ಬಳ್ಳಾರಿ: ಸರ್ಕಾರ ಸರ್ಕಾರಿ ಶಾಲಾ ಮಕ್ಕಳ ಶಿಕ್ಷಣಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತೆ. ಆದರೆ ಬಹುತೇಕ ಶಾಲೆಗಳಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಸರಿಯಾದ ಕಟ್ಟಡ ಹಾಗೂ ಆಟದ ಮೈದಾನ ಇರಲ್ಲ. ಗಣಿ ನಾಡು ಬಳ್ಳಾರಿ (Bellary) ಯಲ್ಲಿ ಸರ್ಕಾರಿ ಶಾಲೆಗಳ ದುಸ್ಥಿತಿಯನ್ನು ಪಬ್ಲಿಕ್ ಬೆಳಕು ಕಾರ್ಯಕ್ರಮದ ಮೂಲಕ ಪ್ರಸಾರ ಮಾಡಿತ್ತು. ಪಬ್ಲಿಕ್ ಟಿವಿ ಬೆಳಕು (Public TV Belaku) ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದರು. ಆದರೆ ಇಂದು ಆ ಸಮಸ್ಯೆಗೆ ಮುಕ್ತಿ ಸಿಕ್ಕಿದೆ.
ಹೌದು. ಗಣಿ ನಾಡು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಕುಡುತಿನಿ ಗ್ರಾಮದ ಸರ್ಕಾರಿ ಶಾಲೆ ಇಂದಲ್ಲಾ ನಾಳೆ ಬೀಳುವ ಹಂತ ತಲಯಪಿತ್ತು. ಈ ಕುರಿತು ಕಳೆದ ನವೆಂಬರ್ 18ರಂದು ಪಬ್ಲಿಕ್ ಟಿವಿಯಲ್ಲಿ ಬೆಳಕು ಕಾರ್ಯಕ್ರಮ ಪ್ರಸಾರವಾಗಿತ್ತು. ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್ ರಂಗನಾಥ್ (H R Ranganath) ಸರ್ ಬಳಿ ಶಾಲಾ ಮಕ್ಕಳು ಅಳಲು ತೋಡಿಕೊಂಡಿದ್ರು. ಶಾಲಾ ದುರಸ್ತಿ ಕಾರ್ಯಕ್ಕೆ ಮನವಿ ಮಾಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು (Sriramulu), ಕಾರ್ಯಕ್ರಮದಲ್ಲಿ ಮಾತನಾಡಿ ಶಾಲೆಯ ಸಮಸ್ಯೆಯನ್ನು ಕೂಡಲೇ ಬಗೆಹರಿಸುವ ಭರವಸೆ ನೀಡಿದ್ದರು. ಇದನ್ನೂ ಓದಿ: ಕೊರೊನಾ ಆತಂಕದ ಮಧ್ಯೆ ವೈಕುಂಠ ಏಕಾದಶಿ- ಹೊಸ ವರ್ಷದಲ್ಲಿ ದೇವಸ್ಥಾನಕ್ಕೆ ಭಕ್ತಸಾಗರ
ಕಾರ್ಯಕ್ರಮ ಪ್ರಸಾರ ಆದ ಎರಡೇ ತಿಂಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಮುತುವರ್ಜಿ ವಹಿಸಿ ಶಾಲೆಗೆ ಕಾಂಪೌಂಡ್ ಹಾಗೂ ಒಂದು ಹಳೆಯ ಕಟ್ಟಡ ನೆಲಸಮ ಮಾಡಿಸಿದ್ದಾರೆ. ನಾಲ್ಕು ಶಾಲಾ ಕೊಠಡಿಯ ದುರಸ್ತಿ ಕಾರ್ಯ ನಡೆಸಲಾಗುತ್ತಿದೆ. ಈಗಾಗಲೇ ಶಾಲಾ ದುರಸ್ತಿ ಕಾರ್ಯ ಆರಂಭ ಮಾಡಲಾಗಿದೆ. ಹೀಗಾಗಿ ಶಾಲೆಯ ಹಳೆಯ ವಿದ್ಯಾರ್ಥಿಗಳು ಹಾಗೂ ಶಾಲಾ ಮುಖ್ಯ ಶಿಕ್ಷಕರು ಪಬ್ಲಿಕ್ ಟಿವಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಅದೆಷ್ಟೋ ಸಮಸ್ಯೆಗೆ ಪರಿಹಾರ ನೀಡಿದ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮ ಗಣಿ ನಾಡಿನ ಸರ್ಕಾರಿ ಶಾಲೆಯ ಮಕ್ಕಳ ಭವಿಷ್ಯಕ್ಕೆ ಬೆಳಕು ಚೆಲ್ಲಿದೆ. ಗ್ರಾಮಸ್ಥರು, ವಿದ್ಯಾರ್ಥಿಗಳು ಪಬ್ಲಿಕ್ ಟಿವಿಗೆ ಧನ್ಯವಾದ ತಿಳಿಸಿದ್ದಾರೆ.