-ಕಾರವಾರದ ಸಾತಗೇರಿ ಇವತ್ತಿನ ಪಬ್ಲಿಕ್‍ಹೀರೋ
ಕಾರವಾರ: ಮನಸ್ಸು ಮಾಡಿದ್ರೆ ಯಾವುದು ಅಸಾಧ್ಯವಲ್ಲ ಅನ್ನೋದಕ್ಕೆ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಸಾಕ್ಷಿಯಾಗಿದ್ದಾರೆ. ಕಾರವಾರದ ಸಾತಗೇರಿ ಗ್ರಾಮದ ಗ್ರಾಮಸ್ಥರು ಹಸಿರು ಪರಿಸರವನ್ನೇ ತಮ್ಮ ಉಸಿರಾಗಿಸಿಕೊಂಡಿದ್ದಾರೆ.
Advertisement
ಕಾರವಾರದಿಂದ 25 ಕಿ.ಮೀ. ದೂರದ ಸಾತಗೇರಿ ಗ್ರಾಮದಲ್ಲಿ ಪರಿಸರ ಸಂರಕ್ಷಣೆಯೇ ಮೂಲ ಉದ್ದೇಶ. ಅದಕ್ಕಾಗಿ 187 ಮಹಿಳಾ ಸದಸ್ಯರನ್ನೊಳಗೊಂಡ ಗ್ರಾಮ ಅರಣ್ಯ ಸಮಿತಿ ರಚನೆಯಾಗಿದ್ದು, 25 ವರ್ಷಗಳಿಂದ ಅರಣ್ಯ ಸಂರಕ್ಷಣೆ ಮಾಡುತ್ತಿದ್ದಾರೆ. ಗ್ರಾಮದ ಪ್ರತಿ ಮನೆಯಲ್ಲಿ ವಿದ್ಯುತ್ ಉಳಿತಾಯಕ್ಕಾಗಿ ಸೋಲಾರ್, ಗ್ಯಾಸ್ ಬಳಸುತ್ತಿದ್ದು ಉರುವಲು ಒಲೆ ಇಲ್ಲ. ಗ್ರಾಮವೆಲ್ಲಾ ಹೊಗೆ ರಹಿತವಾಗಿದೆ. ಗ್ರಾಮದ ಪ್ರತಿ ಮನೆ, ರಸ್ತೆಯೂ ಸ್ವಚ್ಛತೆಯಿಂದ ಕೂಡಿದೆ.
Advertisement
Advertisement
ಸುಮಾರು 70 ಮನೆಗಳಿರುವ ಈ ಗ್ರಾಮದಲ್ಲಿ 250ಕ್ಕೂ ಅಧಿಕ ಜನರಿದ್ದಾರೆ. ಗ್ರಾಮದ ಸುತ್ತ 350 ಎಕರೆಗೂ ಅಧಿಕ ಅರಣ್ಯ ಪ್ರದೇಶವಿದೆ. 1993-94ರಲ್ಲಿ ಗ್ರಾಮದ ಸುತ್ತಮುತ್ತಲ ಅರಣ್ಯಗಳ ಸಂರಕ್ಷಣೆಗಾಗಿ ಗ್ರಾಮಸ್ಥರನ್ನ ಜೊತೆಗೂಡಿಸಿಕೊಂಡು ಅರಣ್ಯ ಇಲಾಖೆ ರಚಿಸಿದ ಗ್ರಾಮ ಅರಣ್ಯ ಸಮಿತಿ ರಚನೆ 25 ವರ್ಷಗಳಿಂದ ಯಶಸ್ವಿಯಾಗಿದೆ. ಪ್ರತಿ ವಾರಕ್ಕೊಮ್ಮೆ ಸಭೆ ನಡೆಸಿ ಚರ್ಚೆ ನಡೆಸುತ್ತಾರೆ.
Advertisement
ಗ್ರಾಮದ ಪ್ರತಿಯೊಬ್ಬರದ್ದೂ ಪರಿಸರ ಪ್ರೇಮ. ಗ್ರಾಮದಲ್ಲಿರುವ 25 ಎಕರೆ ಜಮೀನಿನಲ್ಲಿ ಔಷಧೀಯ ಸಸ್ಯಗಳ ಜೊತೆ ಕಾಡು ಪ್ರಾಣಿ, ಪಕ್ಷಿಗಳಿಗೆ ಬೇಕಾಗುವ ಹಣ್ಣಿನ ಗಿಡಗಳನ್ನೂ ಬೆಳೆಯಲಾಗಿದೆ. ಗ್ರಾಮಸ್ಥರ ಪರಿಸರ ಕಾಳಜಿಯಿಂದ ಪಶ್ಚಿಮ ಘಟ್ಟ ಮತ್ತಷ್ಟು ಸುಂದರವಾಗಿದೆ.