ಹಾವೇರಿ: ಮೇಷ್ಟ್ರು ಅಂದ್ರೆ ಬರೀ ಪಾಠ ಮಾಡಿ ಮನೆಗೆ ಹೋಗ್ತಾರೆ ಅಂತಾ ಜನಗಳು ತಿಳಿದಿರುತ್ತಾರೆ. ಆದರೆ ಇದರ ಹೊರತಾಗಿಯೂ ಕೆಲ ಮೇಷ್ಟ್ರು ಒಂದಿಷ್ಟು ಒಳ್ಳೆ ಕೆಲಸ ಮಾಡ್ತಾರೆ. ಮನೆ ಮನೆಗೆ ತೆರಳಿ ಶೌಚಾಲಯದ ಬಗ್ಗೆ ಅರಿವು ಮೂಡಿಸ್ತಾರೆ. ಅವರ ಶ್ರಮಕ್ಕೆ ಫಲ ಕೂಡಾ ಸಿಕ್ಕಿದೆ.
Advertisement
ಹಾನಗಲ್ ತಾಲೂಕಿನ ಡೊಳ್ಳೇಶ್ವರ ಗ್ರಾಮದ ಶಿಕ್ಷಕ ಶಿವಬಸಯ್ಯ ಚಿಲ್ಲೂರುಮಠ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಹಾವೇರಿ ಜಿಲ್ಲೆ ಕಳೆದ ಎರಡು ವರ್ಷಗಳಿಂದ ಶಾಲೆಯ 15 ವಿದ್ಯಾರ್ಥಿಗಳ ಕ್ಲಬ್ ಮಾಡಿಕೊಂಡು ಸಮಾಜಸೇವೆ ಮಾಡ್ತಿದ್ದಾರೆ. ಪ್ರತಿ ಶನಿವಾರ ಶೌಚಾಲಯವಿಲ್ಲದ ಮನೆಗಳಿಗೆ ತೆರಳಿ ಶೌಚಾಲಯದ ಬಗ್ಗೆ ಅರಿವು ಮೂಡಿಸ್ತಿದ್ದಾರೆ. ಇವರ ಮಾತು ಕೇಳಿ ಈಗಾಗಲೇ ಸುಮಾರು 70 ರಿಂದ 80 ಮನೆಯವರು ಶೌಚಾಲಯಗಳನ್ನು ಕಟ್ಟಿಸಿಕೊಂಡಿದ್ದಾರೆ.
Advertisement
Advertisement
ಈ ಊರಿನ 447 ಕುಟುಂಬಗಳಲ್ಲಿ ಇನ್ನು ಕೇವಲ 149 ಮನೆಗಳಲ್ಲಿ ಶೌಚಾಲಯ ಇಲ್ಲ. ಆದಷ್ಟು ಬೇಗ ಇಡೀ ಊರನ್ನೇ ಬಯಲುಮುಕ್ತ ಶೌಚಾಲಯ ಮಾಡುವ ಗುರಿ ಹೊಂದಿದ್ದಾರೆ. ಇವರ ಕೆಲಸಕ್ಕೆ ಊರಿನ ಜನ ಹಾಗೂ ಪಂಚಾಯ್ತಿಯವರು ಕೈಜೋಡಿಸಿದ್ದಾರೆ.
Advertisement
ಶಾಲೆಯ ಸಹಶಿಕ್ಷಕ ಮತ್ತು ಮಕ್ಕಳ ಹಕ್ಕು ಕ್ಲಬ್‍ನ ಸದಸ್ಯರು ಜಾಗೃತಿ ಮೂಡಿಸಿ ಶೌಚಾಲಯವನ್ನ ಕಟ್ಟಿಸುವ ಕಾರ್ಯವನ್ನ ಮಾಡುತ್ತಿದ್ದಾರೆ. ಈ ಕಾರ್ಯಕ್ಕೆ ಗ್ರಾಮಪಂಚಾಯ್ತಿ ಸದಸ್ಯರು ಹಾಗೂ ಶಾಲೆಯ ಎಲ್ಲಾ ಶಿಕ್ಷಕವೃಂದ ಸಹ ಸಾಥ್ ನೀಡಿದ್ದಾರೆ.