ತುಮಕೂರು: ಇಂದಿನ ಯುವಜನತೆ ಮೊಬೈಲ್, ಫೇಸ್‍ಬುಕ್, ವಾಟ್ಸಪ್ ಅಂತ ಕಾಲಹರಣ ಮಾಡ್ತಾರೆ. ಆದ್ರೆ, ತುಮಕೂರಿನ ಇವತ್ತಿನ ಪಬ್ಲಿಕ್ ಹೀರೋಗಳು ಸ್ಮಾರಕ, ಕೋಟೆಕೊತ್ತಲು, ಕಲ್ಯಾಣಿಗಳನ್ನ ಶುಚಿಗೊಳಿಸಿ ಕಾಯಕಲ್ಪ ನೀಡ್ತಿದ್ದಾರೆ.
ತುಮಕೂರಿನ ಗುಬ್ಬಿ ತಾಲೂಕಿನ ಹಾಗಲವಾಡಿಯ `ಸ್ನೇಹಜೀವಿ’ ಬಳಗ. ಐತಿಹಾಸಿಕ ಕೋಟೆ ಕೊತ್ತಲಗಳು, ಕಲ್ಯಾಣಿಗಳು, ಸ್ಮಾರಕಗಳನ್ನು ಪುರಾತತ್ವ ಇಲಾಖೆಯೇ ಕಡೆಗಣಿಸಿರುವಾಗ ಇವರೆಲ್ಲಾ ಸದ್ದಿಲ್ಲದೇ ಸಂರಕ್ಷಣೆ ಮಾಡ್ತಿದ್ದಾರೆ.
Advertisement
Advertisement
ಹಾಗಲವಾಡಿಯ ಕೆಲ ಯುವಕರು ಫೇಸ್‍ಬುಕ್, ವಾಟ್ಸಪ್‍ಗಳಲ್ಲಿ ತಮ್ಮೂರಿನ ಸ್ಮಾರಕಗಳ ದುಃಸ್ಥಿತಿ ಬಗ್ಗೆ ಚರ್ಚಿಸಿದ್ದರು. ಇದಕ್ಕೆ ಸ್ಪಂದಿಸಿದ ಇತರ ಯುವಕರು ಒಗ್ಗಟ್ಟಾಗಿ ಶ್ರಮದಾನದ ಮೂಲಕ ಮರುಜೀವ ಕೊಡೋಣ ಎಂದು ಕೈಜೋಡಿಸಿದ್ದಾರೆ ಅಂತ ಸ್ನೇಹ ಜೀವಿ ಬಳಗದ ಸದಸ್ಯ ಶ್ರೀನಿವಾಸ್ ಹೇಳಿದ್ದಾರೆ.
Advertisement
Advertisement
ಹಾಗಲವಾಡಿಯಲ್ಲಿ ದೇವಾಲಯಗಳು, ಕೋಟೆ, ಕಲ್ಯಾಣಿಗಳು ಸೇರಿದಂತೆ ಸುಮಾರು 107 ಐತಿಹಾಸಿಕ ತಾಣಗಳಿವೆ. ಪ್ರತಿ ಭಾನುವಾರ ಹಾಗೂ ಕೆಲ ರಜಾ ದಿನಗಳಲ್ಲಿ ಯುವಕರೆಲ್ಲರೂ ಸೇರಿ ಸ್ವಚ್ಚತಾ ಕಾರ್ಯ ಮಾಡ್ತಿದ್ದಾರೆ. ಊರಿನ 3 ದೊಡ್ಡ ಕಲ್ಯಾಣಿ ಸ್ವಚ್ಚಗೊಳಿಸಲು ಹಣಕಾಸಿನ ಅವಶ್ಯ ಇದ್ದು. ದಾನಿಗಳ ನಿರೀಕ್ಷೆಯಲ್ಲಿದ್ದಾರೆ ಸ್ನೇಹ ಜೀವಿ ಬಳಗದ ಸದಸ್ಯ ಮಹೇಶ್ ಹೇಳಿದ್ರು.
ಒಟ್ಟಿನಲ್ಲಿ ಪುರಾತತ್ವ ಇಲಾಖೆ ನಿದ್ರಾವಸ್ಥೆಯಲ್ಲಿರುವಾಗ ಸ್ನೇಹಜೀವಿ ಯುವಕರ ಕಾರ್ಯ ಎಲ್ಲರ ಪ್ರೀತಿಗೆ ಪಾತ್ರವಾಗಿದೆ.
https://www.youtube.com/watch?v=8YDOnKKo5E8
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv