ವಿಜಯಪುರ: ಸರ್ಕಾರಿ ಶಾಲೆ ಎಂದ ಮೇಲೆ ಮೂಲ ಸೌಕರ್ಯಗಳ ಕೊರತೆ ಇದ್ದೇ ಇರುತ್ತದೆ. ಹಾಗೆಯೇ ಈ ಶಾಲೆಯ ವಿದ್ಯಾರ್ಥಿಗಳು ಬೆಂಚ್ ಕೊರತೆಯಿಂದಾಗಿ ನೆಲದ ಮೇಲೆ ಕುಳಿತು ಅಭ್ಯಾಸ ಮಾಡಬೇಕಾದ ಪರಿಸ್ಥಿತಿ ಇತ್ತು. ಇದರಿಂದ ಆ ಶಾಲೆಯ ಶಿಕ್ಷಕರು `ಪಬ್ಲಿಕ್ ಟಿವಿ ಬೆಳಕು’ (PUBLiC TV Belaku Impact) ಕಾರ್ಯಕ್ರಮದ ಮೊರೆ ಹೋಗಿದ್ದರು. ಇದೀಗ ಶಾಲಾ ಮಕ್ಕಳಿಕೆ ಬೆಂಚ್ ಸೌಲಭ್ಯ ಒದಗಿ ಬಂದಿದೆ.ಇದನ್ನೂ ಓದಿ: 7.99 ಲಕ್ಷಕ್ಕೆ ಅತ್ಯಾಕರ್ಷಕ ಹೊಸ ಅಮೇಜ್ ಕಾರು ಬಿಡುಗಡೆ
Advertisement
ವಿಜಯಪುರ (Vijayapura) ನಗರದ ಟಕ್ಕೆ ಬಡವಾಣೆಯಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಂ.49. ಉತ್ತಮ ಶಿಕ್ಷಕರ ವೃಂದ, ಕೊಠಡಿ, ಮೈದಾನ ಹೊಂದಿದ್ದ ಈ ಶಾಲೆಯಲ್ಲಿ 1 ರಿಂದ 8ನೇ ತರಗತಿಯವರೆಗೆ ಒಟ್ಟು 321 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದರು. ಶಾಲೆಯಲ್ಲಿ ಒಟ್ಟು 10 ಕೊಠಡಿಗಳಿದ್ದು, 9 ದೈನಂದಿನ ಶಿಕ್ಷಕರು ಹಾಗೂ 3 ಜನ ಅತಿಥಿ ಶಿಕ್ಷಕರಿದ್ದಾರೆ. ಶಾಲೆಯ 3, 4, 5, 6, 7, 8ನೇ ತರಗತಿಯ ವಿದ್ಯಾರ್ಥಿಗಳಿಗೆ 125 ಡೆಸ್ಕ್ಗಳ ಅವಶ್ಯಕತೆ ಇತ್ತು. ಈ ಸಮಸ್ಯೆಯ ಮೇಲೆ `ಪಬ್ಲಿಕ್ ಟಿವಿ’ `ಬೆಳಕು’ ಚೆಲ್ಲಿತ್ತು, ನ.16 ರಂದು ಕಾರ್ಯಕ್ರಮವೊಂದನ್ನ ಬಿತ್ತರಿಸಿತ್ತು.
Advertisement
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು ಬೆಂಚ್ ಇಲ್ಲದೇ ಬಡ ವಿದ್ಯಾರ್ಥಿಗಳಿಗೆ ಬಹಳ ತೊಂದರೆ ಆಗುತ್ತಿದೆ ಅಳಲು ತೋಡಿಕೊಂಡಿದ್ದರು. ಆಗ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್ ರಂಗನಾಥ್ ಅವರು ಬೆಂಚ್ ಸೌಲಭ್ಯ ಒದಗಿಸಿಕೊಡುವುದಾಗಿ ಭರವಸೆ ನೀಡಿದ್ದರು. ದಾನಿಗಳಾದ ವಿಜಯಪುರ ನಿವಾಸಿ ವಿಶ್ವನಾಥ ಅವರನ್ನು ಸಂಪರ್ಕಿಸಿ ಶಾಲೆಯ ಸಮಸ್ಯೆ ಬಗ್ಗೆ ವಿವರಿಸಿದರು. ವಿಶ್ವನಾಥ ಅವರು ಮುಂಬೈನ ಶ್ರೀ ತಪದಿದಾಸ ತುಳಸಿದಾಸ ವ್ರಜದಾಸ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಬೆಂಚ್ ಕೊಡಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಶಾಲೆಗೆ 125 ಡೆಸ್ಕ್ಗಳನ್ನು ಒದಗಿಸಿದ್ದಾರೆ.
Advertisement
ಸದ್ಯ `ಬೆಳಕು’ ಕಾರ್ಯಕ್ರಮದಿಂದ ಸರ್ಕಾರಿ ಶಾಲೆಯ ಬಹುದಿನಗಳ ಸಮಸ್ಯೆ ಬಗೆಹರಿದಿದೆ. ವಿದ್ಯಾರ್ಥಿಗಳು ಸಂತೋಷ ವ್ಯಕ್ತಪಡಿಸಿದ್ದು, `ಪಬ್ಲಿಕ್ ಟಿವಿ’ಗೆ ಅಭಿನಂದನೆ ಸಲ್ಲಿಸಿದ್ದಾರೆ.ಇದನ್ನೂ ಓದಿ: ಮುಡಾ ಕೇಸ್‌ನಲ್ಲಿ ಇಡಿ ಎಂಟ್ರಿಯೇ ದುರುದ್ದೇಶ – ಸುಧಾಕರ್