ಕಲಬುರಗಿ: ನಿಮ್ಮ `ಪಬ್ಲಿಕ್ ಟಿವಿ’, `ಬೆಳಕು’ (Public TV Belaku) ಕಾರ್ಯಕ್ರಮದ ಮೂಲಕ ಸಮಾಜಮುಖಿ ಕೆಲಸಗಳನ್ನ ಮುಂದುವರಿಸಿದ್ದು, ನೊಂದ ಬಡ ಕುಟುಂಬಕ್ಕೆ ಆಧಾರವಾಗಿದೆ. ಕಲಬುರಗಿ (Kalaburagi) ಜಿಲ್ಲೆ ಆಳಂದ ತಾಲೂಕಿನ ದಣ್ಣೂರ ಗ್ರಾಮದ ಕುಟುಂಬದ ಕಥೆ ಇದಕ್ಕೆ ತಾಜಾ ಉದಾಹರಣೆಯಾಗಿದೆ.
Advertisement
ಹೌದು. ಆಳಂದ ತಾಲೂಕಿನ ದಣ್ಣೂರ ಗ್ರಾಮದ ಅಂಗವಿಕಲ ಕುಟುಂಬದ ಸಂಕಷ್ಟದ ಕುರಿತು ʻಪಬ್ಲಿಕ್ ಟಿವಿʼ ಬೆಳಕು ಕಾರ್ಯಕ್ರಮದಲ್ಲಿ ವರದಿ ಪ್ರಸಾರ ಮಾಡಿತ್ತು. ಕುಟುಂಬ ತನ್ನ ಕಷ್ಟವನ್ನು ನಾಡಿನ ಜನರ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿತ್ತು. `ಪಬ್ಲಿಕ್’ ವರದಿಗೆ ಸ್ಪಂದಿಸಿದ ಬಿಜೆಪಿ ಮುಖಂಡ (BJP Leader), ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹರ್ಷಾನಂದ ಗುತ್ತೇದಾರ್ ನೊಂದ ಕುಟುಂಬಕ್ಕೆ ನೇರವಾಗಿದ್ದಾರೆ. ಚಿಕ್ಕದಾಗಿ ಕಿರಾಣಿ ಅಂಗಡಿಯೊಂದನ್ನ ಇಟ್ಟುಕೊಟ್ಟು, ನೊಂದ ಕುಟುಂಬಕ್ಕೆ ಆಸರೆಯಾಗಿದ್ದಾರೆ.
Advertisement
Advertisement
ಕುಟುಂಬದ ಕಥೆ-ವ್ಯಥೆ:
ದಣ್ಣೂರ ಗ್ರಾಮದ ನಿವಾಸಿ ಪ್ರಭು ಬೈಕ್ ಅಪಘಾತದಲ್ಲಿ (Bike Accident) ಕಾಲು ಕಳೆದುಕೊಂಡು ಜೀವನ ನಡೆಸಲಾರದಷ್ಟು ಸಮಸ್ಯೆಗೀಡಾಗಿದ್ದರು. ತಮ್ಮ ಪತ್ನಿ ಹಾಗೂ ಮೂರು ಮಕ್ಕಳ ಪ್ರತಿದಿನ ಕಷ್ಟದ ಕಣ್ಣಿರಿನಲ್ಲಿ ಕೈತೊಳೆಯುತ್ತಿದ್ದರು. ಈ ಬಗ್ಗೆ ನಿಮ್ಮ `ಪಬ್ಲಿಕ್ ಟಿವಿ’ ವರದಿ ಮಾಡಿತ್ತು. ಇದನ್ನೂ ಓದಿ: ಚೆನ್ನೈ ತಲುಪಿದ ಚಾಲಕ ರಹಿತ ಹಳದಿ ಮೆಟ್ರೋ- ಕಸ್ಟಮ್ಸ್ ಕ್ಲಿಯರೆನ್ಸ್ ಬಳಿಕ ಬೆಂಗಳೂರಿಗೆ ರವಾನೆ
Advertisement
ಹೆಚ್.ಆರ್ ರಂಗನಾಥ್ ಅವರ ನಿರೂಪಣೆಯಲ್ಲಿ ಮೂಡಿಬರುತ್ತಿರುವ ಬೆಳಕು ಕಾರ್ಯಕ್ರಮದಲ್ಲಿ ವರದಿ ಪ್ರಸಾರ ಮಾಡಲಾಗಿತ್ತು. ಆಗ ಪ್ರಭು ಹಾಗು ಅವರ ಪತ್ನಿ ಮಲ್ಲಮ್ಮ ತಮ್ಮ ಕುಟುಂಬ ನಿರ್ವಹಣೆಗೆ ಗ್ರಾಮದಲ್ಲಿಯೇ ಒಂದು ಚಿಕ್ಕ ಕಿರಾಣಿ ಅಂಗಡಿ ಮಾಡಿಕೊಟ್ಟರೇ ಕುಟುಂಬದ ನಿರ್ವಹಣೆಗೆ ಸಹಾಯವಾಗುತ್ತದೆ. ದಾನಿಗಳು ಯಾರಾದರೂ ಸಹಾಯ ಮಾಡಿದ್ರೆ ತುತ್ತು ಅನ್ನ ಸಿಗುತ್ತದೆ ಅಂತಲೂ ಅಳಲು ತೋಡಿಕೊಂಡಿದ್ದರು. ಇದನ್ನೂ ಓದಿ: UCC ಬಿಲ್ ಪಾಸ್ – ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಿದ ದೇಶದ ಮೊದಲ ರಾಜ್ಯ ಉತ್ತರಾಖಂಡ
ಈ ವೇಳೆ ಪಬ್ಲಿಕ್ ಟಿವಿ ಮುಖ್ಯಸ್ಥ ಎಚ್.ಆರ್.ರಂಗನಾಥ್ ಅವರ ಮನವಿಗೆ ಆಳಂದ ತಾಲೂಕಿನ ಬಿಜೆಪಿ ಮುಖಂಡ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾನಂದ ಗುತ್ತೇದಾರ್ ಅವರು ಪ್ರಭು ಅವರ ಕುಟುಂಬಕ್ಕೆ ನೇರವಿನ ಹಸ್ತ ಚಾಚಿದ್ದಾರೆ. ಪ್ರಭು ಅವರ ಕುಟುಂಬದ ಬೇಡಿಕೆಯಂತೆ 30 ಸಾವಿರ ರೂ. ವೆಚ್ಚದಲ್ಲಿ ಸಣ್ಣ ಕಿರಾಣಿ ಅಂಗಡಿಯೊಂದನ್ನ ಇಟ್ಟುಕೊಟ್ಟು ಜೀವನಕ್ಕೆ ನೆರವಾಗಿದ್ದಾರೆ. ಇದರಿಂದ ಸಂತಸಗೊಂಡಿರುವ ಕುಟುಂಬ `ಪಬ್ಲಿಕ್ ಟಿವಿ’ಗೆ ಧನ್ಯವಾದ ಹೇಳಿದೆ.