ಬೆಂಗಳೂರು: ಇಂದು ಹಲವಾರು ಚಾನೆಲ್‌ಗಳು ಮುಚ್ಚಿ ಹೋಗಿವೆ. ಆದರೆ 13 ವರ್ಷಗಳ ಕಾಲ ಒಂದು ವಾಹಿನಿಯನ್ನು ನಡೆಸುವುದು ಸುಲಭದ ಕೆಲಸವಲ್ಲ. ಜನರ ನಂಬಿಕೆಯನ್ನು ಉಳಿಸಿದರೆ ಚಾನೆಲ್ ಗಟ್ಟಿ ನಿಲ್ಲುತ್ತದೆ ಎನ್ನುವುದಕ್ಕೆ ಪಬ್ಲಿಕ್ ಟಿವಿ (PUBLiC TV) ಸಾಕ್ಷಿ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದರು.
ಪಬ್ಲಿಕ್ ಟಿವಿಯ 13ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದ ಅವರು, ಪಬ್ಲಿಕ್ ಟಿವಿಯಲ್ಲಿ 500 ಮಂದಿ ಉದ್ಯೋಗಿಗಳಿದ್ದಾರೆ ಎಂದು ಈಗ ಕೇಳಲ್ಪಟ್ಟೆ. ಒಂದು ಸೇನಾಪಡೆಗೆ ನಾಯಕ ಬಹಳ ಮುಖ್ಯ. ನಾಯಕನಲ್ಲಿ ಧೈರ್ಯ ಇದ್ದರೆ ಬೇರೆಯವರು ಹೆದರುವ ಅಗತ್ಯವಿಲ್ಲ. ರಂಗನಾಥ್ ಅವರು ಪೈಲ್ವಾನ್ ಇದ್ದಂತೆ. ಎಷ್ಟೇ ನೋವಿದ್ದರೂ ಸಿಬ್ಬಂದಿಗಾಗಿ ತಮ್ಮ ನೋವನ್ನು ತ್ಯಾಗ ಮಾಡಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
Advertisement
Advertisement
ಅಧಿಕಾರ ಶಾಶ್ವತವಲ್ಲ. ಅಧಿಕಾರ ಬರುತ್ತದೆ ಹೋಗುತ್ತದೆ. ಜನರ ಪ್ರೀತಿಯೇ ಶಾಶ್ವತ. ಜನರು ನೀಡಿದ ಪ್ರೀತಿಯಿಂದ ವಾಹಿನಿ ಇಂದು 13ನೇ ವರ್ಷಕ್ಕೆ ಕಾಲಿಟ್ಟಿದೆ. ಈ ಪ್ರೀತಿ ಹೀಗೆಯೇ ಮುಂದುವರಿಯಲಿ ಎಂದು ಶುಭ ಹಾರೈಸಿದರು.
Advertisement
ರಂಗನಾಥ್ ಅವರು ನನಗೆ ಹಲವು ವರ್ಷಗಳಿಂದ ಪರಿಚಯ. ರಾತ್ರಿ 9 ಗಂಟೆ ಆಯ್ತು ಅಂದರೆ ರಂಗಣ್ಣ ಬರುತ್ತಾರೆ ಅಂತ ಜನ ಕಾದು ಟಿವಿ ವೀಕ್ಷಣೆ ಮಾಡುತ್ತಾರೆ. ಹಲವು ಬಾರಿ ನಮಗೆಲ್ಲ ಸಲಹೆ ನೀಡುತ್ತಾ ನಮ್ಮನ್ನು ಎಚ್ಚರಿಸುತ್ತಾ ಬರುತ್ತಿದ್ದಾರೆ. ಸ್ಪಷ್ಟವಾದ ಗುರಿ ಪ್ರಯತ್ನ ಇದ್ದರೆ ಯಶಸ್ಸು ಖಂಡಿತ ಸಿಗುತ್ತದೆ. ಹಿಂದೆ 10ನೇ ವರ್ಷದ ವಾರ್ಷಿಕೋತ್ಸವಕ್ಕೆ ನಾನು ಬಂದಾಗ ಕೆಪಿಸಿಸಿ ಅಧ್ಯಕ್ಷನಾಗಿದ್ದೆ. ಈಗ ಡಿಸಿಎಂ ಆಗಿದ್ದೇನೆ. ಆದರೆ ಇಂದು ನಾನು ಪಬ್ಲಿಕ್ ಆಗಿ ಪಬ್ಲಿಕ್ ಟಿವಿಯ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ನಿಮ್ಮ ಪಬ್ಲಿಕ್ ಟಿವಿಗೆ 13ನೇ ಸಂಭ್ರಮ! – 2012 ರಿಂದ 2024 ಜರ್ನಿ ಓದಿ
Advertisement
ವೇದಿಕೆಯಲ್ಲಿ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್‌ಆರ್ ರಂಗನಾಥ್, ಪಬ್ಲಿಕ್ ಟಿವಿಯ ನಿರ್ದೇಶಕರಾಗಿರುವ ಲಹರಿ ಕಂಪನಿಯ ಮುಖ್ಯಸ್ಥ ಮನೋಹರ ನಾಯ್ಡ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಉಪಸ್ಥಿತರಿದ್ದರು.