ಆಡು ಮುಟ್ಟದ ಸೊಪ್ಪಿಲ್ಲ, ಸಂಗೀತ ಕೇಳದ ಹೃದಯವಿಲ್ಲ. ವಿಶ್ವದ ಎಲ್ಲಾ ಸಂಸ್ಕೃತಿಗಳಲ್ಲೂ ಬೆರೆತುಕೊಂಡಿರುವ ಸಂಗೀತ ನಮ್ಮೊಳಗೆ ಜೀವಾಮೃತದಂತೆ ಕೆಲಸ ಮಾಡುತ್ತದೆ. ಪಕ್ಷಗಳ ಚಿಲಿಪಿಲಿ ಗಾನಕ್ಕೆ ಮರಗಿಡಗಳು ತಲೆದೂಗುವಂತೆ, ಪ್ರಕೃತಿಯ ರಾಗವನ್ನು ವನ್ಯ ಜೀವಿಗಳು ಆಲಿಸುತ್ತ ತಮ್ಮದೇ ಲೋಕದಲ್ಲಿ ಎಂಜಾಯ್ ಮಾಡುತ್ತವೆ. ನೆಮ್ಮದಿ ನೀಡುವ ಸಾಧನದಂತಿರುವ ಮ್ಯೂಸಿಕ್, ಕೇಳುಗರನ್ನು ಆನಂದದ ಚರಮ ಸೀಮೆಗೊಯ್ಯುವ ಒಂದು ದೇವಕಲೆ ಅಂದರೆ ತಪ್ಪಾಗಲಾರದು. ಯಾವುದಕ್ಕೆ ಕಟ್ಟುಬೀಳದೇ ಸಂಗೀತವನ್ನು ಸತತ ಒಂಭತ್ತು ವರ್ಷಗಳಿಂದ ಪಬ್ಲಿಕ್ ಮ್ಯೂಸಿಕ್ (PUBLiC Music) ಕನ್ನಡಿಗರಿಗೆ ಉಣಬಡಿಸುತ್ತಿರೋದು ಹೆಮ್ಮೆಯ ಸಂಗತಿ.
`ನವ ಸಂಭ್ರಮ’ ಹೆಸರಿನ ಮೂಲಕ ಕನ್ನಡಿಗರ ಪ್ರಪ್ರಥಮ ಮ್ಯೂಸಿಕ್ ಚಾನೆಲ್ ಪಬ್ಲಿಕ್ ಮ್ಯೂಸಿಕ್ ಒಂಭತ್ತನೇ ವರ್ಷದ ವಾರ್ಷಿಕೋತ್ಸವವನ್ನು (9th Anniversary) ಆಚರಿಸಿಕೊಳ್ಳುತ್ತಿದೆ. `ಸೆಪ್ಟೆಂಬರ್ 28’ರಂದು ಪಬ್ಲಿಕ್ ಟಿ.ವಿಯ ಕೂಸು ಪಬ್ಲಿಕ್ ಮ್ಯೂಸಿಕ್‌ಗೆ ಸಡಗರ. ಸಂಭ್ರಮ. ಇಂದು ದಿನಪೂರ್ತಿ ಕಲರ್‌ಫುಲ್ ಕಾರ್ಯಕ್ರಮಗಳು ನಡೆಯುತ್ತವೆ. ಇದನ್ನೂ ಓದಿ: ಪಬ್ಲಿಕ್ ಮ್ಯೂಸಿಕ್‌ಗೆ ನವ ಸಂಭ್ರಮ
Advertisement
ಬೆಳಗ್ಗೆ 10-30ಕ್ಕೆ ಪಬ್ಲಿಕ್ ಟಿ.ವಿಯ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ (HR Ranganath) ಜೊತೆ ಲಹರಿ ಮ್ಯೂಸಿಕ್‌ನ ಮಾಲೀಕರಾದ ಮನೋಹರ್ ನಾಯ್ಡು, ಆನಂದ್ ಆಡಿಯೋ ಕಂಪನಿಯ ಮುಖ್ಯಸ್ಥರಾದ ಶ್ಯಾಮ್ ಚಾಬ್ರಿಯಾ, ಅಶ್ವಿನಿ ರೆಕಾರ್ಡಿಂಗ್ ಕಂಪನಿಯ ಅಶ್ವಿನಿ ರಾಮ್ ಪ್ರಸಾದ್ ಹಾಗೂ ಜೆಂಕಾರ್ ಮ್ಯೂಸಿಕ್‌ನ ಭರತ್ ಜೈನ್ ಉಪಸ್ಥಿತರಿರ್ತಾರೆ. ಇವರೆಲ್ಲರ ಜೊತೆ ಸ್ಯಾಂಡಲ್‌ವುಡ್‌ನ ಯುವ ಐಕಾನ್‌ಗಳಾಗಿರೋ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್, ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್, ರ‍್ಯಾಪರ್ ಹಾಗೂ ಸಿಂಗರ್ ಆಲ್ ಓಕೆ, ವೇದ ಚಿತ್ರದ ನಟಿ ಗಾನವಿ ಲಕ್ಷ್ಮಣ್, ನಟ ನವೀನ್ ಶಂಕರ್ ಹಾಗೂ ಟೋಬಿ ಸಿನಿಮಾದ ನಟಿ ಹಾಗೂ ಗಾಯಕಿ ಚೈತ್ರಾ ಆಚಾರ್ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಮೆರುಗು ಹೆಚ್ಚಿಸ್ತಾರೆ.
Advertisement
Advertisement
ಬೆಳಗ್ಗೆ 11ಗಂಟೆಗೆ ಯುವ ಸೆಲೆಬ್ರಿಟಿಗಳ ಜೊತೆ ಸಿನಿಮಾ ಹಾಗೂ ಸಂಗೀತದ ಬಗ್ಗೆ ಮಾತುಕತೆ ನಡೆಯಲಿದೆ. ವಾರ್ಷಿಕೋತ್ಸವದ ಪ್ರಯುಕ್ತ ಪಬ್ಲಿಕ್ ಮ್ಯೂಸಿಕ್ ವೀಕ್ಷಕರಿಗಾಗಿ ದಿನಪೂರ್ತಿ ಸ್ಪರ್ಧೆ ಮಾಡಲಾಗುತ್ತದೆ. ಹಾಡಿನ ಮೇಲೆ ಬರುವಂತ ತುಂಬ ಸಿಂಪಲ್ ಆದ ಪ್ರಶ್ನೆಗಳಿಗೆ ಉತ್ತರ ಕಳುಹಿಸಿದರೆ ಬಂಪರ್ ಗಿಫ್ಟ್ ನಿಮ್ಮದಾಗಲಿದೆ. ನವ ಸಂಭ್ರಮದ ಪ್ರಯುಕ್ತ ದಿನಪೂರ್ತಿ ಕಲರ್‌ಫುಲ್ ಶೋಗಳನ್ನು ನೋಡಬಹುದು. ಮೊದಲ ವರ್ಷದಿಂದ ಇಂದು 9ನೇ ವರ್ಷದವರೆಗೂ ಜೊತೆ ನಿಂತು, ಬೆನ್ನುತಟ್ಟಿದ್ದು ಇದೇ ಕರುನಾಡ ಜನ, ಮುಂದೆಯೂ ನೀವು ಜೊತೆಗಿರುತ್ತೀರಿ ಎಂಬ ಭರವಸೆ ನಮಗಿದೆ. ನಿಮ್ಮ ನಂಬಿಕೆಯನ್ನು ಮುಂದೆಯೂ ನಾವು ಉಳಿಸಿಕೊಂಡು, ಬರಪೂರ ಮನರಂಜನೆ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ.
Advertisement
ಹಸುಕಾಯುವ ಗೊಲ್ಲ, ಕುರಿ ಮೇಯಿಸುವ ಕುರುಬ, ನೇಗಿಲ ಯೋಗಿ ರೈತ, ಇವರೆಲ್ಲರಲ್ಲೂ ಒಬ್ಬ ಮಧುರವಾದ ಹಾಡುಗಾರನಿದ್ದಾನೆ. ಎಷ್ಟೋ ಬಾರಿ, ಇಷ್ಟದ ಹಾಡು ಕೇಳುವಾಗ ನೆನಪಿನ ಸುರುಳಿ ಬಿಚ್ಚುವುದು, ಬಯಲಿನಲ್ಲಿ ಬಯಲಾದಂತೆ. ಇನ್ನೆಷ್ಟೋ ಬಾರಿ ಹಾಡು ಕೇಳುತ್ತಾ ಕನಸಿನ ಉಗ್ರಾಣವೇ ಹುಟ್ಟಿಕೊಳ್ಳುವಂತೆ ಮಾಡುವ ಮ್ಯೂಸಿಕ್ ಕ್ಷೇತ್ರ, ಪಬ್ಲಿಕ್ ಮ್ಯೂಸಿಕ್‌ಗೆ 9ರ ಸಡಗರ. ಪಬ್ಲಿಕ್ ಮ್ಯೂಸಿಕ್ ವಾಹಿನಿಯನ್ನು ವೀಕ್ಷಿಸುತ್ತಾ ಜೊತೆಯಾಗಿ `ನವ ಸಂಭ್ರಮ’ವನ್ನು ಆಚರಿಸೋಣ.
Web Stories