ತುಮಕೂರು: ಅಧಿಕಾರಿಗಳಲ್ಲಿ ಸೇವಾ ಮನೋಭಾವ, ಇಚ್ಚಾಶಕ್ತಿ ಇದ್ದರೆ ಸರ್ಕಾರದ ಎಲ್ಲಾ ಯೋಜನೆಗಳನ್ನು ಯಶಸ್ವಿಯಾಗಿಸಬಹುದು ಅನ್ನೋದಕ್ಕೆ ಈ ಅಧಿಕಾರಿ ಸ್ಪಷ್ಟ ಉದಾಹರಣೆ.
ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಈ ಕಾರ್ಯನಿರ್ವಹಣಾಧಿಕಾರಿ ಹಗಲಿರುಳು ದುಡಿಯುತ್ತಿದ್ದಾರೆ. ತುಮಕೂರು ತಾಲೂಕು ಪಂಚಾಯತ್ ಇಓ ಡಾ.ನಾಗಣ್ಣ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಇವರ ಅವಿರತ ಪ್ರಯತ್ನದ ಫಲವಾಗಿ ಇಂದು ತುಮಕೂರು ತಾಲೂಕಿನಲ್ಲಿ 50455 ಟಾಯ್ಲೆಟ್ ನಿರ್ಮಾಣ ಆಗಿವೆ. ಇನ್ನು 3400 ಕುಟುಂಬಗಳು ಶೌಚಾಲಯ ನಿರ್ಮಿಸಿಕೊಂಡ್ರೆ, ತುಮಕೂರು ಬಯಲು ಶೌಚ ಮುಕ್ತ ತಾಲೂಕು ಎಂಬ ಗರಿಮೆಗೆ ಪಾತ್ರವಾಗುತ್ತದೆ.
Advertisement
ಕಳೆದ 1 ವರ್ಷ 9 ತಿಂಗಳಿಂದ ಕೆಲ ಸರ್ಕಾರಿ ರಜೆ ಹೊರತುಪಡಿಸಿದ್ರೆ ಭಾನುವಾರವೂ ಸಹ ಹಳ್ಳಿಗಳಿಗೆ ತೆರಳಿ ಜಾಗೃತಿ ಮೂಡಿಸ್ತಿದ್ದಾರೆ. 120 ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದಾರೆ. ಜಕ್ಕೆನಳ್ಳಿಯಲ್ಲಿ ಟಾಯ್ಲೆಟ್ ಕಟ್ಟಿಸಿಕೊಳ್ಳದ ಕುಟುಂಬಗಳ ವಿರುದ್ಧ ಗಾಂಧಿ ಅಸ್ತ್ರ ಪ್ರಯೋಗಿಸಿದ್ರು. ಸೆಪ್ಟೆಂಬರ್ 16ರಂದು ಗಾಂಧಿ ಟೊಪ್ಪಿಗೆ ಧರಿಸಿ ಸತ್ಯಾಗ್ರಹ ಕುಳಿತಿದ್ರು. ಪರಿಣಾಮ ಜಕ್ಕೆಹಳ್ಳಿ ಇಂದು ಬಯಲು ಶೌಚ ಮುಕ್ತ.
Advertisement
ತುಮಕೂರು ತಾಲೂಕಿನಲ್ಲಿ ಈಗಾಗಲೇ ಶೇಕಡಾ 94.4 ರಷ್ಟು ಶೌಚಾಲಯ ನಿರ್ಮಾಣವಾಗಿದೆ. ಇನ್ನೆರಡು ತಿಂಗಳಲ್ಲಿ ತುಮಕೂರು ತಾಲೂಕು ಬಯಲು ಶೌಚಮುಕ್ತವಾಗುತ್ತೆ ಎಂಬ ವಿಶ್ವಾಸ ನಾಗಣ್ಣನವರದ್ದು. ಡಾ.ನಾಗಣ್ಣ ಸಚಿವ ಡಿಬಿ ಜಯಚಂದ್ರ ಬಳಿ ವಿಶೇಷಾಧಿಕಾರಿಯಾಗಿ ಸಹ ಕೆಲಸ ಮಾಡಿದ್ರು.
Advertisement
https://www.youtube.com/watch?v=Q3G876gAxt4