ಚಿತ್ರದುರ್ಗ: ಮಠಾಧೀಶರು ಮಠದ ಅಭಿವೃದ್ಧಿಗೆ ಸರ್ಕಾರದ ಅನುದಾನ ಕೇಳೋದು ಸಹಜ. ಆದ್ರೆ ಚಿತ್ರದುರ್ಗದ ಸ್ವಾಮೀಜಿಯೊಬ್ಬರು ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ಹಾಗೂ ಅನ್ನದಾಸೋಹ ಮಾಡಿಸಲಾಗದೇ ಕಣ್ಣೀರಿಡ್ತಾ, ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದಲ್ಲಿ ನೆರವು ಕೋರಿದ್ದರು. ಹೀಗಾಗಿ ಕೇಂದ್ರ ಸಚಿವ ನಾರಾಯಣಸ್ವಾಮಿಯವರ ಗಮನ ಸೆಳೆದ ಪಬ್ಲಿಕ್ ಟಿವಿ ವಿದ್ಯಾರ್ಥಿಗಳ ಸಂಕಷ್ಟಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವ ಮೂಲಕ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅಗತ್ಯ ನೆರವು ಕೊಡಿಸಿದೆ.
Advertisement
ಕೋಟೆನಾಡು ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಸಿದ್ದಯ್ಯನಕೋಟೆಯ ಇಳಕಲ್ ವಿಜಯ ಮಹಂತೇಶ್ವರ ಗುರುಪೀಠದಲ್ಲಿ ಇನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಇಲ್ಲಿನ ಮಕ್ಕಳಿಗೆ ಮಠದಿಂದ ಉಚಿತ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಆದ್ರೆ ಸರ್ಕಾರದಿಂದ ಕೇವಲ 100 ವಿದ್ಯಾರ್ಥಿಗಳಿಗೆ ಅನ್ನದಾಸೋಹಕ್ಕೆ ಮಾತ್ರ ಸಹಾಯಧನ ನೀಡುತ್ತಿರೋದು ಬಿಟ್ಟರೆ ಜಿಲ್ಲೆಯ ಯಾವೊಬ್ಬ ಜನಪ್ರತಿನಿಧಿಯು ಈ ಮಠದತ್ತ ತಿರುಗಿ ನೋಡಿರಲಿಲ್ಲ. ಹೀಗಾಗಿ ಆಂಧ್ರಗಡಿಭಾಗದಲ್ಲಿ ಭಕ್ತರಿಂದ ಬೇಡಿ ಕನ್ನಡ ಶಾಲೆ ಉಳುವಿಗಾಗಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದ ಸ್ವಾಮೀಜಿ, ಮಠದಲ್ಲಿನ ವಿದ್ಯಾರ್ಥಿಗಳು ನೆಲದ ಮೇಲೆ ಮಲಗೋದು ಹಾಗೂ ಪಾಠವನ್ನು ಕೇಳುವುದನ್ನು ನೋಡಲಾಗದೆ ಬೆಳಕು ಕಾರ್ಯಕ್ರಮದ ಮೊರೆಗೆ ಧಾವಿಸಿದ್ದರು. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆಯಿಂದ ಇಡೀ ಮಹಿಳಾ ಕುಲಕ್ಕೆ ಅಪಮಾನ: ಪ್ರಹ್ಲಾದ್ ಜೋಶಿ
Advertisement
Advertisement
ಆಗ ನಾರಾಯಣಸ್ವಾಮಿಯವರ ಗಮನ ಸೆಳೆದ ಪಬ್ಲಿಕ್ ಟಿವಿ ಅವರಿಂದ ಅಗತ್ಯ ಸೌಲಭ್ಯದ ನಿರೀಕ್ಷೆ ಮಾಡಿತ್ತು. ಬೆಳಕು ಕಾರ್ಯಕ್ರಮದ ಬಳಿಕ ಈ ಮಠಕ್ಕೆ ಸ್ವತಃ ನಾರಾಯಣಸ್ವಾಮಿ ಹಾಗೂ ಚಿತ್ರದುರ್ಗ ಎಂಎಲ್‍ಸಿ ನವೀನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಇದೀಗ ಸಚಿವರು ಸಹ ನುಡಿದಂತೆ ನಡೆದಿದ್ದೂ, 200 ವಿದ್ಯಾರ್ಥಿಗಳಿಗೆ ಅಗತ್ಯವಿರುವ ಬೆಡ್, ಕಾಟ್, ಡೆಸ್ಕ್ ವ್ಯವಸ್ಥೆ ಕಲ್ಪಿಸಿದ್ದಲ್ಲದೇ ಮಠ ಹಾಗೂ ಶಾಲೆಯ ಕೊಠಡಿಗಳಿಗೆ ಪೈಂಟ್ ಮಾಡಿಸುವುದಾಗಿ ತಿಳಿಸಿದ್ದಾರೆ. ಹೀಗಾಗಿ ಅಲ್ಲಿನ ವಿದ್ಯಾರ್ಥಿಗಳು ಹಾಗೂ ಸ್ವಾಮೀಜಿಯವರ ಸಂತಸಕ್ಕೆ ಪಾರವೇ ಇಲ್ಲವಾಗಿದ್ದೂ, ಸಚಿವರು ಹಾಗೂ ಪಬ್ಲಿಕ್ ಟಿವಿಗೆ ಧನ್ಯವಾದ ಹೇಳಿದ್ದಾರೆ. ಇದನ್ನೂ ಓದಿ: ಇಂದಿನಿಂದ ಮೂರು ದಿನಗಳ ಕಾಲ ಹರ್ ಘರ್ ತಿರಂಗಾ ಅಭಿಯಾನ
Advertisement
Live Tv
[brid partner=56869869 player=32851 video=960834 autoplay=true]