ಬೆಂಗಳೂರು: ಇಂದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ನೂರರ ಸಂಭ್ರಮ. ಬೆಳಕು ಎಂಬ ಶೀರ್ಷಿಕೆಯಡಿಯಲ್ಲಿ ಆರಂಭವಾಗ ಬೆಳಕು ಇಂದು ನೂರರ ಸಂಭ್ರಮದಲ್ಲಿದೆ. ಇಂದು ಈ ಕಾರ್ಯಕ್ರಮದ ಮುಲಕ ನೂರಾರು ಕುಟುಂಬಗಳಲ್ಲಿ ಬೆಳಕು ಮೂಡಿದೆ. ಬೆಳಕು ನೊಂದವರ ಪಾಲಿಗೆ ಬೆಳಕಾಗುವದೋಸ್ಕರ, ಬಡಪ್ರತಿಭಾವಂತರಿಗೆ ನೆರವಾಗುವ ಉದ್ದೇಶದಿಂದ ಆರಂಭವಾದ ಕಾರ್ಯಕ್ರಮ.
Advertisement
ರಾಕ್‍ಲೈನ್ ವೆಂಕಟೇಶ್, ಲಹರಿ ಆಡಿಯೋ ಕಂಪನಿಯ ಮುಖ್ಯಸ್ಥರು ಮನೋಹರ್ ನಾಯ್ಡು, ನಟ ಯಶ್, ಸುತ್ತೂರು ಶ್ರೀಗಳು, ಕಣ್ವಾ ಮಾರ್ಟ್ ಮುಖ್ಯಸ್ಥ ನಂಜುಡಯ್ಯ ಮುಂತಾದ ಗಣ್ಯಾತೀಗಣ್ಯರು ಬೆಳಕು 100ರ ಸಂಚಿಕೆಗೆ ಸಾಕ್ಷಿಯಾದ್ರು.
Advertisement
Advertisement
ಬೆಳಕು 100ರ ಸಂಚಿಕೆಯ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧಡೆಯಿಂದ ಜನರು ಆಗಮಿಸಿದ್ದರು. ಇನ್ನೂ ಬೆಳಕು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಜೀವನದಲ್ಲಿ ಬೆಳಕನ್ನು ಕಂಡಿರೋ ಅನೇಕರು ಆಗಮಿಸಿದ್ದರು.
Advertisement
ಮೊದಲ ಸಂಚಿಕೆ: ಬೆಂಗಳೂರು ಹೊರವಲಯದ ನೆಲಮಂಗಲ ಬಳಿಯ ದಾಬಸ್‍ಪೇಟೆ ಬಳಿಯ ಪ್ರವೀಣ್ ಬೆಳಕು ಕಾರ್ಯಕ್ರಮದ ಮೊದಲನೇ ಸಂಚಿಕೆಗೆ ಬಂದಿದ್ದರು. ಆಟ ಆಡುವಾಗ ಪ್ರವೀಣ್ ಕಟ್ ಆಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಸ್ಪರ್ಶಿಸಿಸದ್ದರಿಂದ ತನ್ನ ಬಲಗೈಯನ್ನು ಕಳೆದುಕೊಂಡಿದ್ದನು. ಸರ್ಕಾರ ಪ್ರವೀಣನಿಗೆ 5000 ರೂ. ಪರಿಹಾರ ನೀಡಿ ಕೈ ತೊಳೆದುಕೊಂಡಿತ್ತು.
ಬಲಗೈ ಕಳೆದುಕೊಂಡ್ರೂ ಪ್ರವೀಣ್ ಎಡಗೈ ಮೂಲಕ ಬರೆಯುವಲ್ಲಿ ಯಶಸ್ವಿಯಾಗಿದ್ದಾನೆ. ಇಂದು ಪ್ರವೀಣ್‍ನ ಶಿಕ್ಷಣ ವೆಚ್ಚವನ್ನು ಪಬ್ಲಿಕ್ ಟಿವಿ ನೀಡುತ್ತಿದೆ.
ಚಿತ್ರದುರ್ಗದಿಂದ ಬಂದಂತಹ ಕಥೆಯಿದು ಹೃದಯ ಮಿಡಿಯುವ ಸ್ಟೋರಿ. ಪತಿಯಿಂದ ದೂರವಾದ ತಾಯಿ ಕೋರ್ಟ್ ಆವರಣದಲ್ಲಿ ಕಸ ಗುಡಿಸುವ ಮೂಲಕ ಸ್ವಾಭಿಮಾನ ಜೀವನ ಕಟ್ಟಿಕೊಂಡಿದ್ದರು. ಆದರೆ ಜೊತೆಯಲ್ಲಿದ್ದ ಕಂದನಿಗೆ ಹೃದಯದಲ್ಲಿ ರಂಧ್ರವಿದೆ ಎಂದು ತಿಳಿದಾಗ ತಾಯಿಗೆ ದಿಕ್ಕುತೋಚದಂತಾಗಿತ್ತು. ಕೊನೆಗೆ ತಾಯಿ ಪಬ್ಲಿಕ್ ಟಿವಿಗೆ ಬಂದು ತಮ್ಮ ನೋವನ್ನು ತೋಡಿಕೊಂಡಿದ್ದರು.
ಪಬ್ಲಿಕ್ ಟಿವಿ ಮನವಿಯಂತೆ ನಗರದ ಜಯದೇವ ಆಸ್ಪತ್ರೆಯ ಮುಖ್ಯಸ್ಥ ಡಾ. ಮಂಜುನಾಥ್ ಅವರು ಮಗುವಿನ ಶಸ್ತ್ರ ಚಿಕಿತ್ಸೆಗೆ ಕೈ ಜೋಡಿಸಿದರು. ಇಂದು ಪುಟ್ಟ ಪೋರನ ಮುಖದಲ್ಲಿ ನಗು ಬಂದಿದೆ.
ಕಾರ್ಯಕ್ರಮದ ಕೊನೆಗೆ ಸುತ್ತೂರು ಶ್ರೀಗಳು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಬೆಳಕು ಕಾರ್ಯಕ್ರಮದ ಸಹಾಯದ ಮೂಲಕ ವಿದ್ಯಾವಂತರಾಗಿ, ಸಹಾಯಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇವೆ. ಮುಂದೆ ನಾವು ಜೀವನದಲ್ಲಿ ಕಷ್ಟದಲ್ಲಿರುವರೆಗೂ ಸಹಾಯ ಮಾಡ್ತೇವೆ ಎಂದು ಪ್ರತಿಜ್ಞಾ ವಿಧಿಯನ್ನು ಭೋದಿಸಿದರು.
ಕಾರ್ಯಕ್ರಮ ಅಂತಿಮ ಘಟ್ಟದಲ್ಲಿ ಬೆಳಕು 100ನೇ ಸಂಚಿಕೆ ಆಗಮಿಸಿದ್ದ ಗಣ್ಯರಿಗೆ ನೆನಪಿನ ಕಾಣಿಕೆ ನೀಡಿ ಪಬ್ಲಿಕ್ ಟಿವಿಯಿಂದ ಗೌರವಿಸಲಾಯಿತು.