ಚಿಕ್ಕಬಳ್ಳಾಪುರ: ಕಾಲೇಜು ಶುಲ್ಕ ಪಾವತಿಸಲು ಸಾಧ್ಯವಾಗದ್ದಕ್ಕೆ ಸಹಾಯ ಕೋರಿ ಪಬ್ಲಿಕ್ ಟಿವಿಗೆ (PUBLiC TV) ಪತ್ರ ಬರೆದಿದ್ದ ವಿದ್ಯಾರ್ಥಿನಿಗೆ ಇದೀಗ `ಪಬ್ಲಿಕ್ ಟಿವಿ ಬೆಳಕು’ ಕಾರ್ಯಕ್ರಮದಿಂದ ಸಹಾಯ ಹಸ್ತ ಒದಗಿ ಬಂದಿದೆ.
ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಶಿಡ್ಲಘಟ್ಟ (Shidlaghatta) ತಾಲೂಕಿನ ವರಸಂದ್ರ ಗ್ರಾಮದ ವಿದ್ಯಾರ್ಥಿನಿ ಭವ್ಯ ಬೆಂಗಳೂರಿನ ನ್ಯೂ ಹಾರಿಜನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೂರನೇ ವರ್ಷದ ಬಿಇ ಉನ್ನತ ವ್ಯಾಸಂಗ ಮಾಡುತ್ತಿದ್ದಾಳೆ. ಆದರೆ ಮನೆಯಲ್ಲಿ ಕಾಲೇಜು ಶುಲ್ಕ ಪಾವತಿಸಲು ಪೋಷಕರು ಅಸಹಾಯಕರಾಗಿದ್ದರು. ಹೀಗಾಗಿ ಮಗಳಿಗೆ ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳುವ ಇಂಗಿತದಲ್ಲಿದ್ದರು.ಇದನ್ನೂ ಓದಿ: ಬೆದರಿಕೆಯ ನಡುವೆಯೂ ರಶ್ಮಿಕಾ ಜೊತೆ ಶೂಟಿಂಗ್‌ನಲ್ಲಿ ಸಲ್ಮಾನ್ ಖಾನ್ ಬ್ಯುಸಿ
ಈ ವೇಳೆ ಬಿಇ ಪದವಿ ಪೂರೈಸಬೇಕೆಂಬ ಮಹದಾಸೆಯಿಂದ ಎಂಜಿನಿಯರಿಂಗ್ ವಿದ್ಯಾಭ್ಯಾಸಕ್ಕೆ ಸಹಾಯ ಕೋರಿ, ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮಕ್ಕೆ ಪತ್ರ ಬರೆದಿದ್ದಳು. ಬೆಳಕು ಕಾರ್ಯಕ್ರಮದ ಫಲವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಕಾಂಗ್ರೆಸ್ ಮುಖಂಡ ಹಾಗೂ ಸಮಾಜಸೇವಕ ಪುಟ್ಟು ಅಂಜನಪ್ಪ ಸಹಾಯ ಹಸ್ತ ಚಾಚಿದ್ದಾರೆ.
ಈಗ ಮೂರನೇ ವರ್ಷದಲ್ಲಿ ಓದುತ್ತಿದ್ದು, ಕಾಲೇಜು ಶುಲ್ಕ 1 ಲಕ್ಷ 36 ಸಾವಿರದ 696 ರೂ. ಆಗಿದೆ. ಈ ಹಣವನ್ನು ಪುಟ್ಟ ಅಂಜನಪ್ಪನವರು ಪಾವತಿಸಿದ್ದಾರೆ. ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ಸಹಾಯ ನೀಡಿದ ಪುಟ್ಟ ಅಂಜನಪ್ಪ ಹಾಗೂ ಪಬ್ಲಿಕ್ ಟಿವಿಗೆ ವಿದ್ಯಾರ್ಥಿನಿ ಭವ್ಯ ಧನ್ಯವಾದಗಳನ್ನು ತಿಳಿಸಿದ್ದಾಳೆ.ಇದನ್ನೂ ಓದಿ: ದೀಪಾವಳಿಯಂದು ಕೆಎಸ್‌ಆರ್‌ಟಿಸಿಗೆ ಬಂಪರ್ – ಒಂದೇ ದಿನ ಬರೋಬ್ಬರಿ 5.59 ಕೋಟಿ ಆದಾಯ