ಮಂಗಳೂರು: ಆಟೋಗಳನ್ನು ಹೆಚ್ಚಾಗಿ ಗಂಡಸರೇ ಓಡಿಸೋದು. ಬೆಂಗಳೂರಲ್ಲಿ ಅಲ್ಲೊಬ್ರು ಇಲ್ಲೊಬ್ರು ಹೆಂಗಸರು ಅಪರೂಪಕ್ಕೆ ಕಾಣಬಹುದು. ಈ ಸಾಲಿಗೆ ವಿಜಯಲಕ್ಷ್ಮಿ ಅವರು ಸೇರ್ಪಡೆಯಾಗಿದ್ದಾರೆ. ಗಂಡನನ್ನು ಕಳೆದುಕೊಂಡ ವಿಜಯಲಕ್ಷ್ಮಿ ಆಟೋ ಮೂಲಕ ಕುಟುಂಬ ನಿಭಾಯಿಸ್ತಿದ್ದಾರೆ.
ಹೌದು. ಮಂಗಳೂರಿನ ಸುರತ್ಕಲ್ ಸಮೀಪದ ಹೊಸಬೆಟ್ಟು ನಿವಾಸಿ ವಿಜಯಲಕ್ಷ್ಮಿಯ ಪತಿ ಮೂರ್ತಿ ಸುರತ್ಕಲ್‍ನ ಆಟೋ ನಿಲ್ದಾಣದಲ್ಲಿ ಆಟೋ ಓಡಿಸ್ತಾ ಇಬ್ಬರು ಮಕ್ಕಳು-ಪತ್ನಿಯನ್ನು ಸಲಹುತಿದ್ದರು. ಆದರೆ, ಕಳೆದ ವರ್ಷ ಹೃದಯಾಘಾತದಿಂದ ಮೂರ್ತಿ ಸಾವನ್ನಪ್ಪಿದ್ದರು. ಹೀಗಾಗಿ, ಬಾಡಿಗೆ ಮನೆಯಲ್ಲಿ ವಾಸವಿದ್ದ ವಿಜಯಲಕ್ಷ್ಮಿ ಅವರಿಗೆ ದಿಕ್ಕು ತೋಚದಂತಾಯ್ತು. ಕೊನೆಗೆ ಗಂಡ ಓಡಿಸುತ್ತಿದ್ದ ಆಟೋವನ್ನೇ ವಿಜಯಲಕ್ಷ್ಮಿ ತಮ್ಮ ಆಧಾರ ಮಾಡಿಕೊಂಡರು. ಈ ಹಿಂದೆಯೇ ವಿಜಯಲಕ್ಷ್ಮಿಗೆ ಪತಿ ಆಟೋ ಓಡಿಸೋದನ್ನು ಕಲಿಸಿದ್ದರು. ಜೊತೆಗೆ ಲೈಸೆನ್ಸ್ ಕೂಡ ಮಾಡಿಕೊಟ್ಟಿದ್ದು ಈಗ ಅನುಕೂಲಕ್ಕೆ ಬಂದಿದೆ.
Advertisement
Advertisement
ಹೆಂಗಸಾಗಿ ಹೇಗಪ್ಪಾ ಆಟೋ ಓಡಿಸೋದು ಅಂತಿದ್ದ ವಿಜಯಲಕ್ಷ್ಮಿಗೆ ನೆರವಿಗೆ ಬಂದಿದ್ದು, ಸ್ಥಳೀಯ ರಿಕ್ಷಾ ಚಾಲಕರ ಸಂಘ ಹಾಗೂ ಸುರತ್ಕಲ್‍ನ ಆಪತ್ಬಾಂಧವ ಸಮಾಜದ ಸೇವಾ ಸಂಘ. ವಿಜಯಲಕ್ಷ್ಮಿ ಅವರಿಗೆ ಮೊದಲ ಬಾಡಿಗೆ ನೀಡಿ ಪ್ರೋತ್ಸಾಹಿಸುತ್ತಿದೆ.
Advertisement
ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಆಟೋ ಓಡಿಸೋ ವಿಜಯಲಕ್ಷ್ಮಿ, ಮಧ್ಯಾಹ್ನದಿಂದ ರಾತ್ರಿ 10 ಗಂಟೆಯವರೆಗೂ ಸ್ಥಳೀಯ ಗೋಡಂಬಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ತನ್ನಿಬ್ಬರು ಮಕ್ಕಳನ್ನು ಓದಿಸುತ್ತಿದ್ದಾರೆ.