ಕೊಪ್ಪಳ: ಕೆರೆಯ ನೀರನ್ನು ಮಾರಿಕೊಂಡು ಹಣ ಗಳಿಸುವವರ ಮಧ್ಯೆ ನಮ್ಮ ಪಬ್ಲಿಕ್ ಹೀರೋ ತುಂಬಾ ವಿಭಿನ್ನವಾಗಿ ಕಾಣುತ್ತಾರೆ. ತಮ್ಮ ಜಮೀನಿನಲ್ಲಿ ಬೆಳೆಗೆ ಅಂತಾ ಬೋರ್ ಕೊರೆಸಿದ್ರೆ ಇಂದು ಅದೇ ನೀರಿನಿಂದ ಪಕ್ಕದೂರಿನ ಜನರ ದಾಹ ನೀಗಿಸುತ್ತಿದ್ದಾರೆ.
ಕೊಪ್ಪಳ ತಾಲೂಕಿನ ಮೋರನಾಳ ಗ್ರಾಮದ ನಿವಾಸಿ ಶಿವು ಮೋರನಾಳ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಸರ್ಕಾರ, ಜನಪ್ರತಿನಿಧಿಗಳು ಮಾಡದೇ ಇರೋ ಕಾರ್ಯವನ್ನ ಶಿವು ಮಾಡ್ತಿದ್ದಾರೆ. ಬಿಸರಹಳ್ಳಿ ಗ್ರಾಮದಲ್ಲಿ ಎಲ್ಲೇ ಬೋರ್‍ವೆಲ್ ಕೊರೆಸಿದ್ರೂ ಫ್ಲೋರೈಡ್ ನೀರೇ ಸಿಗುತ್ತದೆ. ತಮ್ಮ ಜಮೀನಿನಲ್ಲಿ ಸಿಕ್ಕಿರೋ ಸಿಹಿನೀರನ್ನ 8 ಕಿ.ಮೀ. ದೂರದ ಬಿಸರಳ್ಳಿ ಜನರಿಗೆ ನಾಲ್ಕು ವರ್ಷದಿಂದ ನೀಡುತ್ತಿದ್ದಾರೆ.
Advertisement
Advertisement
ತಮ್ಮ ಬೋರ್‍ವೆಲ್‍ಗೆ ಕಮರ್ಶಿಯಲ್ ಮೀಟರ್ ಅವಳಡಿಸಿ ತಿಂಗಳಿಗೆ ನಾಲ್ಕೈದು ಸಾವಿರ ರೂಪಾಯಿ ಬಿಲ್ ಕಟ್ತಿದ್ದಾರೆ. ಬೋರ್‍ವೆಲ್ ಕೆಟ್ಟರೆ ತಮ್ಮ ದುಡ್ಡಿನಿಂದಲೇ ರೆಡಿ ಮಾಡಿಸುತ್ತಾರೆ. ಸರ್ಕಾರ ಕುಡಿಯುವ ನೀರಿಗಾಗಿ ಶುದ್ಧ ನೀರಿನ ಘಟಕ ಮಾಡಿದೆ. ಇದಕ್ಕೆ 3 ರಿಂದ 5 ರೂಪಾಯಿ ಕೊಡಬೇಕು. ಆದರೆ ಶಿವು ಅವರು ಮಾತ್ರ ಗ್ರಾಮಸ್ಥರಿಂದ ನಯಾಪೈಸೆ ಹಣವನ್ನು ತೆಗೆದುಕೊಳ್ಳುವುದಿಲ್ಲ.