ಚಾಮರಾಜನಗರ: ತಪ್ಪು ಹಾಗೂ ವಿಳಂಬ ನೀತಿ ಅನುಸರಿಸಿದ್ದಕ್ಕಾಗಿ ಕೊಳ್ಳೇಗಾಲ ನಗರಸಭೆ ಆಯುಕ್ತರಿಗೆ ಮಾಹಿತಿ ಹಕ್ಕು ಆಯೋಗ 10 ಸಾವಿರ ರೂ. ದಂಡ ವಿಧಿಸಿದೆ.
ಕೊಳ್ಳೇಗಾಲ ನಗರಸಭೆ ಆಯುಕ್ತ ನಾಗಶೆಟ್ಟಿಗೆ ದಂಡ ವಿಧಿಸಲಾಗಿದೆ. ಕೊಳ್ಳೇಗಾಲದಲ್ಲಿನ ಕಲ್ಯಾಣಮಂಟಪಗಳ ಸಂಖ್ಯೆ, ಮಾಂಸದಂಗಡಿಗಳ ಸಂಖ್ಯೆ ಕುರಿತು ಆರ್‌ಟಿಐ ಕಾರ್ಯಕರ್ತ ದಶರಥ ಅವರು ಕೇಳಿದ್ದ ಪ್ರಶ್ನೆಗೆ ಆಯುಕ್ತರು ತಪ್ಪು ಮಾಹಿತಿ ನೀಡಿದ್ದಲ್ಲದೆ ವಿಳಂಬ ನೀತಿಯನ್ನು ಅನುಸರಿಸಿದ್ದರು. ಈ ಬಗ್ಗೆ ದಶರಥ್ ಅವರು ಸಾರ್ವಜನಿಕ ಮಾಹಿತಿ ಹಕ್ಕು ಆಯೋಗಕ್ಕೆ ದೂರು ನೀಡಿದ್ದರು. ಈ ಆಧಾರದ ಮೇರೆಗೆ ಸಾರ್ವಜನಿಕ ಮಾಹಿತಿ ಹಕ್ಕು ಆಯೋಗದ ಆಯುಕ್ತರಾದ ಮಂಜುನಾಥ್ ಅವರು ನಾಗಶೆಟ್ಟಿ ಅವರಿಗೆ 10 ಸಾವಿರ ರೂ. ದಂಡ ಕಟ್ಟುವಂತೆ ಆದೇಶಿಸಿದ್ದಾರೆ.
- Advertisement 2-
- Advertisement 3-
ಈ ಸಂಬಂಧ ಎರಡು ಪ್ರಕರಣಗಳನ್ನೂ ಕೈಗೆತ್ತಿಕೊಂಡ ಆಯುಕ್ತ ಮಂಜುನಾಥ್ ಅವರು ವಾದ-ವಿವಾದ ಆಲಿಸಿ ಎರಡೂ ಪ್ರಕರಣಗಳಿಗೆ ತಲಾ 5 ಸಾವಿರ ದಂಡ ವಿಧಿಸಿ ಆದೇಶ ನೀಡಿದ್ದಾರೆ. ಒಟ್ಟು 10 ಸಾವಿರ ರೂ. ದಂಡವನ್ನು ನಾಗಶೆಟ್ಟಿ ಅವರ ಮಾಸಿಕ ಸಂಬಳದಲ್ಲಿ 2 ಕಂತುಗಳಾಗಿ ಪಡೆಯಲು ಸೂಚಿಸಲಾಗಿದೆ.