ಕಾರವಾರ: ಪಬ್ಲಿಕ್ ಟಿ.ವಿ ದಶಮಾನೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಕಾರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಇರುವ ನಗರಸಭೆ ಉದ್ಯಾನವನ ಹಾಗೂ ರವೀಂದ್ರನಾಥ ಠಾಗೋರ್ ಕಡಲತೀರದ ಬಳಿ ಇರುವ ಮಕ್ಕಳ ಉದ್ಯಾನವನದಲ್ಲಿ ಇಂದು ಗಿಡ ನೆಡುವ ಮೂಲಕ ಆಚರಿಸಲಾಯಿತು.
Advertisement
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿದ್ದ ಮುರುಡೇಶ್ವರದ ನೇತ್ರಾಣಿ ಅಡ್ವೆಂಚರ್‌ನ ಸಂಸ್ಥಾಪಕರಾದ ಗಣೇಶ್ ಹರಿಕಾಂತ್ ಮಾತನಾಡಿ, ಪಬ್ಲಿಕ್ ಟಿ.ವಿ ಹತ್ತುವರ್ಷದಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದುಕೊಂಡು ಪ್ರಾಮಾಣಿಕತೆ ಉಳಿಸಿಕೊಂಡು ಬಂದಿದೆ. ಮೊಬೈಲ್ ಇದ್ದವರೇ ಇಂದು ವರದಿಗಾರರಾಗುತ್ತಿರುವ ದಿನಗಳಲ್ಲಿ ಮಾಧ್ಯಮ ತನ್ನತನ ಉಳಿಸಿಕೊಳ್ಳುವುದೇ ದೊಡ್ಡ ವಿಚಾರವಾಗಿದೆ. ಪಬ್ಲಿಕ್ ಟಿವಿ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ಸಂತಸದ ವಿಚಾರ ಎಂದರು. ಇದನ್ನೂ ಓದಿ: ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ್ದ ವಿದ್ಯಾರ್ಥಿನಿಗೆ 1 ಲಕ್ಷ ಚೆಕ್ ನೀಡಿದ ಇಮ್ರಾನ್ ಪಾಷಾ
Advertisement
Advertisement
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಆಧ್ಯಕ್ಷ ಡಾ.ನಿತಿನ್ ಪಿಕಳೆ ಮಾತನಾಡಿ, ವನಮಹೋತ್ಸವ ಆಚರಿಸುತ್ತಿರುವುದು ಸಂತಸದ ವಿಚಾರ, ಅರ್ಥಗರ್ಭಿತವಾಗಿ ವನ ಮಹೋತ್ಸವ ಆಚರಿಸುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: Hijab Row – ಮಂಡ್ಯ ವಿದ್ಯಾರ್ಥಿನಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿದ ಜಮಾತೆ ಉಲೆಮಾ ಹಿಂದ್
Advertisement
ಕಾರ್ಯಕ್ರಮಕ್ಕೆ ಆಗಮಿಸಿದ ಅಥಿತಿಗಳು ಹಾಗೂ ಹಿಂದೂ ಹೈಸ್ಕೂಲ್‍ನ ಮಕ್ಕಳು, ಪತ್ರಕರ್ತರು ನಗರದ ಉದ್ಯಾನವನದಲ್ಲಿ 300 ಗಿಡವನ್ನು ನೆಡುವ ಮೂಲಕ ಮನಮಹೋತ್ಸವಕ್ಕೆ ಮೆರುಗು ತಂದರು. ಈ ಗಿಡಗಳನ್ನು ವರ್ಷವಿಡೀ ರಕ್ಷಿಸಿ ಪಾಲನೆ ಮಾಡುವ ಜವಾಬ್ದಾರಿಯನ್ನು ಪಬ್ಲಿಕ್ ಟಿವಿ ಬಳಗ, ಕಾರವಾರ ನಗರಸಭೆ, ಜೀವಜಲ ಕಾರ್ಯಪಡೆ, ಶಿರಸಿ, ನೇತ್ರಾಣಿ ಅಡ್ವೆಂಚರ್ಸ್ ಮುರುಡೇಶ್ವರದವರು ವಹಿಸಿಕೊಂಡಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ‘ಜೈ ಶ್ರೀರಾಮ್’ ಎಂದ ಹುಡುಗರು – ‘ಅಲ್ಲಾಹು ಅಕ್ಬರ್’ ಎಂದ ವಿದ್ಯಾರ್ಥಿನಿ
ಕಾರವಾರ ನಗರಸಭೆ ಅಧ್ಯಕ್ಷರಾದ ಡಾ. ನಿತಿನ್ ಪಿಕಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಮುಖ್ಯ ಅಥಿತಿಗಳಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ ಪೆನ್ನೇಕರ್, ದಾಂಡೇಲಿ ವಿಭಾಗದ ನಿರ್ದೇಶಕರು ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಕಾಳಿ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಪ್ರಾಭಾರ ಉಪ ಅರಣ್ಯ ಸಂರಕ್ಷಣಾಧಿಕಾರಿ. ಕಾರವಾರದ ಮರಿಯಾ ಕ್ರಿಸ್ತುರಾಜ, ಅಪರ ಜಿಲ್ಲಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ, ಅಥಿತಿಗಳಾಗಿ ನಗರಸಭೆ ಕಮಿಷನರ್ ಆರ್. ಪಿ ನಾಯ್ಕ್ ಕಾರವಾರ-ಅಂಕೋಲ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ್ ನಾವಿ, ಜಿಲ್ಲಾ ಮೀನುಮಾರಾಟಗಾರರ ಫೆಡರೇಷನ್ ಅಧ್ಯಕ್ಷರಾದ ರಾಜು ತಾಂಡೇಲ್, ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಟಿ.ಬಿ ಹರಿಕಾಂತ್ ಇನ್ನಿತರರು ಉಪಸ್ಥಿತರಿದ್ದರು.