ಪಬ್ಲಿಕ್‌ ಟಿವಿ ವಾರ್ಷಿಕೋತ್ಸವ – ಪಬ್ಲಿಕ್ ಹುಡುಗರು ಚಾಂಪಿಯನ್ಸ್‌

Public TV
1 Min Read
public tv 12th Anniversary public hudugaru won by 8 runs

ಬೆಂಗಳೂರು: ಪಬ್ಲಿಕ್ ಟಿವಿಯ (PUBLiC TV) 12ನೇ ವಾರ್ಷಿಕೋತ್ಸವ (12th Anniversary) ಪ್ರಯುಕ್ತ ನಡೆದ ಪಬ್ಲಿಕ್ ಟಿವಿ ಸಹೋದ್ಯೋಗಿಗಳ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಬ್ಲಿಕ್ ಹುಡುಗರ ತಂಡ ಗೆಲುವು ದಾಖಲಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.

ವಿಜಯನಗರದ ಬಾಲಗಂಗಾಧರನಾಥಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಹೊನಲು ಬೆಳಕಿನ ಪಂದ್ಯದಲ್ಲಿ ಲೋಕೇಶ್ ನಾಯಕತ್ವದ ಪಬ್ಲಿಕ್ ಪಂಟರ್ಸ್ ತಂಡದ ವಿರುದ್ಧ ಶ್ರೀನಿವಾಸ್ ರಾವ್ ನಾಯಕತ್ವದ ಪಬ್ಲಿಕ್ ಹುಡುಗರ ತಂಡ 7 ರನ್‌ಗಳ ಗೆಲುವು ಸಾಧಿಸಿತು. ಇದನ್ನೂ ಓದಿ: ಬೆಂಕಿ ದಾಳಿಗೆ ಆಂಗ್ಲರ ಪಡೆ ಛಿದ್ರ ಛಿದ್ರ – 6 ವಿಕೆಟ್ ಉರುಳಿಸಿ ಹಲವು ದಾಖಲೆ ಬರೆದ ಬುಮ್ರಾ

 
ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಬ್ಲಿಕ್ ಹುಡುಗರ ತಂಡ 3 ವಿಕೆಟ್ ಕಳೆದುಕೊಂಡು 30 ರನ್ ಗಳಿಸಿತು. 31 ರನ್ ಗುರಿ ಬೆನ್ನತ್ತಿದ ಪಬ್ಲಿಕ್ ಪಂಟರ್ಸ್ ತಂಡ 4 ವಿಕೆಟ್‌ ಕಳೆದುಕೊಂಡು 23 ರನ್ ಗಳಿಸಿ ಸೋಲು ಕಂಡಿತು. ವಿಜೇತ ತಂಡಕ್ಕೆ ಫೆಬ್ರವರಿ 12 ರಂದು ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್. ರಂಗನಾಥ್ ಟ್ರೋಫಿ ವಿತರಣೆ ಮಾಡಲಿದ್ದಾರೆ.

Share This Article