ಪಬ್ಲಿಕ್‌ ಟಿವಿ ಕ್ರಿಕೆಟ್‌ ಟೂರ್ನಿ – ಪಬ್ಲಿಕ್‌ ವಾರಿಯರ್ಸ್‌ ಚಾಂಪಿಯನ್‌

Public TV
1 Min Read
public tv anniversary cricket tournament public warriors Champion bengaluru

ಬೆಂಗಳೂರು: ಪಬ್ಲಿಕ್ ಟಿವಿಯ(PUBLiC TV) 13ನೇ ವಾರ್ಷಿಕೋತ್ಸವ ಪ್ರಯುಕ್ತ ನಡೆದ ಪಬ್ಲಿಕ್ ಟಿವಿ ಸಹೋದ್ಯೋಗಿಗಳ ಕ್ರಿಕೆಟ್ ಪಂದ್ಯಾವಳಿಯಲ್ಲಿ (Cricket Tournament) ಪಬ್ಲಿಕ್ ವಾರಿಯರ್ಸ್ ತಂಡ ಭರ್ಜರಿ ಗೆಲುವು ದಾಖಲಿಸುವ ಮೂಲಕ ಈ ವರ್ಷದ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಮತ್ತಿಕೆರೆಯ ಜಯಪ್ರಕಾಶ್ ನಾರಾಯಣ್ ಪಾರ್ಕ್ ಮೈದಾನದಲ್ಲಿ ನಡೆದ ಹೊನಲು ಬೆಳಕಿನ ಪಂದ್ಯದಲ್ಲಿ ನರಸಿಂಹ ಮೂರ್ತಿ ನಾಯಕತ್ವದ ಪಬ್ಲಿಕ್ ಕ್ಯಾಪ್ಟನ್ ತಂಡದ ವಿರುದ್ಧ ಲೋಕೇಶ್ ನಾಯಕತ್ವದ ಪಬ್ಲಿಕ್ ವಾರಿಯರ್ಸ್ ತಂಡ 11 ರನ್‌ಗಳ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.  ಇದನ್ನೂ ಓದಿ: ಗಂಭೀರ್‌ಗೆ ಪಿಚ್ ಬಗ್ಗೆ ಗೊತ್ತಿಲ್ಲ, ಕ್ರಿಕೆಟ್‍ನ ಅರಿವಿಲ್ಲ: ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ

 
ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವಾರಿಯರ್ಸ್ ತಂಡ 5 ವಿಕೆಟ್ ನಷ್ಟಕ್ಕೆ 65 ರನ್‌ ಗಳಿಸಿತು. 66 ರನ್‌ಗಳ ಗುರಿಯನ್ನು ಬೆನ್ನತ್ತಿದ ಪಬ್ಲಿಕ್ ಕ್ಯಾಪ್ಟನ್ ತಂಡ ಯಾವುದೇ ವಿಕೆಟ್‌ ಕಳೆದುಕೊಳ್ಳದಿದ್ದರೂ 55 ರನ್‌ ಗಳಿಸಲಷ್ಟೇ ಶಕ್ತವಾಯಿತು.

ವಿಜೇತ ತಂಡಕ್ಕೆ ಫೆಬ್ರವರಿ 12 ರಂದು ನಡೆಯಲಿರುವ ಪಬ್ಲಿಕ್ ಟಿವಿ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಹೆಚ್.ಆರ್. ರಂಗನಾಥ್ ಅವರು ಟ್ರೋಫಿ ವಿತರಣೆ ಮಾಡಲಿದ್ದಾರೆ.

 

Share This Article