ಕಾರವಾರ: ಸಮಾಜ ಸೇವೆಗಾಗಿ ವಿದೇಶದಲ್ಲಿ ಸಿಕ್ಕಿರುವ ಕೆಲಸವನ್ನು ಬಿಟ್ಟು ತಾಯ್ನಾಡಿನಲ್ಲಿ ಬುದ್ಧಿಮಾಂದ್ಯರ ಸೇವೆ ಮಾಡುತ್ತಿರುವ ವ್ಯಕ್ತಿಯೇ ಇವತ್ತಿನ ನಮ್ಮ ಪಬ್ಲಿಕ್ ಹೀರೋ.
Advertisement
ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಅಳ್ವೆಕೋಡಿಯ ನಿವಾಸಿ ಸಿರಿಲ್ ಲೋಪಿಸ್ ನಮ್ಮ ಪಬ್ಲಿಕ್ ಹೀರೋ. ಬಡತನದಲ್ಲಿ ಹುಟ್ಟಿ ಕಷ್ಟಪಟ್ಟು ಓದಿ ದುಬೈನಲ್ಲಿ ಒಳ್ಳೇ ಕೆಲಸದಲ್ಲಿದ್ದರು. ದುಬೈನಲ್ಲಿದ್ದ ಕೆಲಸ ಬಿಟ್ಟು 2010ರಲ್ಲಿ ಕುಮಟಾಕ್ಕೆ ಬಂದು ತಮ್ಮ ದಯಾ ನಿಲಯ ಹೆಸರಿನ ಮನೆಯನ್ನೇ ಬುದ್ಧಿಮಾಂದ್ಯ ಮಕ್ಕಳ ಶಾಲೆಯಾಗಿ ಮಾಡಿದ್ದಾರೆ.
Advertisement
ನಾಲ್ಕೈದು ಮಕ್ಕಳಿಂದ ಪ್ರಾರಂಭವಾದ ಈ ಶಾಲೆಯಲ್ಲೀಗ 32 ಮಕ್ಕಳಿದ್ದಾರೆ. ಊಟ, ವಸತಿ, ಶಿಕ್ಷಣ ಎಲ್ಲವೂ ಇಲ್ಲೇ ನಡೆಯುತ್ತಿದೆ. ಸಿರಿಲ್ ಒಂದು ರೀತಿ ತ್ರಿವಿಧ ದಾಸೋಹಿ ಆಗಿದ್ದಾರೆ. ಈ ವಿಶೇಷ ಮಕ್ಕಳಿಗೆ ಶಿಕ್ಷಣ ನೀಡುವುದು ಬಲು ಕಷ್ಟವಾಗಿತ್ತು. ಹಾಗಾಗಿ ಸಿರಿಲ್ ಈ ಮಕ್ಕಳಿಗೆ ಶಿಕ್ಷಣ ನೀಡೋಕೆ ಅಂತಾನೇ ವಿಶೇಷ ಟ್ರೈನಿಂಗ್ ಪಡೆದಿದ್ದಾರೆ. ಒಮ್ಮೆ ಶಾಲೆ ನಡೆಸುವುದು ಕಷ್ಟವಾದಾಗ ತನ್ನ ಬೈಕ್ ಮಾರಿದ್ದಾರೆ.
Advertisement
Advertisement
ಈ ದಯಾ ನಿಲಯದಲ್ಲಿ ಸಂಗೀತ, ಕಂಪ್ಯೂಟರ್ ಜೊತೆಗೆ ಸ್ವ-ಉದ್ಯೋಗ ಕಲಿಕೆ ಭಾಗವಾಗಿ ಸಾವಯವ ಗೊಬ್ಬರ ಹಾಗೂ ಪಿನಾಯಿಲ್ ತಯಾರಿಕೆ ಬಗ್ಗೆ ಕಲಿಸಿಕೊಡಲಾಗ್ತಿದೆ. ಈ ಶಾಲೆ ಮಕ್ಕಳು ಟೇಬಲ್ ಟೆನ್ನಿಸ್‍ನಲ್ಲಿ ರಾಜ್ಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸಿ ಬಂಗಾರದ ಪದಕ ಗೆದ್ದಿದ್ದಾರೆ.
https://www.youtube.com/watch?v=-Fjf92zIIVQ