ಬೆಂಗಳೂರು: ಕರ್ನಾಟಕ ಎಂದರೆ ವಾಹಿನಿಗಳಿಗೆ ಬೆಂಗಳೂರು ಮಾತ್ರವೇ ಯಾಕೆ ಎಂದು ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಒಕ್ಕೂಟದ ಸಂಚಾಲಕ ಡಾ.ಚಂದ್ರಶೇಖರ ಸಾಂಬ್ರಾಣಿ ಪ್ರಶ್ನಿಸಿದ್ದಾರೆ.
ವಿಶೇಷ ಬಿಗ್ ಬುಲೆಟಿನ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಾಹಿನಿಗಳು ಬೆಂಗಳೂರನ್ನು ಬಿಟ್ಟು ಉತ್ತರ ಕರ್ನಾಟಕದ ಕಡೆ ಬರಬೇಕು. ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಧ್ವನಿಯಾಗಬೇಕು ಎಂದು ಹೇಳಿದರು.
Advertisement
ಈ ವೇಳೆ ಯಾಕೆ ನಿಮ್ಮ ಸಹ ನಿರೂಪಕರಿಗೆ ನೀವು ಮಾತನಾಡಲು ಬಿಡುವುದಿಲ್ಲ ಎಂದು ಚಂದ್ರಶೇಖರ ಸಾಂಬ್ರಾಣಿ ಪ್ರಶ್ನಿಸಿದರು.
Advertisement
ನವಲಗುಂದದ ಜೆಡಿಎಸ್ ಶಾಸಕ ಕೋನ ರೆಡ್ಡಿ ಮಾತನಾಡಿ, ನಾನು ಸಿಟ್ಟನ್ನು ಒಪ್ಪಿಕೊಳ್ಳುತ್ತೇನೆ. ಉತ್ತರ ಕರ್ನಾಟಕದಲ್ಲಿ ಬೈಗುಳವೇ ವಿಶೇಷ. ವ್ಯಕ್ತಿಯನ್ನು ಬೈದುಕೊಂಡೆ ಹೊಗಳುತ್ತೇವೆ. ಹೀಗಾಗಿ ಜನ ಸಾಮಾನ್ಯ ಭಾಷೆ ಮತ್ತು ಸರಳ ವಿವರಣೆಯಿಂದ ಬಿಗ್ ಬುಲೆಟಿನ್ ಗ್ರಾಮೀಣ ಭಾಗದ ಜನತೆಗೆ ಇಷ್ಟವಾಗುತ್ತದೆ ಎಂದು ಹೇಳಿದರು.
Advertisement
ನೀವು ಅತಿಥಿಗಳಿಗೆ ಮಾತನಾಡಲು ಬಿಡುವುದಿಲ್ಲ. ಬಹಳಷ್ಟು ಸಲ ನನಗೆ ಈ ಅನುಭವ ಆಗಿದೆ. ಕಳಸಾ ಬಂಡೂರಿ ಸಮಸ್ಯೆ ವೇಳೆ ನಿಮ್ಮ ವಾಹಿನಿ ಉತ್ತಮವಾಗಿ ಕೆಲಸ ಮಾಡಿದೆ ಎಂದು ಹೇಳಿದರು.
Advertisement
ಕಾರ್ಯಕ್ರಮದ ಆರಂಭದಲ್ಲಿ ಮಾತನಾಡಿದ ರಂಗನಾಥ್, ಪ್ರಜಾಪ್ರಭುತ್ವದಲ್ಲಿ ನಾವು ಪ್ರಶ್ನಾತೀತ ವ್ಯಕ್ತಿಗಳಲ್ಲ. ನಾವು ಹೇಗೆ ಪ್ರಶ್ನೆ ಮಾಡುತ್ತೇವೋ ಅದೇ ರೀತಿಯಾಗಿ ನಮ್ಮನ್ನು ಜನ ಪ್ರಶ್ನೆ ಮಾಡಬೇಕು. ಇಲ್ಲಿ ಪಬ್ಲಿಕ್ ಟಿವಿಯನ್ನು ಹೊಗಳಿ ಮಾತನಾಡಬಾರದು, ನಮ್ಮ ತಪ್ಪುಗಳನ್ನು ತೋರಿಸಿ ಟೀಕಿಸಬೇಕು ಎಂದು ಅತಿಥಿಗಳನ್ನು ಕೇಳಿಕೊಂಡಿದ್ದರು.
ಸಂವಾದದ ಕೊನೆಯಲ್ಲಿ ಎಲ್ಲ ಅತಿಥಿಗಳ ಪ್ರಶ್ನೆಗೆ ಉತ್ತರಿಸಿದ ರಂಗನಾಥ್, ನಿಮ್ಮೆಲ್ಲರ ಸಲಹೆಯನ್ನು ಪರಿಗಣಿಸಿದ್ದೇನೆ. ನಾಳೆಯಿಂದಲೇ ನಿಮ್ಮ ಸಲಹೆಗಳು ಜಾರಿ ಆಗುತ್ತದೆ ಎಂದು ಹೇಳಲಾರೆ. ಆದರೆ ಮುಂದಿನ ದಿನಗಳಲ್ಲಿ ನೀವು ಪಬ್ಲಿಕ್ ಟಿವಿಯಲ್ಲಿ ಬದಲಾವಣೆಯನ್ನು ಕಾಣಲಿದ್ದೀರಿ ಎಂದು ತಿಳಿಸಿದರು.
ಈ ವಿಶೇಷ ಕಾರ್ಯಕ್ರಮದಲ್ಲಿ ಮಾಜಿ ಅಡ್ವೋಕೇಟ್ ಜನರಲ್ ಬಿವಿ ಆಚಾರ್ಯ, ಹಿರಿಯ ಪತ್ರಕರ್ತ ಸತ್ಯನಾರಾಯಣ, ನಟ ಮುಖ್ಯಮಂತ್ರಿ ಚಂದ್ರು, ಹಿರಿಯ ನಟಿ ಅರುಂಧತಿ ನಾಗ್, ನಿವೃತ್ತ ಡಿಜಿ, ರೇವಣ ಸಿದ್ದಯ್ಯ, ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್, ನಾರಾಯಣ ನೇತ್ರಾಲಯ ಮುಖ್ಯಸ್ಥ ಡಾ. ಭುಜಂಗ ಶೆಟ್ಟಿ, ಹಿಂದುಳಿದ ವರ್ಗಗಳ ಮಾಜಿ ಅಧ್ಯಕ್ಷ ದ್ವಾರಕನಾಥ್, ಬಿಜೆಪಿ ಮುಖಂಡ ಅಶ್ವತ್ಥ ನಾರಾಯಣ, ಮಹಿಳಾ ಹೋರಾಟಗಾರ್ತಿ ವಿಮಲಾ ಅತಿಥಿಗಳಾಗಿ ಭಾಗವಹಿಸಿದ್ದರು.