ಬಳ್ಳಾರಿ: ದಸರಾ ಆಚರಣೆಗೆ ಅಡ್ಡಿಯಾಗದ ಬರ ಹಂಪಿ ಉತ್ಸವಕ್ಕೆ ಎದುರಾಗಿದೆಯಾ ಎಂದು ಪ್ರಶ್ನೆ ಮಾಡಿರುವ ಬಳ್ಳಾರಿ ಜನರು ವಿಶ್ವ ವಿಖ್ಯಾತ ಹಂಪಿ ಉತ್ಸವವನ್ನು ನಡೆಸಲೇಬೇಕೆಂದು ಪಟ್ಟು ಹಿಡಿದಿದ್ದು, ಸರ್ಕಾರದ ವಿರುದ್ಧ ಹೋರಾಟಕ್ಕಿಳಿದಿದ್ದಾರೆ.
ಉತ್ಸವಕ್ಕೆ ಸರ್ಕಾರ ಹಣ ನೀಡಿದಿದ್ದರೂ ಪರವಾಗಿಲ್ಲ ನಾವೇ ಹಣ ಸಂಗ್ರಹಿಸಿ ಉತ್ಸವ ನಡೆಸುವುದಾಗಿ ಸಾರ್ವಜನಿಕರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಹೂವಿನಹಡಗಲಿಯ ಮಾಗಳ ಗ್ರಾಮಸ್ಥರು ಸ್ವತಃ ಹಣ ಸಂಗ್ರಹಿಸಿ ಗ್ರಾಮ ಪಂಚಾಯತ್ ಪಿಡಿಓಗೆ ನೀಡಿದ್ದಾರೆ. ಇದಲ್ಲದೇ ಉತ್ಸವ ಅನ್ನುವುದು ನಮ್ಮ ಜಿಲ್ಲೆಯ ಹೆಮ್ಮೆ, ಇದಕ್ಕಾಗಿ ಹಣ ನೀಡಲು ಸಿದ್ಧ ಎನ್ನುತ್ತಿದ್ದಾರೆ.
Advertisement
Advertisement
ಇದರೊಂದಿಗೆ ಬಳ್ಳಾರಿಯಲ್ಲಿ ಕಲಾವಿದರು ಕೂಡ ಪ್ರತಿಭಟನೆ ನಡೆಸಿದ್ದು, ಉತ್ಸವಕ್ಕೆ ಬಾಲಿವುಡ್ ಕಲಾವಿದರನ್ನ ಕರೆಸದೇ ಸ್ಥಳೀಯ ಜಾನಪದ ಕಲಾವಿದರಿಗೆ ಅವಕಾಶ ನೀಡಿ ಅರ್ಥಪೂರ್ಣವಾಗಿ ಆಚರಿಸಬಹುದು ಎಂದು ಹೇಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Advertisement
ಬರಗಾಲದ ನೆಪ ಒಡ್ಡಿ ಆಚರಣೆಗಳನ್ನು ರದ್ದುಗೊಳಿಸುವುದರಲ್ಲಿ ಅರ್ಥವಿಲ್ಲ. ಬರಗಾಲದ ಸಂದರ್ಭದಲ್ಲೂ ಅನಗತ್ಯ ಹಾಗೂ ಅದ್ಧೂರಿ ಎನಿಸುವ ಖರ್ಚುಗಳಿಗೆ ಲಗಾಮು ಹಾಕಿ ಉತ್ಸವ ನಡೆಸಬಹುದು. ಅಲ್ಲದೇ ಬಾಲಿವುಡ್ ಕಲಾವಿದರನ್ನ ಹಂಪಿ ಉತ್ಸವಕ್ಕೆ ಆಹ್ವಾನ ನೀಡದೇ ಸ್ಥಳೀಯ ಜಾನಪದ ಕಲಾವಿದರಿಗೆ ಅವಕಾಶ ನೀಡಿ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಬಹುದು. ಯಾವುದೇ ಸಂಭಾವನೆ ಪಡೆಯದೇ ಉತ್ಸವದಲ್ಲಿ ಕಾರ್ಯಕ್ರಮ ಕೊಡಲು ಸ್ಥಳೀಯ ಕಲಾವಿದರು ತಯಾರಿದ್ದಾರೆ. ಇಷ್ಟೆಲ್ಲ ಸಾಧ್ಯತೆಗಳಿದ್ದರೂ ಸರ್ಕಾರ ಏಕಾಏಕಿ ಹಂಪಿ ಉತ್ಸವವನ್ನು ರದ್ದುಗೊಳಿಸಿದೆ. ಡಿಸೆಂಬರ್ ತಿಂಗಳಲ್ಲಿ ಉತ್ಸವ ಮಾಡದಿದ್ರೆ ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು ಎಂದು ಕಲಾವಿದರು ಎಚ್ಚರಿಸಿದರು.
Advertisement
https://www.youtube.com/watch?v=Ea6m7EwRnxI
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv