– ಸಿಎಂ ಹುದ್ದೆ ಆಕಾಂಕ್ಷಿಗಳಿಗೆ ಸಿದ್ದರಾಮಯ್ಯ ಚೆಕ್‌ಮೇಟ್
– ಸುದೀರ್ಘ ಸಿಎಂ ದಾಖಲೆ ಬರೆಯೋ ಸುಳಿವು
ಬೆಂಗಳೂರು: ಕನ್ನಡಿಗರ ಅಚ್ಚುಮೆಚ್ಚು.. ನಿಮ್ಮ ನಂಬಿಕೆಯ ʻಪಬ್ಲಿಕ್ ಟಿವಿʼಗೆ ಇಂದು 13ನೇ ವಾರ್ಷಿಕೋತ್ಸವ ಸಂಭ್ರಮ.. ಜೊತೆಗೆ ಪಬ್ಲಿಕ್ ಮೂವೀಸ್‌ಗೆ 7 ವರ್ಷದ ಸಾರ್ಥಕ ಸಂಭ್ರಮ. ಮೌಲ್ಯ ಪ್ರತಿಪಾದನೆಯ ಪ್ರತಿಬಿಂಬವಾಗಿರುವ ನಿಮ್ಮ ನೆಚ್ಚಿನ ಪಬ್ಲಿಕ್ ಟಿವಿ ಕಚೇರಿಯಲ್ಲಿ ಇಂದು ಡಬಲ್ ಸಂಭ್ರಮ ಮನೆ ಮಾಡಿತ್ತು. ವಿವಿಧ ಕಾರ್ಯಕ್ರಮಗಳೊಂದಿಗೆ ವಾರ್ಷಿಕೋತ್ಸವ ಸಮಾರಂಭ ಸಂಪನ್ನಗೊಂಡಿತು.
Advertisement
ಕಾರ್ಯಕ್ರಮವನ್ನು ಡಿಸಿಎಂ ಡಿಕೆ ಶಿವಕುಮಾರ್, ಸಂಸ್ಥೆ ಮುಖ್ಯಸ್ಥರಾದ ಹೆಚ್.ಆರ್ ರಂಗನಾಥ್, ನಿರ್ದೇಶಕರಾದ ಮನೋಹರ್ ನಾಯ್ಡು, ರಾಕ್‌ಲೈನ್ ವೆಂಕಟೇಶ್ ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಹೆಚ್.ಆರ್ ರಂಗನಾಥ್‌ರನ್ನು ಡಿಸಿಎಂ ಪೈಲ್ವಾನ್‌ಗೆ ಹೋಲಿಸಿದ್ರು. ನಾನು ʻಪಬ್ಲಿಕ್ ಟಿವಿʼ ಅಭಿಮಾನಿ.. ಎಲ್ಲೆ ಇದ್ರೂ ಬಿಡುವು ಮಾಡಿಕೊಂಡು ಬಿಗ್ ಬುಲೆಟಿನ್ ಮಿಸ್ ಮಾಡ್ದೇ ನೋಡ್ತೇನೆ ಅಂತಾ ಡಿಕೆ ಶಿವಕುಮಾರ್ ಹೇಳಿದ್ರು. ಇದನ್ನೂ ಓದಿ: ಚುನಾವಣಾ ರಾಜಕೀಯದಿಂದ ಸದ್ಯಕ್ಕೆ ನಿವೃತ್ತಿ ಇಲ್ಲ: ಎದುರಾಳಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿದ ಸಿಎಂ
Advertisement
Advertisement
ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭ ಹಾರೈಸಿದ್ರು.. ಪಬ್ಲಿಕ್ ಟಿವಿ ವತಿಯಿಂದ ಮುಖ್ಯಮಂತ್ರಿಗಳನ್ನು ಸಮ್ಮಾನಿಸಲಾಯ್ತು.. ಪಬ್ಲಿಕ್ ಟಿವಿ ಬೆಳೆದು ಬಂದ ಬಗೆಯನ್ನು ಹೆಚ್.ಆರ್ ರಂಗನಾಥ್ ಮೆಲುಕು ಹಾಕಿದ್ರು.. ಇದಕ್ಕೂ ಮುನ್ನ, ಸುಪ್ರಿಯಾ ಆಚಾರ್ಯ, ದಿಯಾಹೆಗಡೆ ತಮ್ಮ ಗಾಯನದ ಮೂಲಕ ಕಾರ್ಯಕ್ರಮಕ್ಕೆ ಮೆರುಗು ತುಂಬಿದ್ರು.. ಕಚೇರಿಯ ಸಿಬ್ಬಂದಿ ಕೇಕ್ ಕತ್ತರಿಸಿ ಖುಷಿ ಪಟ್ರು.. ವಿವಿಧ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಬಹುಮಾನ ವಿತರಿಸಲಾಯ್ತು. ಇದನ್ನೂ ಓದಿ: ಜನರ ನಂಬಿಕೆಯನ್ನು ಉಳಿಸಿದರೆ ಚಾನೆಲ್ ಗಟ್ಟಿಯಾಗಿ ನಿಲ್ಲುತ್ತದೆ: ಡಿಕೆ ಶಿವಕುಮಾರ್
Advertisement
ಸಿಎಂ ಹುದ್ದೆ ಆಕಾಂಕ್ಷಿಗಳಿಗೆ ಸಿದ್ದರಾಮಯ್ಯ ಚೆಕ್‌ಮೇಟ್:
ರಾಜ್ಯ ಕಾಂಗ್ರೆಸ್‌ನಲ್ಲಿ ಪಟ್ಟಕ್ಕಾಗಿ ಫೈಟ್ ನಡೆದಿರುವ ಹೊತ್ತಲ್ಲೇ ಸಿಎಂ ಸಿದ್ದರಾಮಯ್ಯ ನೀಡಿದ ಹೇಳಿಕೆಯೊಂದು ರಾಜ್ಯ ರಾಜಕೀಯದಲ್ಲಿ ಅದ್ರಲ್ಲೂ ಕಾಂಗ್ರೆಸ್ ಪಕ್ಷದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ʻಪಬ್ಲಿಕ್ ಟಿವಿʼಯ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿಗಳಿಗೆ ಚುನಾವಣಾ ರಾಜಕೀಯ ನಿವೃತ್ತಿ ಬಗ್ಗೆ ಹೆಚ್.ಆರ್ ರಂಗನಾಥ್ ಪ್ರಶ್ನೆ ಮಾಡಿದ್ರು. ಚುನಾವಣಾ ರಾಜಕೀಯದಿಂದ ನಿವೃತ್ತಿ ಆಗುವ ಬಯಕೆ ಇದೆ. ಆದ್ರೆ, ಹಿತೈಶಿಗಳು, ಬೆಂಬಲಿಗರು ಮುಂದುವರೆಯಿರಿ ಎಂದು ಒತ್ತಡ ಮಾಡ್ತಿದ್ದಾರೆ.. ಅಂತಾ ಸಿಎಂ ಉತ್ತರಿಸಿದ್ರು. ಇದನ್ನೂ ಓದಿ: ಅಭಿವೃದ್ಧಿ ಹಂಚಿಕೆಗಾಗಿ ಬೃಹತ್ ರಾಜ್ಯಗಳ ವಿಭಜನೆ ಅತ್ಯವಶ್ಯ: ಮೊಂಟೆಕ್ ಪ್ರತಿಪಾದನೆ
ಈ ಮೂಲಕ ಚುನಾವಣಾ ರಾಜಕೀಯ ನಿವೃತ್ತಿ ಹೇಳಿಕೆಯಿಂದ ಹಿಂದೆ ಸರಿಯುವ ಸುಳಿವು ನೀಡಿದ್ರು. ಇದೇ ವೇಳೆ, ಸುದೀರ್ಘ ಸಿಎಂ ಎಂಬ ದಾಖಲೆ ಬರೆಯುವ ಸುಳಿವನ್ನು ಸಿದ್ದರಾಮಯ್ಯ ನೀಡಿದ್ರು.. ಈ ಮೂಲಕ ಸಿಎಂ ಹುದ್ದೆ ಆಕಾಂಕ್ಷಿಗಳಿಗೆ ಚೆಕ್‌ಮೇಟ್ ಇಡುವ ಪ್ರಯತ್ನವನ್ನು ಸಿಎಂ ಮಾಡಿದ್ರು. ದೇವರಾಜು ಅರಸು ಏಳು ವರ್ಷ ಏಳು ತಿಂಗಳು ಮುಖ್ಯಮಂತ್ರಿ ಆಗಿದ್ರು. ಈ ದಾಖಲೆಯನ್ನು ಸಿದ್ದರಾಮಯ್ಯ ಮುರಿಯಬೇಕು ಅಂದ್ರೆ ಡಿಸೆಂಬರ್ 21ರ ವರೆಗೂ ಕಾಯಬೇಕಿದೆ. ಇದಕ್ಕೂ ಮುನ್ನ, ವಾರ್ಷಿಕೋತ್ಸದಲ್ಲಿ ಭಾಗಿಯಾಗಿದ್ದ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಹೆಚ್.ಆರ್ ರಂಗನಾಥ್ ಅವರ ನೇರ ಪ್ರಶ್ನೆಗಳಿಗೆ ನೇರ ಉತ್ತರ ಕೊಟ್ರು. ಸೀಟ್ ಫೈಟ್ ಕುರಿತ ಪ್ರಶ್ನೆಗೆ, ಪ್ರಯತ್ನ ವಿಫಲವಾಗಬಹುದು. ಆದ್ರೆ, ಪ್ರಾರ್ಥನೆ ಫಲಿಸಲಿದೆ ಅಂದ್ರು. ಪಕ್ಷ ನಿಷ್ಠರಿಗೆ ಒಳ್ಳೆಯ ದಿನಗಳು ಬರುವ ಆಶಾಭಾವನೆ ವ್ಯಕ್ತಪಡಿಸಿದ್ರು. ಭವಿಷ್ಯದಲ್ಲಿ ರಾಷ್ಟ್ರ ರಾಜಕಾರಣಕ್ಕೆ ಹೋಗುವ ಸುಳಿವು ಕೊಟ್ರು. ನಮ್ಮ ನೆರಳನ್ನೂ ನಾವು ನಂಬಬಾರದು ಅಂದ್ರು.