ಬೆಂಗಳೂರು: ಪಬ್ಲಿಕ್ ಟಿವಿಯ ಎರಡನೇ ಆವೃತ್ತಿಯ ಆಹಾರ ಮೇಳಕ್ಕೆ ಯಶಸ್ವಿ ಚಾಲನೆ ಸಿಕ್ಕಿದೆ.
ಮಲ್ಲೇಶ್ವರಂನ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಇಂದು ಮತ್ತು ನಾಳೆ ಆಹಾರ ಮೇಳ ನಡೆಯಲಿದ್ದು, ಅತಿಥಿಗಳು ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
Advertisement
ಈ ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಎಚ್. ಆರ್ ರಂಗನಾಥ್, ಪೆಪ್ಸ್ ಮ್ಯಾಟ್ರಿಸ್‍ನ ಮ್ಯಾನೇಜಿಂಗ್ ಡೈರೆಕ್ಟರ್ ಶ್ರೀ ಕೆ. ಮಾಧವನ್, ಟೈಟಲ್ ಸ್ಪಾನ್ಸರ್ ನಿತ್ಯಾಮೃತ ನೋನಿಯ ಕಮಲಾಕರ್ ಭಟ್, ಎಂ.ಕೆ ಆಗ್ರೋಟೆಕ್ ಸನ್ ಫ್ಯೂರ್ ಸನ್ ಪ್ಲವರ್ ಆಯಿಲ್ ರಿಜಿನಲ್ ಮ್ಯಾನೇಜರ್ ಸುಹೇಲ್ ಎಂ.ಎನ್, ಕೆಎಂಎಫ್ ಎಂಡಿ ಬಿ.ಸಿ ಸತೀಶ್, ಥ್ಯಾಂಕೋಸ್ ನ್ಯಾಚುರಲ್ ಐಸ್ ಕ್ರೀಮ್ ಎಂಡಿ ರಾಘವೇಂದ್ರ ಥಾಣೆ, ಥಾಟ್ ಬಾಕ್ಸ್ ಡೈರೆಕ್ಟರ್ ಕರಣ್, ನಟ ಪ್ರಜ್ವಲ್ ದೇವರಾಜ್, ನಟಿ ನಿಶ್ವಿಕಾ ನಾಯ್ಡು, ನಿರ್ದೇಶಕ ಗುರು ದೇಶಪಾಂಡೆ ಉಪಸ್ಥಿತರಿದ್ದರು.
Advertisement
Advertisement
ಆಹಾರ ಮೇಳದಲ್ಲಿ 30 ಬಗೆಯ ಆಹಾರ ಮಳಿಗೆಗಳು ಇದೆ. ಕರ್ನಾಟಕ ಸೇರಿದಂತೆ ಭಾರತದ ವಿವಿಧ ಪ್ರಸಿದ್ಧ ಆಹಾರ ಖಾದ್ಯಗಳು ಆಹಾರ ಮೇಳದಲ್ಲಿ ಲಭ್ಯವಿದೆ. ಒಂದೇ ಸೂರಿನಡಿ ನೂರಾರು ಆಹಾರ ಖಾದ್ಯಗಳು ದೊರೆಯಲಿದೆ. ಆಹಾರ ಮೇಳಕ್ಕೆ ಬರಲು ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಆಹಾರ ಮೇಳಕ್ಕೆ ಬಂದು ಹೆಸರು ನೋಂದಾಯಿಸಿದ ಗ್ರಾಹಕರಿಗೆ ಪ್ರತಿ ಅರ್ಧ ಗಂಟೆಗೆ ಒಮ್ಮೆ ಲಕ್ಕಿ ಕೂಪನ್ ಬಹುಮಾನ ನೀಡಲಾಗುತ್ತದೆ. ಜೊತೆಗೆ ಇಂದು ಮಹಿಳೆಯರಿಗೆ ಪಾನಿಪೂರಿ ತಿನ್ನುವ ಸ್ಫರ್ಧೆ ಆಯೋಜಿಸಲಾಗಿದೆ. ಭಾನುವಾರ ಪುರುಷರಿಗೆ ಇಡ್ಲಿ ತಿನ್ನುವ ಸ್ಫರ್ಧೆ ಇರಲಿದ್ದು, ಆಹಾರ ಮೇಳಕ್ಕೆ ಭೇಟಿ ಕೊಟ್ಟು ಇಷ್ಟವಾದ ಖಾದ್ಯವನ್ನ ಸೇವನೆ ಮಾಡಿ, ಸ್ಪರ್ಧೆಗಳಲ್ಲೂ ಗ್ರಾಹಕರು ಭಾಗವಹಿಸಬಹುದು.
Advertisement
ಕಾರ್ಯಕ್ರಮ ಉದ್ಘಾಟನೆ ಬಳಿಕ ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್. ಆರ್ ರಂಗನಾಥ್ ಅವರು ಮಾತನಾಡಿ, ಎಲ್ಲ ರೋಗಗಳು ಆಹಾರದಿಂದಲೇ ಆರಂಭವಾಗುತ್ತದೆ. ಆದರೆ ಸರಿಯಾಗಿ ತಿನ್ನಿ, ಎಂಜಾಯ್ ಮಾಡಿ. ರಂಗೋಲಿ ಸ್ಫರ್ಧೆಗೆ ಬಂದವರಿಗೆ ಧನ್ಯವಾದ, ಚೆನ್ನಾಗಿ ರಂಗೋಲಿ ಬಿಡಿಸಿದ್ದೀರಿ. ಹಾಗೆಯೇ ಭಾಗವಹಿಸಿದ ಎಲ್ಲ ಸ್ಟಾಲ್ ನವರಿಗೆ ಧನ್ಯವಾದ ಎಂದರು.
ಆಹಾರ ಮೇಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೆಎಂಎಫ್ ಎಂಡಿ ಬಿ.ಸಿ ಸತೀಶ್ ಅವರು ಮಾತನಾಡಿ, ಈ ಕಾರ್ಯಕ್ರಮ ಆಯೋಜಿಸಿದಕ್ಕೆ ಧನ್ಯವಾದ. ಇಪ್ಪತ್ತೈದು ಲಕ್ಷ ರೈತ ಸಮೂದಾಯ ಹಾಗೂ ಐದು ಕೋಟಿಗೂ ಅಧಿಕ ಗ್ರಾಹಕರನ್ನು ಕೆಎಂಎಫ್ ಹೊಂದಿದೆ. ನಾವು ಗ್ರಾಹಕರಿಗೆ ಉತ್ಕೃಷ್ಟ ಉತ್ಪನ್ನ ನೀಡುತ್ತಿದ್ದೇವೆ. ನಮ್ಮನ್ನು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ನೀಡಿದಕ್ಕೆ ಪಬ್ಲಿಕ್ ಟಿವಿಗೆ ಧನ್ಯವಾದ. ರಂಗೋಲಿ ಸ್ಫರ್ಧೆ ಏರ್ಪಡಿಸಿರುವುದು ಉತ್ತಮವಾದದ್ದು, ನಮ್ಮ ಸಂಸ್ಕøತಿ, ಸಂಸ್ಕಾರವನ್ನು ಈ ರಂಗೋಲಿಯಲ್ಲಿ ಬಿಡಿಸಿದಂತಹ ಎಲ್ಲಾ ಹೆಣ್ಣು ಮಕ್ಕಳಿಗೆ ಧನ್ಯವಾದ ಹೇಳುತ್ತೇನೆ ಎಂದು ಖುಷಿಯನ್ನು ಹಂಚಿಕೊಂಡರು.
ಕಮಲಾಕರ್ ಭಟ್ ಅವರು ಮಾತನಾಡಿ, ಆಹಾರ ಮೇಳ ಬೆಂಗಳೂರು ನಗರಕ್ಕೆ ಹಬ್ಬ. ಆಹಾರಕ್ಕೆ ಮಾತ್ರ ಇಲ್ಲಿ ಪ್ರಾಮುಖ್ಯತೆ ಕೊಟ್ಟಿಲ್ಲ. ರಂಗೋಲಿ ಸ್ವರ್ಧೆಯ ಮೂಲಕ ಸಂಸ್ಕಾರ, ಪರಂಪರೆ ನೆನಪಿಸಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಹಾಗೆಯೇ ಎಂ.ಕೆ ಆಗ್ರೋಟೆಕ್‍ನ ರಿಜಿನಲ್ ಮ್ಯಾನೇಜರ್ ಸೊಹೈಲ್ ಅವರು ಕಾರ್ಯಕ್ರಮದ ಬಗ್ಗೆ ಪ್ರತಿಕ್ರಿಯಿಸಿ, ಈ ರೀತಿ ಕಾರ್ಯಕ್ರಮ ಹೆಚ್ಚು ಹೆಚ್ಚು ಆಗಲಿ. ಸದಾ ನಾವು ನಿಮ್ಮೊಂದಿಗೆ ಇರುತ್ತೇವೆ. ಈ ಕಾರ್ಯಕ್ರಮ ಆಯೋಜನೆ ಮಾಡಿದ್ದಕ್ಕೆ ಧನ್ಯವಾದಗಳು ಎಂದರು.
ಪ್ರಜ್ವಲ್ ದೇವರಾಜ್ ಅವರು ಪ್ರತಿಕ್ರಿಯಿಸಿ, ಈ ಫುಡ್ ನೋಡಿದರೆ ನಂಗೆ ಡಯೆಟ್ ಮರಿಬೇಕು ಅನಿಸುತ್ತಿದೆ. ದಾರಿಯುದ್ದಕ್ಕೂ ರಂಗೋಲಿ ತುಂಬಾ ಚೆನ್ನಾಗಿತ್ತು. ಶನಿವಾರ, ಭಾನುವಾರ ಡಯೆಟ್ ಮರೆತು ಇಲ್ಲಿ ಬಂದು ಫುಡ್ ತಿಂದು ಎಂಜಾಯ್ ಮಾಡಿ ಎಂದು ಹೇಳಿದರು. ಇತ್ತ ನಟಿ ನಿಶ್ವಿಕಾ ನಾಯ್ಡು ಅವರು ಮಾತನಾಡಿ, ಈ ಕಾರ್ಯಕ್ರಮಕ್ಕೆ ಆಹ್ವಾನ ಮಾಡಿದ್ದಕ್ಕೆ ಪಬ್ಲಿಕ್ ಟಿವಿಗೆ ಧನ್ಯವಾದ. ಡಯೆಟ್ ಎಲ್ಲಾ ಮರೆತು ಫುಡ್ ಫೆಸ್ಟ್ ನಲ್ಲಿ ಭಾಗಿಯಾಗಿ ಎಂದರು. ಹಾಗೆಯೇ ನಿರ್ದೇಶಕ ಗುರು ದೇಶಪಾಂಡೆ ಅವರು ಮಾತನಾಡಿ, ಆಹಾರವನ್ನು ವ್ಯರ್ಥ ಮಾಡಬೇಡಿ, ಹೆಚ್ಚು ಉಪಯೋಗ ಮಾಡಿಕೊಳ್ಳೋಣ. ಇಲ್ಲದೇ ಇರೋರಿಗೆ ಆಹಾರ ಕೊಡೋಣ. ಇದು ಎರಡನೇ ವರ್ಷ ನಾನು ಆಹಾರ ಮೇಳಕ್ಕೆ ಬರುತ್ತಿರೋದು. ಇಲ್ಲಿ ಆಹಾರ ರುಚಿ ಚೆನ್ನಾಗಿ ಇರುತ್ತೆ. ಎಲ್ಲರೂ ಬಂದು ಆಹಾರ ಸವಿಯಿರಿ ಎಂದು ಹೇಳಿದರು.
ಆಹಾರ ಮೇಳಕ್ಕೆ ಚಾಲನೆಗೂ ಮುನ್ನ ರಂಗೋಲಿ ಸ್ಫರ್ಧೆ ನಡೆದಿದ್ದು, 120 ನಿಮಿಷದ ಒಳಗೆ ರಂಗೋಲಿಯನ್ನ ಬಿಡಿಸಿದ್ದಾರೆ. ರಂಗೋಲಿ ಸ್ಫರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಗಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಸಮಾಧಾನಕರ ಬಹುಮಾನ ನೀಡಲಾಯಿತು. ಈ ಸ್ಪರ್ಧೆಯ ತೃತೀಯ ಬಹುಮಾನ ವಿಜೇತೆ ಭಾಗ್ಯ, ದ್ವೀತಿಯ ಬಹುಮಾನ ವಿಜೇತೆ ಪ್ರತಿಮಾ ಉಡುಪ, ಪ್ರಥಮ ಬಹುಮಾನ ವಿಜೇತೆ ನಿರ್ಮಲ ಅವರಿಗೆ ಪೆಪ್ಸ್ ಮ್ಯಾಟ್ರಿಸ್ ವತಿಯಿಂದ ಹಾಸಿಗೆ ನೀಡಲಾಯ್ತು. ಇದೇ ವೇಳೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲಾ ಸ್ಪರ್ಧಿಗಳಿಗೂ ಪೆಪ್ಸ್ ಮ್ಯಾಟ್ರಿಸ್ ದಿಂಬುಗಳನ್ನು ಸಮಾಧಾನಕರ ಬಹುಮಾನವಾಗಿ ನೀಡಿ ಅಭಿನಂದಿಸಲಾಯಿತು.