ಬೆಂಗಳೂರು: ಕನ್ನಡದ ಸುದ್ದಿ ಮಾಧ್ಯಮ ʼಪಬ್ಲಿಕ್ ಟಿವಿʼಗೆ (Public TV) ಇಂದು (ಭಾನುವಾರ) 11 ಸಂವತ್ಸರದ ಸಡಗರ. ಪಬ್ಲಿಕ್ ಟಿವಿ ಕಚೇರಿಯಲ್ಲಿ 11ನೇ ವರ್ಷದ ಸಂಭ್ರಮ, ಸಡಗರ ಮನೆ ಮಾಡಿತ್ತು. ಈ ಬಾರಿ ವಿಶೇಷ ರೀತಿಯಲ್ಲಿ 11ನೇ ವರ್ಷದ ಸಂಭ್ರಮಾಚರಣೆ ಮಾಡಲಾಯಿತು.
Advertisement
ಪಬ್ಲಿಕ್ ಟಿವಿಯ ಎಲ್ಲಾ ವಿಭಾಗಗಳ ಬ್ಯೂರೋ ಮುಖ್ಯಸ್ಥರು ದೀಪ ಬೆಳಗಿಸಿ, ಕೇಕ್ ಕತ್ತರಿಸುವ ಮೂಲಕ ʼಪಬ್ಲಿಕ್ ಟಿವಿ 11 ಆರೋಹಣʼ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಪಬ್ಲಿಕ್ ಟಿವಿಯ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ (H.R.Ranganath) ಅವರು ಮಾತನಾಡಿ ರಾಜ್ಯದ ಜನತೆಗೆ ಕೃತಜ್ಞತೆ ಸಲ್ಲಿಸಿದರು. ಇದನ್ನೂ ಓದಿ: ‘ಪಬ್ಲಿಕ್ ಟಿವಿ’ಗೆ 11 ಸಂವತ್ಸರ ಸಡಗರ..
Advertisement
Advertisement
ಈ ದಿನ ಸಾಧ್ಯವಾಗಿದ್ದಕ್ಕೆ ಕಾರಣ ನಮ್ಮ ರಾಜ್ಯದ ಜನ. ನಾವು ಆರಂಭ ಮಾಡಿದ್ದಕ್ಕೂ, ಇಂದು ನಾವು ಇರುವ ಸ್ಥಿತಿಗತಿ ಊಹಿಸಲಿಕ್ಕೂ ಸಾಧ್ಯವಿಲ್ಲದ ಪರಿಸ್ಥಿತಿ. ನಾವು ಬಯಸದೇ ಇದ್ದುದೆಲ್ಲಾ ನಮಗೆ ದಕ್ಕಿದೆ. ನಿನ್ನ ಹತ್ತಿರ ಏನೇನಿಲ್ಲ ಎಂಬ ಬಗ್ಗೆ ಚಿಂತೆ ಮಾಡಬೇಡ. ನಿನ್ನ ಬಳಿ ಇರುವುದನ್ನೇ ಬಹಳ ಎಂದು ಯೋಚನೆ ಮಾಡಬೇಕು ಎಂಬ ಮಾತಿನಂತೆ ನಾವು ಖುಷಿಯಾಗಿದ್ದೇವೆ. ಇದಕ್ಕೆ ಕಾರಣ ಕರ್ನಾಟಕದ ಜನ ಎಂದು ತಿಳಿಸಿದರು.
Advertisement
ಪತ್ರಕರ್ತನಿಗೆ ತನ್ನ ವೃತ್ತಿಯ ಕಿಚ್ಚು ನಂದಿಹೋದರೆ ಆತ ಸತ್ತಂತೆ. ಹೀಗಾಗಿ ಪ್ರತಿಯೊಬ್ಬರೂ ಆ ಕಿಚ್ಚನ್ನ ಉಳಿಸಿಕೊಳ್ಳಬೇಕು. ವೃತ್ತಿಪರತೆಯನ್ನು ಪ್ರತಿಯೊಬ್ಬರು ಕಾಯ್ದುಕೊಳ್ಳಬೇಕು ಎಂದು ಪತ್ರಕರ್ತರಿಗೆ ಕಿವಿಮಾತು ಹೇಳಿದರು.
ಸಮಾರಂಭದಲ್ಲಿ ಪಬ್ಲಿಕ್ ಟಿವಿಯ ಸಿಇಒ ಅರುಣ್ ಕುಮಾರ್, ಸಿಒಒ ಹರೀಶ್ ಕುಮಾರ್, ಮುಖ್ಯ ಸಂಪಾದಕರಾದ ಸಿ.ದಿವಾಕರ್, ಕಾರ್ಯಕಾರಿ ಸಂಪಾದಕರಾದ ಆನಂದ್ ಹಾಗೂ ಸಂಸ್ಥೆಯ ಸಿಬ್ಬಂದಿ ಬಳಗದವರು ಉಪಸ್ಥಿತರಿದ್ದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k