ಚಿಕ್ಕೋಡಿ: ಎಲ್ಲಿ ನೋಡಿದರೂ ಹಚ್ಚ ಹಸಿರು. ಬಾಯಾರಿಕೆ ನೀಗಿಸಿಕೊಳ್ಳುತ್ತಿರುವ ಜಾನುವಾರುಗಳು. ಇದು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹತ್ತರವಾಟ ಗ್ರಾಮದ ದೃಶ್ಯ. ಹೀಗೆ ಹಸಿರ ಹೊದಿಕೆ ನಿರ್ಮಾಣವಾಗಲು ಮತ್ತು ಮೂಕ ಪ್ರಾಣಿಗಳಿಗೆ ನೀರು ಸಿಗುವಂತೆ ಮಾಡಿರುವವರೇ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಸಣ್ಣಪ್ಪ ಕಮತೆ.
ಹುಕ್ಕೇರಿ ತಾಲೂಕಿನ ಹೀರಾ ಶುಗರ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾಗಿರೋ ಸಣ್ಣಪ್ಪ ಅವರಿಗೆ ಕೃಷಿ ಅಂದ್ರೆ ಅಚ್ಚುಮೆಚ್ಚು. ಹೀಗಾಗಿ ತಮ್ಮ ಕಾರ್ಯಸ್ಥಾನದ ಸಮೀಪದಲ್ಲೇ ಇರೋ ಹುಟ್ಟೂರಿನಲ್ಲಿದ್ದ ತಮ್ಮ ಪೂರ್ವಿಕರ 13 ಎಕರೆ ಬಂಜರು ಭೂಮಿಯನ್ನು ಫಲವತ್ತಾಗಿ ಮಾಡಿದ್ದಾರೆ.
Advertisement
ದನ-ಕರುಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮೊದಲಿಗೆ ಬಾವಿ ತೆಗೆಸಿದರು. ಆದ್ರೆ ಊರಿನ ಪರಿಸ್ಥಿತಿಗೆ ಮರುಗಿ ಬ್ಯಾಂಕ್‍ನಿಂದ 20 ಲಕ್ಷ ರೂ. ಸಾಲ ಪಡೆದು ಬಾವಿಯನ್ನೇ ಕೆರೆಯನ್ನಾಗಿ ಪರಿವರ್ತಿಸಿದ್ದಾರೆ. ತಮ್ಮ ಜಮೀನು ಮಾತ್ರವಲ್ಲದೆ ಅಕ್ಕಪಕ್ಕದ ರೈತರ ಜಮೀನಿಗೂ ನೀರುಣಿಸಿ ಅವರ ಜೊತೆ ಖುಷಿ ಹಂಚಿಕೊಂಡಿದ್ದಾರೆ.
Advertisement
ಎಂಜಿನಿಯರಿಂಗ್ ಪದವಿಯಲ್ಲಿ ಗೋಲ್ಡ್ ಮೆಡಲಿಸ್ಟ್ ಆಗಿರೋ ಪ್ರಿನ್ಸಿಪಾಲ್ ಸಣ್ಣಪ್ಪ ಕಮತೆ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ.