ಪ್ರತೀ ತಾಯಿ, ಚಿನ್ನ, ಮುದ್ದು, ಬಂಗಾರಿ, ಪುಟ್ಟ, ಚಿನ್ನುಮರಿ ಅಂತೆಲ್ಲ ಹೆಸರಿಡಿದು ಕರೆಯುವ ಲಾಲಿ ಹಾಡಿಗೆ ಮಗು ಮಲಗುತ್ತದೆ. ಎಂತಹ ಕಠಿಣ ಮನುಷ್ಯನಾದರೂ ಸಹ ಸಂಗೀತದ ರಾಗಕ್ಕೆ, ಒಮ್ಮೆಯಾದರೂ ತಲೆದೂಗಿಯೇ ಇರುತ್ತಾನೆ. ಒಂದಲ್ಲ ಒಂದು ಹಾಡಿಗೆ ಕೈಕಾಲು ಬೆರಳು, ತಾಳ ಹಾಕೆ ಇರುತ್ತಾನೆ. ಆ ಸೆಳೆಯುವ ಶಕ್ತಿ ಸಂಗೀತಕ್ಕಿದೆ. ಈ ಸಂಗೀತದ ಸಪ್ತಸ್ವರಗಳನ್ನು ಪಬ್ಲಿಕ್ ಮ್ಯೂಸಿಕ್(Public Music) ಸತತ ಎಂಟು ವರ್ಷಗಳಿಂದ ಕನ್ನಡಿಗರಿಗೆ ನೀಡುತ್ತಲೇ ಬಂದಿದೆ.
ಈ ಎಂಟು ಮೆಟ್ಟಿಲುಗಳನ್ನು ಸಲೀಸಾಗಿ ದಾಟುವಂತೆ ಮಾಡಿದ್ದು ಕನ್ನಡಿಗರು. ಪ್ರತೀ ಹೆಜ್ಜೆಯಲ್ಲೂ ಜೊತೆಗಿದ್ದು, ಚಿಕ್ಕಪುಟ್ಟ ತಪ್ಪುಗಳನ್ನು ತಿದ್ದಿ-ತೀಡಿ ಇಲ್ಲಿಯವರೆಗೂ ತಂದು ನಿಲ್ಲಿಸಿದ್ದೀರಿ. ಮುಂದಿನ ದಿನಗಳಲ್ಲೂ ಕೈ ಹಿಡಿದು ಮುನ್ನಡೆಸುತ್ತೀರಿ ಎನ್ನುವ ಭರವಸೆಯೂ ನಮಗೆ ಕೊಟ್ಟಿದ್ದೀರಿ. 8 ವರ್ಷಗಳ ಕಾಲ ಪಬ್ಲಿಕ್ ಮ್ಯೂಸಿಕ್ ಸೂಪರ್ ಹಿಟ್ ಹಾಡುಗಳ ಜೊತೆಗೆ ಲೈವ್ ಶೋ, ಹಬ್ಬ-ಹರಿದಿನಗಳಲ್ಲಿ ಹೊಸ ಕಾರ್ಯಕ್ರಮ, ಸ್ಪೆಷಲ್ ಕಾಂಟೆಸ್ಟ್ ಹಾಗೂ ಸೆಲೆಬ್ರೆಟಿ ಷೋಗಳು ನಮ್ಮ-ನಿಮ್ಮ ಭಾಂದವ್ಯ ಹೆಚ್ಚುವಂತೆ ಮಾಡಿವೆ. ʼಪಬ್ಲಿಕ್ ಮ್ಯೂಸಿಕೋತ್ಸವ ಎನ್ನುವ ಟೈಟಲ್‍ನಲ್ಲಿ 8ನೇ ವರ್ಷದ ವಾರ್ಷಿಕೋತ್ಸವವನ್ನು ಸ್ಯಾಂಡಲ್‍ವುಡ್ ದಿಗ್ಗಜರ ಜೊತೆ ಆಚರಿಸುತ್ತಿದ್ದೇವೆ. 8 ವರ್ಷಗಳ ಏಳುಬೀಳುಗಳ ಜರ್ನಿಯಲ್ಲಿ ಜೊತೆಗಿದ್ದ ಎಲ್ಲರಿಗೂ ನಮ್ಮದೊಂದು ದೊಡ್ಡ ಸೆಲ್ಯೂಟ್.
Advertisement
Advertisement
ಈ ಎಂಟರ ವಾರ್ಷಿಕೋತ್ಸವದ ಶುಭ ಸಂದರ್ಭದಲ್ಲಿ ಸಂಗೀತದ ರೆಂಬೆ-ಕೊಂಬೆ, ಬೇರಿನಂತಿರೋ ಸ್ಯಾಂಡಲ್‍ವುಡ್‍ನ ಎಂಟು ವಿಭಾಗದ ಎಂಟು ಸೆಲೆಬ್ರಿಟಿಗಳನ್ನು ಕರೆಸಿ ಸಂಗೀತದ ಮಾಧುರ್ಯವನ್ನು ಸವಿಯಲಾಗುತ್ತಿದೆ. ನಟರಾಗಿಯೂ ಹಾಗೂ ನಿರ್ದೇಶಕರಾಗಿಯೂ ಗುರುತಿಸಿಕೊಂಡಿರೋ ರಿಷಬ್ ಶೆಟ್ಟಿ, ಜೋಗಿ ಪ್ರೇಮ್, ಕನ್ನಡಿಗರಿಗೆ ಸದಾ ಕಾಮಿಡಿ ಕಚಗುಳಿ ಕೊಡುತ್ತಿರುವ ಚಿಕ್ಕಣ್ಣ, ನಟಿ ನಿಶ್ವಿಕಾ ನಾಯ್ಡು, ಸಿನಿಮಾ ಸಾಹಿತಿ ಹಾಗೂ ನಿರ್ದೇಶಕ ಕವಿರಾಜ್ ಸೇರಿದಂತೆ ರಾಜ್ ಕುಟುಂಬದ ಕುಡಿ ಧನ್ಯಾ ರಾಮ್‍ಕುಮಾರ್ ಹಾಗೂ ಸಿಂಗರ್ ಸಂತೋಷ್ ವೆಂಕಿ ಪಬ್ಲಿಕ್ ಮ್ಯೂಸಿಕೋತ್ಸವದಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
Advertisement
ಅಷ್ಟೇ ಅಲ್ಲದೆ ಅನಿವರ್ಸರಿ ಪ್ರಯುಕ್ತ ಪ್ರತೀ ಗಂಟೆ ಸ್ಯಾಂಡಲ್‍ವುಡ್ ದಿಗ್ಗಜರು ಪಬ್ಲಿಕ್ ಮ್ಯೂಸಿಕ್‍ನ ಬಹುಮುಖ್ಯ ಭಾಗವಾಗಿರೋ ʼಪಬ್ಲಿಕ್ʼಗೆ ಚಿಕ್ಕ ಪ್ರಶ್ನೆ ಕೇಳಿ, ದೊಡ್ಡ ಗಿಫ್ಟ್ ಕೊಡುತ್ತಿದ್ದಾರೆ. ಇದರ ಜೊತೆಗೆ ದಿನವಿಡಿ ಕಲರ್‍ಫುಲ್ ಲೈ ಶೋಗಳ ಮೂಲಕ ಪಬ್ಲಿಕ್ ಮ್ಯೂಸಿಕ್ ರಸಿಕರಿಗೆ ಸಾಗರದಷ್ಟು ಮನರಂಜನೆಯನ್ನು ನೀಡಲಾಗುತ್ತಿದೆ.