ಮೈಸೂರು: ಐದನೇ ವಯಸ್ಸಿನಲ್ಲಿಯೇ ಪೋಲಿಯೋಗೆ ತುತ್ತಾಗಿ ಕಾಲು ಕಳೆದುಕೊಂಡ್ರೂ ಪಿಯುಸಿವರೆಗೂ ವಿದ್ಯಾಭ್ಯಾಸ ಮಾಡಿ, ಓದಿನ ಜೊತೆಗೆ ಕೀ ಬೋರ್ಡ್ ಅಭ್ಯಾಸ ಕಲಿತಿದ್ದಾರೆ. ಈಗ ಅದೇ ಪಿಯಾನೋ ಕೀ ಬೋರ್ಡ್ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಆದ್ರೆ ಈಗ ಪಿಯಾನೋ ಕೀ ಬೋರ್ಡ್ ಹಳೆಯದಾಗಿ ಹೊಸ ಕೀ ಬೋರ್ಡ್ ಕೊಡಿಸಿ ಅಂತಾ ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದಾರೆ.
ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಅಮ್ಮತೂರು ಗ್ರಾಮದ ನಿವಾಸಿ ಜವರನಾಯಕ, ತನ್ನ 5ನೇ ವಯಸ್ಸಿನ್ಲಲಿ ಪೋಲಿಯೋಗೆ ತುತ್ತಾಗಿ ಕಾಲು ಕಳೆದುಕೊಂಡರೂ ಕಷ್ಟ ಪಟ್ಟು ಪಿಯುಸಿವರೆಗೆ ಓದಿದ್ದಾರೆ. ತನ್ನ ಅಂಗವಿಕಲತೆಯನ್ನು ಬದಿಗಿರಿಸಿ ಊರಿನ ದೇವಸ್ಥಾನದಲ್ಲಿ ದೇವರನಾಮ ಪಠಣೆ, ಸತ್ತವರ ಮನೆಯಲ್ಲಿ ರಾತ್ರಿಯ ವೇಳೆ ಭಜನೆ ಮಾಡುವಾಗ ಅವರ ಜೊತೆಯಲ್ಲಿ ಕುಳಿತು ಭಜನೆ ಕಲಿತು ಜೊತೆಗೆ ಕೀ ಬೋರ್ಡ್ ನುಡಿಸುವುದನ್ನು ಕಲಿತಿದ್ದಾರೆ.
Advertisement
Advertisement
ನಡೆಯಲು ಬಾರದಿದ್ದರೂ ಸ್ವಾವಲಂಬಿಯಾಗಿ ಬದುಕಬೇಕೆಂದು ಕೀ ಬೋರ್ಡ್ ನುಡಿಸುವುದನ್ನೇ ವೃತ್ತಿಯಾಗಿಸಿಕೊಂಡಿದ್ದಾರೆ. ಆರ್ಕೆಸ್ಟ್ರಾ, ನಾಟಕ, ಭಜನೆ ಎಲ್ಲ ಕಡೆ ಕಾರ್ಯಕ್ರಮ ಮಾಡಿ ಪತ್ನಿ ಮತ್ತು ತಾಯಿಯನ್ನು ಸಾಕುತ್ತಿದ್ದಾರೆ. ತುಂಬಾ ವರ್ಷಗಳಿಂದ ಉಪಯೋಗಿಸುತ್ತಿರುವ ಕೀ ಬೋರ್ಡ್ ಹಳೆಯದಾಗಿ ಕಾರ್ಯಕ್ರಮದಲ್ಲಿ ಆಗಾಗ ಕೆಡುತ್ತಿದ್ದರಿಂದ ಕಾರ್ಯಕ್ರಮಗಳಿಗೆ ಕರೆಯುವುದು ಕಡಿಮೆ ಮಾಡಿದ್ದಾರೆ.
Advertisement
ಕುಟುಂಬದ ಜವಾಬ್ದಾರಿ ಜವರಾಯಕನ ಮೇಲಿದ್ದು, ಕೀಬೋರ್ಡ್ ಇಲ್ಲದೇ ಜೀವನ ನಡೆಸಲು ಕಷ್ಟ ಸಾಧ್ಯವಾಗಿದೆ. ಈಗ ಮಾರುಕಟ್ಟೆಗೆ ಹೊಸ ತಂತ್ರಜ್ನಾನದ ಕೀ ಬೋರ್ಡ್ ಗಳು ಬಂದಿವೆ. ಹೊಸ ಕೀ ಬೋರ್ಡ್ ತೆಗೆದುಕೊಳ್ಳಲು ಇವರ ಬಳಿ ಹಣ ಇಲ್ಲದೇ ಜೀವನ ನಡೆಸಲು ಕಷ್ಟ ಪಡುತ್ತಿದ್ದಾರೆ.
Advertisement
ಯಾರಾದ್ರೂ ದಾನಿಗಳು ಹೊಸ ತಂತ್ರಜ್ಞಾನದ ಕೀಬೋರ್ಡ್ ನೀಡಿದ್ರೆ ಕಾರ್ಯಕ್ರಮಗಳನ್ನು ಮಾಡಿ ಸಂಪಾದಿಸಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಸಹಾಯವಾಗುತ್ತೆ ಎಂದು ಬೆಳಕು ಕಾರ್ಯಕ್ರಮದಲ್ಲಿ ನೆರವು ಬಯಸುತ್ತಿದ್ದಾರೆ. ಸ್ವಾಭಿಮಾನದ ಬದುಕು ಹಸನಾಗಿಸಲು ದಾನಿಗಳು ಕೈ ಜೋಡಿಸಲಿ ಎಂಬುದು ಬೆಳಕು ಕಾರ್ಯಕ್ರಮದ ಆಶಯವಾಗಿದೆ.
https://www.youtube.com/watch?v=bQx7xFYkXqA