– ಗಡಿ ಭಾಗದ ಕನ್ನಡ ಶಾಲೆಗಳಿಗೆ ರಾಜ್ಯ ಸರ್ಕಾರದಿಂದ ನಲಿ-ಕಲಿ ಪರಿಕರ ವಿತರಣೆ
ವಿಜಯಪುರ: ರಾಜ್ಯದ ಮಹರಾಷ್ಟ್ರ ಗಡಿಭಾಗದಲ್ಲಿರುವ ಕನ್ನಡ ಶಾಲೆಗೆ (Kannada School) ಮಹರಾಷ್ಟ್ರ (Maharashtra) ಸರ್ಕಾರ ಮರಾಠಿ (Marathi) ಭಾಷೆಯ ನಲಿಕಲಿ ಪರಿಕರಗಳನ್ನು ಒದಗಿಸಿತ್ತು. ಇದರಿಂದಾಗಿ ಕನ್ನಡದ ಕಂದಮ್ಮಗಳು ಪರದಾಡುತ್ತಿದ್ದವು. ಈ ಸಮಸ್ಯೆಯನ್ನು `ಪಬ್ಲಿಕ್ ಟಿವಿ ಬೆಳಕು’ (PUBLiC TV Belaku Program) ಕಾರ್ಯಕ್ರಮ ಸೆ.8 ರಂದು ಬಿತ್ತರಿಸಿತ್ತು.
Advertisement
ಇದರ ಪರಿಣಾಮ ಇದೇ ಸೆ.30 ರಂದು ಸಿಎಂ ಸಿದ್ದರಾಮಯ್ಯ (CM Siddaramaiah) ಗಡಿ ಭಾಗದ ಕನ್ನಡ ಶಾಲೆಗಳಿಗೆ ಕನ್ನಡ ನಲಿಕಲಿ ಪರಿಕರಗಳನ್ನು ಘೋಷಣೆ ಮಾಡಲಿದ್ದಾರೆ. ನಲಿಕಲಿ ಪರಿಕರ ಒದಗಿಸಿಕೊಡುವ ಮೂಲಕ ಕನ್ನಡ ಕಂದಮ್ಮಗಳಿಗೆ ಪಬ್ಲಿಕ್ ಟಿವಿ ಬೆಳಕನ್ನು ನೀಡಿದೆ.ಇದನ್ನೂ ಓದಿ: ಪಾಕ್‌ನಲ್ಲಿ ಶಿಯಾ, ಸುನ್ನಿ ಮುಸ್ಲಿಮರ ಮಧ್ಯೆ ಘರ್ಷಣೆ – 46 ಸಾವು, 150ಕ್ಕೂ ಹೆಚ್ಚು ಮಂದಿಗೆ ಗಾಯ
Advertisement
Advertisement
ರಾಜ್ಯಾದ್ಯಂತ ನೆರೆಯ ರಾಜ್ಯಗಳ ಗಡಿ ಭಾಗದಲ್ಲಿ ಕನ್ನಡ ಶಾಲೆಗಳು ಕೆಲಸ ನಿರ್ವಹಿಸುತ್ತಿವೆ. ಅದೇ ರೀತಿ ವಿಜಯಪುರ ಜಿಲ್ಲೆಯ ಗಡಿ ರಾಜ್ಯವಾದ ಮಹರಾಷ್ಟ್ರದ ಗಡಿ ಭಾಗದಲ್ಲಿ ಕನ್ನಡ ಶಾಲೆಗಳು ಕನ್ನಡ ಸಾಹಿತ್ಯ, ಸಂಸ್ಕೃತಿಯನ್ನು ಪಸರಿಸುತ್ತಿವೆ. ಆದರೆ ಮಹಾರಾಷ್ಟ್ರ ಸರ್ಕಾರ ಈ ಶಾಲೆಗಳಿಗೆ ಮರಾಠಿ ಭಾಷೆಯ ನಲಿಕಲಿ ಪರಿಕರಗಳನ್ನು ಒದಗಿಸಿದೆ. ಇದರಿಂದ ಕನ್ನಡದ ಕಂದಮ್ಮಗಳು ಪರದಾಡುತ್ತಿದ್ದವು. ಈ ಸಮಸ್ಯೆಯನ್ನು ಇಟ್ಟುಕೊಂಡು ಗಡಿ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಬೆಳಕು ಕಾರ್ಯಕ್ರಮಕ್ಕೆ ಬಂದಿದ್ದರು.
Advertisement
ಅನೇಕ ಕನ್ನಡ ಶಾಲೆಗಳು ಅತೀ ಉತ್ಸುಕತೆಯಿಂದ ಕೆಲಸ ಮಾಡುತ್ತಿದ್ದು, ವಿದ್ಯಾರ್ಥಿಗಳು ಕೂಡ ಬಹಳ ಉತ್ಸುಕತೆಯಿಂದ ಶಾಲೆಗೆ ಹೋಗುತ್ತಿದ್ದಾರೆ. ಜೊತೆಗೆ ಮಹಾರಾಷ್ಟ್ರ ಸರ್ಕಾರ ಕೂಡ ಅನೇಕ ಮೂಲಭೂತ ಸೌಕರ್ಯಗಳನ್ನು ಒದಗಿಸಿತ್ತು. ಆದರೆ ನಲಿ-ಕಲಿ ಪರಿಕರಗಳನ್ನು ಮರಾಠಿ ಭಾಷೆಯಲ್ಲಿ ಮುದ್ರಿಸಿ ಕನ್ನಡ ಶಾಲೆಗೆ ವಿತರಿಸಿತ್ತು. ಇದರಿಂದ ಪ್ರತಿ ನಿತ್ಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪರದಾಡುವಂತಾಗಿತ್ತು. ಈ ಸಮಸ್ಯೆಯನ್ನು ಇಟ್ಟುಕೊಂಡು ಮಹರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ ಬಾಲಗಾಂವ ಗ್ರಾಮದ ಜಿಲ್ಲಾ ಪರಿಷದ್ ಪ್ರಾಥಮಿಕ ಕನ್ನಡ ಶಾಲೆಯವರು ಬೆಳಕು ಕಾರ್ಯಕ್ರಮಕ್ಕೆ ಸೆ.8 ರಂದು ಬಂದಿದ್ದರು.
ಈ ಸಮಸ್ಯೆಯನ್ನು ಪಬ್ಲಿಕ್ ಟಿವಿ ವಾಹಿನಿಯೂ ಯಳಯಳೆಯಾಗಿ ವಿವರಿಸಿತ್ತು. ಬಾಲಗಾಂವ ಶಾಲೆಗೆ ಪಬ್ಲಿಕ್ ಟಿವಿಯಿಂದಲೇ ನಲಿಕಲಿ ಪರಿಕರಗಳನ್ನು ಒದಗಿಸುವುದಾಗಿ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್. ಆರ್ ರಂಗನಾಥ್ (H R Ranganath) ಸರ್ ಭರವಸೆ ನೀಡಿದ್ದರು. ಜೊತೆಗೆ ಈ ಸಮಸ್ಯೆ ಬಗ್ಗೆ ಸಿಎಂ ಸೇರಿದಂತೆ ಸಂಬಂಧಿಸಿದವರ ಕಡೆ ಮಾತನಾಡಿ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದರು.
ಹೆಚ್.ಆರ್ ರಂಗನಾಥ್ ಅವರು ನಡೆಸಿಕೊಟ್ಟ ನಲಿಕಲಿಯ ಬೆಳಕು ಕಾರ್ಯಕ್ರಮವನ್ನು ರಾಜ್ಯ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ (Sommanna Bevinamarad) ವೀಕ್ಷಿಸಿದ್ದಾರೆ. ನಂತರ ಈ ಸಮಸ್ಯೆ ಬಗ್ಗೆ ಸಿಎಂ ಜೊತೆ ಕೂಡ ಚರ್ಚಿಸಿದ್ದಾರೆ. ಇದರ ಫಲವಾಗಿ ಇದೇ ತಿಂಗಳ 30 ರಂದು ಮಹಾರಾಷ್ಟ್ರದ ಸಾಂಗ್ಲಿ (Sangli) ಜಿಲ್ಲೆಯ ಜತ್ತ (Jath) ತಾಲೂಕಿನ ಗುಡ್ಡಾಪುರದಲ್ಲಿ (Guddapura) ಕರ್ನಾಟಕ ಸಂಭ್ರಮ – 50 ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ಖುದ್ದು ಸಿಎಂ ಸಿದ್ಧರಾಮಯ್ಯ ಭಾಗಿಯಾಗಲಿದ್ದಾರೆ.
ಈ ಮೂಲಕ ಎಲ್ಲ ಗಡಿ ರಾಜ್ಯಗಳ ಕನ್ನಡ ಶಾಲೆಗೆ ನಲಿಕಲಿ ಪರಿಕರಗಳನ್ನು ಒದಗಿಸುವುದಾಗಿ ಘೋಷಣೆ ಮಾಡಲಿದ್ದಾರೆ. ಅಲ್ಲದೆ ಎರಡು ದಿನದಲ್ಲಿ ರಾಜ್ಯದ ಎಲ್ಲಾ ಗಡಿ ಭಾಗದ ಕನ್ನಡ ಶಾಲೆಗೆ ನಲಿಕಲಿ ಪರಿಕರಗಳನ್ನ ಒದಗಿಸುವುದಾಗಿ ಬೇವಿನಮರದ ಸ್ಪಷ್ಟಪಡಿಸಿದ್ದಾರೆ. ಇಂತಹ ಸಮಸ್ಯೆಯನ್ನು ಬಿತ್ತರಿಸಿದಕ್ಕೆ ಪಬ್ಲಿಕ್ ಟಿವಿಗೆ ಹಾಗೂ ರಂಗನಾಥ್ ಸರ್‌ಗೆ ಅಭಿನಂದನೆ ಸಲ್ಲಿದ್ದಾರೆ. ಇನ್ನೂ ಈ ಸುದ್ದಿಯನ್ನು ತಿಳಿದು ಗಡಿ ಭಾಗದ ಕನ್ನಡ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಪಬ್ಲಿಕ್ ಟಿವಿಗೆ ಅಭಿನಂದನೆ ಸಲ್ಲಿಸಿದ್ದಾರೆ.ಇದನ್ನೂ ಓದಿ: ಐಎಎಸ್ ಅಧಿಕಾರಿ ಪತ್ನಿ ರೇಪ್ ಕೇಸ್; ತನಿಖೆಯಲ್ಲಿ ಲೋಪವೆಸಗಿದ ಪೊಲೀಸರ ವಿರುದ್ಧ ಕ್ರಮಕ್ಕೆ ಕೋಲ್ಕತ್ತಾ ಹೈಕೋರ್ಟ್ ಸೂಚನೆ