ಬೆಂಗಳೂರು: ಬಿಜೆಪಿ ಶಾಸಕ ಸೋಮಣ್ಣ ಕಡೆಯವರಿಂದ ಕೆಡವಲಾಗಿದೆ ಅಂತಾ ಆರೋಪಿಸಲಾಗಿದ್ದ ಪಟ್ಟಗಾರ ಪಾಳ್ಯದಲ್ಲಿರುವ ಕರುಮಾರಿಯಮ್ಮ ದೇವಾಲಯವನ್ನು ಸ್ಥಳೀಯರು ಮತ್ತೊಮ್ಮೆ ಮರು ನಿರ್ಮಾಣ ಮಾಡಿದ್ದಾರೆ.
ಕರುಮಾರಿಯಮ್ಮ ದೇಗುವಲವನ್ನು ಖುದ್ದು ಸಾರ್ವಜನಿಕರೇ ಸೇರಿ ಮರು ನಿರ್ಮಾಣಮಾಡಿ ಪೂರ್ಣಗೊಳಿಸಿದ್ದಾರೆ. ಸದ್ಯ ದೇವಾಲಯದಲ್ಲಿ ದೇವರಿಗೆ ಪೂಜೆ-ಪುನಸ್ಕಾರಗಳು ಎಂದಿನಂತೆ ಸಾಗುತ್ತಿದೆ.
Advertisement
Advertisement
ಶಾಸಕ ವಿ. ಸೋಮಣ್ಣರು ತಮ್ಮ ಸಂಬಂಧಿಕರಿಗೆ ಸೇರಿದ್ದ ಸೆಂಟ್ ಪೌಲ್ ಶಾಲೆಗೆ ದೇಗುಲದ ಜಾಗವನ್ನು ಬಿಟ್ಟು ಕೊಡುವಂತೆ ಮಹಿಳೆಗೆ ಧಮ್ಕಿ ಹಾಕಿಸಿದ್ದರು. ಅಲ್ಲದೇ ಈ ಬಗ್ಗೆ ಶಾಸಕರ ಬಳಿ ಮಾತನಾಡಲು ತೆರಳಿದ್ದ ಮಹಿಳೆಗೆ, ಶಾಸಕರು ಅವಾಚ್ಯ ಶಬ್ದಗಳಿಂದ ನಿಂದಿಸಿ ಕಳುಹಿಸಿದ್ದರು. ಮಹಿಳೆಗೆ ನಿಂದಿಸಿದ್ದಾರೆ ಎನ್ನುವ ವಿಡಿಯೋ ಸಾಕಷ್ಟು ಸದ್ದು ಮಾಡಿತ್ತು. ಇದನ್ನೂ ಓದಿ: ರಾತ್ರೋ ರಾತ್ರಿ ಪಟ್ಟೆಗಾರ ಪಾಳ್ಯದ ದೇವಸ್ಥಾನ ಕೆಡವಿಸಿದ ಶಾಸಕ ವಿ.ಸೋಮಣ್ಣ
Advertisement
ಆಗಸ್ಟ್ 21ರ ತಡರಾತ್ರಿ ಅವರ ಕೆಲ ಜನರು ದೇಗುಲವನ್ನು ಧ್ವಂಸಗೊಳಿಸಿ ಹೋಗಿದ್ದರು. ಸೋಮಣ್ಣ ಕಡೆಯವರೇ ಈ ದೇವಾಲಯನ್ನು ಧ್ವಂಸ ಮಾಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದರು.
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv