ಕೊಪ್ಪಳ: ಎಲ್ಲ ಸರಿಯಿದ್ದು ಒಂದೆರಡು ಎಕರೆ ಇದ್ದವರು ಕೃಷಿ ಮಾಡೋಕೆ ಒದ್ದಾಡ್ತಿರ್ತಾರೆ. ಆದ್ರೆ, ಅಂಗವಿಕಲರಾಗಿರೋ ಶಿವರಾಜ್ ಮಾತ್ರ ಬರೋಬ್ಬರಿ 80 ಎಕರೆಯಲ್ಲಿ ಭತ್ತ ಬೆಳೆದು ಮಾದರಿಯಾಗಿದ್ದಾರೆ. ಭತ್ತದ ಕಣಜ ಶಿವರಾಜ್ ಅವರು ಪಬ್ಲಿಕ್ ಹೀರೋ ಆಗಿದ್ದಾರೆ.
ಕೊಪ್ಪಳದ ಗಂಗಾವತಿ ತಾಲೂಕಿನ ಶಾಲಿಗನೂರು ಗ್ರಾಮದ ಶಿವರಾಜ್, 2 ಕಾಲುಗಳಿಲ್ಲದೆ ಅಂಗವೈಕಲ್ಯತೆಗೀಡಾಗಿದ್ದಾರೆ. ಆದ್ರೆ ತಾನು ಯಾರಿಗೂ ಕಮ್ಮಿ ಇಲ್ಲದಂತೆ ಕೆಲಸ ಮಾಡ್ತಿದ್ದಾರೆ. 40 ಎಕರೆ ಸ್ವಂತದ್ದು ಹಾಗೂ 40 ಎಕರೆ ಗುತ್ತಿಗೆ ಪಡೆದು ಒಟ್ಟು 80 ಎಕರೆಯಲ್ಲಿ ಭತ್ತ ಬೆಳೀತಿದ್ದಾರೆ.
Advertisement
Advertisement
ಓದಿದ್ದು 10ನೇ ಕ್ಲಾಸ್ ಆದ್ರೂ ಕುಶಾಗ್ರಮತಿಯಾಗಿರೋ ಶಿವರಾಜ್ ಭತ್ತದ ಇಳುವರಿ ಬಗ್ಗೆ ಚೆನ್ನಾಗಿ ಅರಿತುಕೊಂಡಿದ್ದಾರೆ. ಡಿಗ್ರಿ ಪಡೆದವರು ಸಹ ಶಿವರಾಜ್ ಆತ್ಮ ಸ್ಥೈರ್ಯವನ್ನು ಕಂಡು ಬೆರಗಾಗಿದ್ದಾರೆ ಅಂತ ಶಿವರಾಜ್ ಸ್ನೇಹಿತ ಮಹಾಂತೇಶ್ ತಿಳಿಸಿದ್ದಾರೆ.
Advertisement
ಶಿವರಾಜ್ ತಂದೆ ದುರುಗಪ್ಪಗೆ ಒಟ್ಟು 11 ಜನ ಮಕ್ಕಳು ಅದ್ರಲ್ಲಿ 5 ಗಂಡು, 6 ಹೆಣ್ಣು. ಇವರೆಲ್ಲರ ಜವಾಬ್ದಾರಿಯನ್ನು ಶಿವರಾಜ್ ಅವರೇ ನೋಡಿಕೊಳ್ತಿದ್ದಾರೆ. ಅಣ್ಣತಮ್ಮಂದಿರಿಗೆ ಮದುವೆ ಮಾಡಿಸಿ ಎಲ್ಲರೂ ಒಟ್ಟಿಗೆ ಇರುವಂತೆ ನೋಡಿಕೊಂಡಿದ್ದಾರೆ.
Advertisement
https://www.youtube.com/watch?v=PsRW1hfiotQ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv