ಶಿವಮೊಗ್ಗ: ಸಿಟಿ ಲೈಫ್‍ಗೆ ಮರುಳಾಗೋ ನಮ್ಮ ಇಂದಿನ ಯುವಪೀಳಿಗೆ ಹಳ್ಳಿ ಬಿಟ್ಟು ಬರ್ತಾರೆ. ಆದ್ರೆ ಶಿವಮೊಗ್ಗದ ನಮ್ಮ ಪಬ್ಲಿಕ್ ಹೀರೋ ಇದಕ್ಕೆ ವಿರುದ್ಧ. ಪೇಟೇಲಿ ಓದಿದ್ರೂ ಹಳ್ಳಿಗೆ ವಾಪಸ್ ಆಗಿದ್ದಾರೆ ವಿಶ್ವನಾಥ್. ಅಷ್ಟೇ ಅಲ್ಲ, ಶಿವಮೊಗ್ಗ ಭಾಗದ ಅಡಿಕೆ ಬೆಳೆಗಾರರಿಗೆ ಮಿತ್ರರಾಗಿದ್ದಾರೆ.
ಮಲೆನಾಡು ಶಿವಮೊಗ್ಗದಲ್ಲಿ ಅಡಿಕೆ ಪ್ರಮುಖ ಬೆಳೆ. ಈ ಅಡಿಕೆ ಸುಲಿಯೋಕೆ ಜನ ಸಿಗದೆ ಬೆಳೆಗಾರರು ಕಂಗಾಲಾಗಿದ್ರು. ಆದ್ರೆ ತೀರ್ಥಹಳ್ಳಿಯಿಂದ 10 ಕಿ.ಮೀ. ದೂರದಲ್ಲಿರುವ ಕುಂಟುವಳ್ಳಿಯ ವಿಶ್ವನಾಥ್ ಈ ಭಾಗದ ಅಡಿಕೆ ಬೆಳೆಗಾರರ ಮಿತ್ರರಾಗಿ ಬಂದಿದ್ದಾರೆ. ತಮ್ಮ ವಿಟೆಕ್ ಎಂಜಿನಿಯರಿಂಗ್ಸ್ ನಲ್ಲಿ ಅಡಿಕೆ ಸುಲಿಯೋ ಯಂತ್ರಗಳನ್ನ ತಯಾರು ಮಾಡಿದ್ದಾರೆ.
Advertisement
20 ಜನರ ಕೆಲಸವನ್ನು ಈ ಯಂತ್ರ ಕೇವಲ 4 ಗಂಟೆಯಲ್ಲಿ ಮುಗಿಸ್ತಿದೆ. ವಿಶ್ವನಾಥ್ ಅವರ ಅಡಿಕೆ ಯಂತ್ರದಿಂದ ತುಂಬಾ ಅನುಕೂಲವಾಗಿದೆ ಅಂತಾರೆ ಬೆಳೆಗಾರರು. ಮೆಕ್ಯಾನಿಕಲ್ ಎಂಜಿಯರಿಂಗ್ ಓದಿರೋ ವಿಶ್ವನಾಥ್ ಸಿಟಿಯಲ್ಲಿ ನೆಲೆ ಕಂಡುಕೊಳ್ಳಲಿಲ್ಲ. ಸ್ವತಃ ಅಡಿಕೆ ಬೆಳೆಗಾರರೂ ಆಗಿರೋ ಕಾರಣ ಇಲ್ಲಿನ ಸಮಸ್ಯೆ ಅರಿತು ಯಂತ್ರ ಕಂಡುಹಿಡಿದೆ ಅಂತಾರೆ. ಯಂತ್ರಕ್ಕೆ ಪೇಟೆಂಟ್ ಕೂಡ ಪಡೆದಿರೋ ವಿಶ್ವನಾಥ್, ಕೃಷಿ ಯಾಂತ್ರೀಕರಣಕ್ಕಾಗಿ ನಿರಂತರವಾಗಿ ಚೀನಾ-ಜಪಾನ್‍ಗೆ ಭೇಟಿ ಕೊಡ್ತಿರ್ತಾರೆ.
Advertisement
ಅಷ್ಟೇ ಅಲ್ಲದೆ ವಾಹನಗಳತ್ತ ಗಮನ ಹರಿಸಿದ್ದು ಬ್ಯಾಟರಿ, ಪೆಟ್ರೋಲ್, ಸೋಲಾರ್ ಮೂರರಿಂದಲೂ ಓಡುವ ಕಾರನ್ನ ತಯಾರಿಸಿದ್ದಾರೆ. 1 ಲೀಟರ್ ಪೆಟ್ರೋಲ್‍ಗೆ ಈ ಕಾರ್ 200 ಕಿ.ಮೀ ಮೈಲೇಜ್ ಕೊಡ್ತಿದೆ. ಇಂಥಹ ಸಾಧನೆ ಮಾಡಿರೋ ವಿಶ್ವನಾಥ್ ದೇಶದಲ್ಲೇ ಮೊದಲಿಗರಾಗಿದ್ದಾರೆ.