ತುಮಕೂರು: ಶವಗಳನ್ನು ಸುಡುವುದೇ ಇವರ ಕಾಯಕ. ಈ ಹಣದಿಂದಲೇ ಜೀವನ ನಡೆಸುವ ಯಶೋದಮ್ಮ, ಆದ್ರೆ ಸ್ಮಶಾನಕ್ಕೆ ಬರುವ ಬಡವರ ಶವಗಳಿಗೆ ಮಾತ್ರ ಹಣ ಪಡೆಯದೇ ಮಾನವೀಯತೆಗೆ ಹೆಸರಾಗಿದ್ದಾರೆ.
ತುಮಕೂರು ನಗರ ನಿವಾಸಿಯಾದ ಯಶೋದಮ್ಮ ಕಳೆದು ಮೂರು-ನಾಲ್ಕು ವರ್ಷಗಳಿಂದ ಗಾರ್ಡನ್ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ಜನರು ಶವ ಸಂಸ್ಕಾರಕ್ಕಾಗಿ ಕಟ್ಟಿಗೆ, ಸೀಮೆ ಎಣ್ಣೆ ಎಲ್ಲ ಸೇರಿ ಸುಮಾರು 2500-3000 ರೂ. ಹಣವನ್ನು ಯಶೋದಮ್ಮವರಿಗೆ ನೀಡ್ತಾರೆ. ಆದ್ರೆ ಬಡವರ ಶವಗಳು ಬಂದಾಗ ಮಾತ್ರ ಯಶೋದಮ್ಮ ಯಾವುದೇ ಶುಲ್ಕವನ್ನು ಪಡೆದುಕೊಳ್ಳಲ್ಲ.
Advertisement
ಈ ಹಣವನ್ನೇ ಯಶೋದಮ್ಮ ತಮ್ಮಿಬ್ಬರ ಮಕ್ಕಳ ಓದಿಗೂ ಹಾಗು ಜೀವನಾಧಾರಕ್ಕೂ ಬಳಸುತ್ತಾರೆ. ಯಶೋದಮ್ಮರ ಪತಿ ಗೂಳಯ್ಯ 15 ವರ್ಷಗಳಿಂದ ಶವ ಸುಡುವ ಕಾಯಕ ಮಾಡಿಕೊಂಡು ಬಂದಿದ್ರು. ನಾಲ್ಕು ವರ್ಷದ ಹಿಂದೆ ಅನಾರೋಗ್ಯದಿಂದಾಗಿ ಸಾವನ್ನಪ್ಪಿದ್ರು. ಸದ್ಯ ಪತಿಯ ಕಾಯಕವನ್ನೇ ಯಶೋದಮ್ಮ ಮುಂದುವರಿಸಿಕೊಂಡು ಬಂದಿದ್ದಾರೆ. ಯಶೋದಮ್ಮ ಅವರಿಗೆ ಆರ್ಯವೈಶ್ಯ ಬ್ಯಾಂಕ್ ಗೌರವಧನವಾಗಿ ತಿಂಗಳಿಗೆ 1,000 ರೂ ನೀಡುತ್ತಿದೆ.
Advertisement
https://www.youtube.com/watch?v=AedkUiZOyEU