ಚಿಕ್ಕೋಡಿ: ಈ ಕಾಲದಲ್ಲಿ ಹೆತ್ತ ಮಕ್ಕಳನ್ನ ಸಾಕೋಕೇ ಪೋಷಕರು ಒದ್ದಾಡ್ತಾರೆ. ಆದ್ರೆ, ಇವತ್ತಿನ ನಮ್ಮ ಪಬ್ಲಿಕ್ ಹೀರೋ ಶಿಕ್ಷಕ ದಂಪತಿ, ಶೈಕ್ಷಣಿಕವಾಗಿ ದತ್ತು ಪಡೆದ ಮಕ್ಕಳಿಗೆ ಉನ್ನತ ವ್ಯಾಸಂಗದವರೆಗೆ ಸಹಾಯ ಮಾಡ್ತಿದ್ದಾರೆ.
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕಾರದಗಾ ಗ್ರಾಮದ ಡಿ.ಎಸ್.ನಾಡಗೆ ಅನುದಾನಿತ ಪ್ರೌಢ ಶಾಲೆಯಲ್ಲಿ ಶಿಕ್ಷಕರಾದ ಶಕುಂತಲಾ ಮತ್ತು ಜನವಾಡೆ ದಂಪತಿ, ಮಗನ ವಿದ್ಯಾಭ್ಯಾಸಕ್ಕೆ 5ಲಕ್ಷ ಕೂಡಿಟ್ಟಿದ್ದರು. ಆದ್ರೆ, ಮಗ 5ನೇ ತರಗತಿಯಲ್ಲಿ ಪರೀಕ್ಷೆ ಬರೆದು ನವೋದಯ ಶಾಲೆಗೆ ಸೇರಿದನು. ನಂತರ ಆ 5 ಲಕ್ಷವನ್ನ ಇತರೆ ಮಕ್ಕಳನ್ನ ಶೈಕ್ಷಣಿಕವಾಗಿ ದತ್ತು ಪಡೆದು ಸಹಾಯಕ್ಕೆ ವಿನಿಯೋಗಿಸ್ತಿದ್ದಾರೆ. ಕಳೆದ 10 ವರ್ಷಗಳಿಂದ ಈ ಕಾಯಕವನ್ನ ಮುಂದುವರಿಸಿದ್ದಾರೆ.
Advertisement
ಆರ್ಥಿಕವಾಗಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಅವರ ಪಾಲಕರಿಗೆ ಹೇಳಿ ಸಮವಸ್ತ್ರ, ಪಠ್ಯ ಪುಸ್ತಕ, ಶಾಲೆಯ ಫೀಸ್ ಸೇರಿದಂತೆ ವಿದ್ಯಾರ್ಥಿಯ 3 ವರ್ಷ ವಿದ್ಯಾಭ್ಯಾಸಕ್ಕೆ ತಗಲುವ ಖರ್ಚನ್ನು ಭರಿಸುತ್ತಿದ್ದಾರೆ. ಈಗಾಗಲೇ 100ಕ್ಕೂ ಹೆಚ್ಚು ಬಡ ಮಕ್ಕಳಿಗೆ ಬದುಕು ರೂಪಿಸಿದ್ದಾರೆ. ಇವರಿಂದ ಸಹಾಯ ಪಡೆದವರು ಈಗ ವಕೀಲರು, ವೈದ್ಯರು ಹಾಗೂ ಎಂಜಿನಿಯರ್‍ಳಗಾಗಿದ್ದಾರೆ.
Advertisement
ತಮ್ಮ ಮಗನ ಉಜ್ವಲ ಭವಿಷ್ಯಕ್ಕಾಗಿ ಕೂಡಿಟ್ಟ ಹಣದಿಂದ ಇದೀಗ ನೂರಾರು ಮಕ್ಕಳಿಗೆ ದಾರಿದೀಪವಾಗಿದ್ದಾರೆ.
Advertisement
https://www.youtube.com/watch?v=S0ftceLWfvc