಗೆ ವಾರ್ಷಿಕೋತ್ಸವ ಅರ್ಪಣೆ

Bengaluru City

ಪಬ್ಲಿಕ್‌ ಟಿವಿಗೆ 14ರ ಸಂಭ್ರಮ – ವೀರ ಸೈನಿಕರಿಗೆ ವಾರ್ಷಿಕೋತ್ಸವ ಅರ್ಪಣೆ

Public TV
Last updated: February 12, 2026 1:37 pm
Public TV
Share
2 Min Read
Public TV celebrates 14th anniversary
SHARE

ಯಾರ ಆಸ್ತಿಯೂ ಅಲ್ಲ ಇದು ನಿಮ್ಮ ಟಿವಿ ಎಂಬ ಘೋಷ ವಾಕ್ಯದೊಂದಿಗೆ ಫೆಬ್ರವರಿ 12, 2012ರಂದು ಲೋಕಾರ್ಪಣೆಗೊಂಡ ನಿಮ್ಮ ಪಬ್ಲಿಕ್ ಟಿವಿಗೆ (PUBLiC TV) ಹದಿನಾಲ್ಕನೇ ವಾರ್ಷಿಕೋತ್ಸವದ (14th Anniversary) ಸಂಭ್ರಮ. ಕೋಟ್ಯಂತರ ಪ್ರಜ್ಞಾವಂತರ ಅಚ್ಚುಮೆಚ್ಚಿನ ಚಾನೆಲ್ಲಾಗಿ ಹೊರಹೊಮ್ಮಿದ ಹಾದಿ, ಪಬ್ಲಿಕ್ ಟಿವಿ ಪಾಲಿಗೆ ಸುಲಭದ್ದಾಗಿರಲಿಲ್ಲ. ಆ ಕಠಿಣ ಲಕ್ಷ್ಯವನ್ನು ತಲುಪಿಯೇ ಸಿದ್ಧ ಅಂತ ನಿರ್ಧರಿಸಿದ್ದು ಪಬ್ಲಿಕ್ ಟಿವಿಯ ಕ್ಯಾಪ್ಟನ್ ಹೆಚ್.ಆರ್.ರಂಗನಾಥ್

ಪಬ್ಲಿಕ್ ಟಿವಿಯ ಸುದ್ದಿ ಜಗತ್ತಿನ ಯಾನ 14 ಸಂವತ್ಸರ ಪೂರೈಸಿ 15ನೇ ವಸಂತದತ್ತ ಅಬಾಧಿತವಾಗಿ ಸಾಗಿದೆ ಅಂದರೆ ಅದಕ್ಕೆ ವೀಕ್ಷಕ ಮಹಾಪ್ರಭುಗಳಾದ ನೀವೇ ಕಾರಣ. ಫೆಬ್ರವರಿ 12, 2012. ಈ ದಿನ ಪಬ್ಲಿಕ್ ಟಿವಿ ಮಾಧ್ಯಮಲೋಕವೇ ಅಚ್ಚರಿಯಿಂದ ನೋಡುವಂತೆ ಮಾಡಿದ ದಿನ. ಅದೆಷ್ಟು ದಿನ ನಡೆಸುತ್ತಾರೆ ನೋಡೋಣ ಎಂದು ನಕ್ಕವರ ಮುಂದೆ ಭರ್ತಿ 14 ಸಂವತ್ಸರಗಳನ್ನು ಪೂರೈಸಿದ ಸಾರ್ಥಕ ದಿನ.

ಇಡೀ ಕರುನಾಡಿಗೆ ನಮಸ್ಕಾರ ಎಂದು ಹೇಳುತ್ತಾ, ಚಾನೆಲ್ಲನ್ನು ಸಂಪೂರ್ಣ ಕನ್ನಡಿಗರಿಗೆ ಸಮರ್ಪಿಸಿ ಶುರುಮಾಡಿದ್ದ ಸುದ್ದಿ ಯಜ್ಞ ಇವತ್ತಿಗೂ ನಿರ್ವಿಘ್ನ, ನಿರರ್ಗಳವಾಗಿ ಸಾಗುತ್ತಲೇ ಇದೆ. ಇಂದು ಪಬ್ಲಿಕ್ ಟಿವಿಯು ಮನೆ ಮನೆಯ ಮನ ಮನಗಳ ಅವಿಭಾಜ್ಯ ಅಂಗವಾಗಿಬಿಟ್ಟಿದೆ.

ಸಮಾಜಕ್ಕೆ ಸತ್ಯ, ಸ್ಪಷ್ಟ, ಸದುದ್ದೇಶಭರಿತ ಕಾರ್ಯಕ್ರಮಗಳನ್ನು ಕೊಡುವುದರಲ್ಲಿ ಪಬ್ಲಿಕ್ ಟಿವಿಗೆ ಸಾಟಿ ಮತ್ತೊಂದಿಲ್ಲ. ಪಬ್ಲಿಕ್ ಟಿವಿಯ ಬಿಗ್ ಬುಲೆಟಿನ್, ಕನ್ನಡ ಸುದ್ದಿವಾಹಿನಿ ಇತಿಹಾಸದಲ್ಲೇ ಹೊಸ ಮೈಲಿಗಲ್ಲು. ಕನ್ನಡ ನಾಡಿನಲ್ಲಿ ಕನ್ನಡದವರೇ ಸಮರ್ಥ, ಸದೃಢ, ನಿಷ್ಪಕ್ಷಪಾತ ಸುದ್ದಿವಾಹಿನಿಯೊಂದನ್ನು ಶುರುಮಾಡಿ, ದಕ್ಷತೆ, ಪ್ರಾಮಾಣಿಕತೆ, ಪಕ್ಷಾತೀತವಾಗಿ ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವ ನಿದರ್ಶನವೊಂದಿದ್ದರೇ ಅದು ಪಬ್ಲಿಕ್ ಟಿವಿಯ ಹೆಮ್ಮೆ.

Public MOVIES celebrates 14th anniversary

ಕಳೆದ ವರ್ಷ ಇಡೀ ದೇಶದ ಎಲ್ಲಾ ಮಾಧ್ಯಮಗಳ ಪಾಲಿಗೂ ಅತ್ಯಂತ ವಿಶೇಷ ಮತ್ತು ಸವಾಲಿನ ಸಂದರ್ಭ ಸೃಷ್ಚಿಸಿತ್ತು ಅಂದರೆ ತಪ್ಪಾಗಲ್ಲ. ಶತ್ರುದೇಶ ನೆರೆಯ ಪಾಕಿಸ್ತಾನದ ದುಷ್ಟ ಕೃತ್ಯಕ್ಕೆ ಭಾರತ ದಿಟ್ಟ ಪ್ರತ್ಯುತ್ತರ ಕೊಟ್ಟ ಸಮಯವಾಗಿತ್ತು. ಕಾರ್ಗಿಲ್ ಯುದ್ಧದ ಬಳಿಕ, ಪಾಕ್ ವಿರುದ್ಧ ಮತ್ತೆ ರಣಕಹಳೆ ಮೊಳಗಿತ್ತು. ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ರಾಕ್ಷಸೀಕೃತ್ಯಕ್ಕೆ ಪ್ರತೀಕಾರವಾಗಿ ಕೈಗೊಂಡ ಆಪರೇಷನ್ ಸಿಂಧೂರವು, ಭಾರತದ ವೀರಚರಿತೆಯಲ್ಲಿ ದಾಖಲಾದ ಮಹಾಶೌರ್ಯದ ಮಹಾ ಅಧ್ಯಾಯ.

ಆಪರೇಷನ್ ಸಿಂಧೂರದಲ್ಲಿ ದೇಶದ ಗಂಡುಗಲಿ ಯುದ್ಧ ವಿಮಾನಗಳು, ಪಾಕ್ ಗಡಿದಾಟಿ ಪ್ರಮುಖ ಟಾರ್ಗೆಟ್‌ಗಳನ್ನು ಚಿಂದಿ ಉಡಾಯಿಸಿ, ವಿಜಯಪತಾಕೆ ಹಾರಿಸಿದ್ದವು. ದೇಶದ ಗಡಿ ಕಾಯುವ, ದೇಶದ ಜನರಿಗೆ ನೆಮ್ಮದಿ, ರಕ್ಷಣೆ, ಅಭಯದ ಭಾವನೆ ಕೊಡ ಮಾಡುವ ನಮ್ಮ ಹೆಮ್ಮೆಯ ಸೈನಿಕರನ್ನು ಮನಃಪೂರ್ವಕವಾಗಿ ನೆನೆಯಲೇ ಬೇಕಾದ ವರ್ಷವಿದು. ಹೀಗಾಗಿಯೇ ಪಬ್ಲಿಕ್ ಟಿವಿಯ ವರ್ಷಾಚರಣೆಯ ಈ ಸಂದರ್ಭದಲ್ಲಿ ದೇಶಕ್ಕಾಗಿ ತ್ಯಾಗ ಬಲಿದಾನಗೈದ ವೀರ ಯೋಧರನ್ನು ಸನ್ಮಾನಿಸಿದ್ದೇವೆ.

ಪಬ್ಲಿಕ್ ಟಿವಿ ಆಯ್ತು, ಪಬ್ಲಿಕ್ ಮ್ಯೂಸಿಕ್ ಆಯ್ತು, ಮುಂದೇನು ಎನ್ನುವ ಯೋಚನೆಯಲ್ಲಿದ್ದಾಗ ಆನ್ ಪಬ್ಲಿಕ್ ಡಿಮ್ಯಾಂಡ್ ಹೊಳೆದಿದ್ದೇ ಪಬ್ಲಿಕ್ ಮೂವೀಸ್. ಹೌದು ಕನ್ನಡಿಗರಿಗಾಗಿ ಕನ್ನಡಿಗರಿಗೋಸ್ಕರವೇ ಆರಂಭವಾಗಿದ್ದು ಪಬ್ಲಿಕ್ ಮೂವೀಸ್. ಕರುನಾಡಲ್ಲಿ ದೊಡ್ಡ ಅಭಿಮಾನಿ ಬಳಗ ಹೊಂದಿರುವ ನಿಮ್ಮ ನೆಚ್ಚಿನ ಪಬ್ಲಿಕ್ ಮೂವೀಸ್‌ಗೂ (Public MOVIES)ಇಂದು ಎಂಟು ವರ್ಷಗಳ ಸಾರ್ಥಕ ಸಂಭ್ರಮ.

ಪಬ್ಲಿಕ್ ಟಿವಿ ಮತ್ತು ಪಬ್ಲಿಕ್ ಮೂವೀಸ್‌ನ ಸಂಭ್ರಮ ಮತ್ತು ಸಡಗರಗಳಿಗೆ ಮುಖ್ಯ ಕಾರಣ ಕನ್ನಡಿಗರಾದ ನೀವು ಮತ್ತು ಕೇವಲ ನೀವು. ನಿಮ್ಮೆಲ್ಲರ ವಿಶ್ವಾಸ, ಹಾರೈಕೆ ಮತ್ತು ಬೆಂಬಲ ಸದಾ ಹೀಗೆ ಇರಲಿ ಎಂದು ಆಶಿಸುತ್ತೇವೆ. ಧನ್ಯವಾದ ಕರ್ನಾಟಕ.

TAGGED:anniversarykannadapublic moviesPublic TVಕನ್ನಡಪಬ್ಲಿಕ್ ಟಿವಿಪಬ್ಲಿಕ್ ಮೂವೀಸ್ವಾರ್ಷಿಕೋತ್ಸವ
Share This Article
Facebook Whatsapp Whatsapp Telegram

Cinema news

rashmika vijay dkshivakumar 1
ವಿಜಯ್, ರಶ್ಮಿಕಾ ಆರತಕ್ಷತೆಗೆ ತೆರಳಿ ಶುಭಕೋರಿದ ಡಿಕೆ ಶಿವಕುಮಾರ್
Cinema Latest Top Stories
honey singh 1
ನಾನು ದುಬೈನಲ್ಲಿ ಸೇಫ್ ಆಗಿದ್ದೇನೆ: ವದಂತಿಗಳಿಗೆ ಕಿವಿಗೊಡಬೇಡಿ ಎಂದ ಹನಿ ಸಿಂಗ್
Cinema Latest National Top Stories
Toxic
ಕೊನೇ ಕ್ಷಣದಲ್ಲಿ ಫ್ಯಾನ್ಸ್‌ಗೆ ಶಾಕ್ ಕೊಟ್ಟ ಯಶ್ – ಮಾ.19ಕ್ಕೆ ರಿಲೀಸ್‌ ಆಗಲ್ಲ ʻಟಾಕ್ಸಿಕ್ʼ – ಮತ್ಯಾವಾಗ?
Bollywood Cinema Latest Main Post Sandalwood
mandana Karimi
ಇಲ್ಲಿನ ಜನ ನನ್ನನ್ನ ತುಚ್ಛವಾಗಿ ನಿಂದಿಸಿದ್ದಾರೆ, ಆಡಳಿತ ಬದಲಾದ ಬಳಿಕ ಇರಾನ್‌ಗೆ ತೆರಳುತ್ತೇನೆ – ನಟಿ ಮಂದನಾ ಕರಿಮಿ
Bollywood Cinema Latest National Top Stories

You Might Also Like

crude oil
Latest

ಆತಂಕದಲ್ಲಿದ್ದ ಭಾರತಕ್ಕೆ ರಷ್ಯಾ ಆಪತ್ಭಾಂದವ – ಈ ವಾರವೇ 22 ಕೋಟಿ ಲೀಟರ್‌ ತೈಲ ಪೂರೈಕೆ

Public TV
By Public TV
11 minutes ago
indian navy
Latest

ಇರಾನ್‌ ಮೇಲಿನ ದಾಳಿಗೆ ಅಮೆರಿಕವು ಭಾರತೀಯ ನೌಕಾನೆಲೆ ಬಳಸುತ್ತಿದೆ ಅನ್ನೋದು ಶುದ್ಧ ಸುಳ್ಳು – ಎಂಇಎ

Public TV
By Public TV
44 minutes ago
G PARAMESHWAR
Bengaluru City

ನೇಮಕಾತಿಯಲ್ಲಿ ಒಳಮೀಸಲಾತಿ ಗೊಂದಲ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ: ಪರಮೇಶ್ವರ್

Public TV
By Public TV
56 minutes ago
doomsday
Latest

ಯುದ್ಧದ ನಡುವೆ ವಿನಾಶಕಾರಿ ʻಡೂಮ್ಸ್‌ಡೇʼ ಕ್ಷಿಪಣಿ ಪರೀಕ್ಷಿಸಿದ ಅಮೆರಿಕ – 3ನೇ ಮಹಾಯುದ್ಧ ಫಿಕ್ಸಾ?

Public TV
By Public TV
1 hour ago
Gadag Tata Ace Accident
Crime

ಕಾಮಣ್ಣನ ಉತ್ಸವ ಮುಗಿಸಿ ಬರುವಾಗ ಮರಕ್ಕೆ ಟಾಟಾ ಏಸ್ ಡಿಕ್ಕಿ – ಇಬ್ಬರು ಸ್ಥಳದಲ್ಲೇ ಸಾವು

Public TV
By Public TV
2 hours ago
Bidar 3
Bidar

ಮೌಲ್ವಿಗಳ ಮೇಲೆ ಕೇಸ್‌ – ಠಾಣೆ ಮುಂದೆ ಹೈಡ್ರಾಮಾ; FIR ದಾಖಲಾದ 49 ಜನರ ಪೈಕಿ 20 ಮಂದಿ ಅರೆಸ್ಟ್‌

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?