-ನೀಲಗಿರಿ ನಾಡಲ್ಲಿ ಸ್ಯಾಂಡಲ್‍ವುಡ್ ಕಂಪು
ಕೋಲಾರ: ಕೋಲಾರ ಅಂದರೆ ಬರದ ಜೊತೆಗೆ ಬಂಗಾರವೂ ನೆನಪಿಗೆ ಬರುತ್ತೆ. ಆದ್ರೀಗ, ಗಂಧದ ಗುಡಿ ಎನ್ನುವಂತೆ ಮಾಡ್ತಿದ್ದಾರೆ ನಮ್ಮ ಪಬ್ಲಿಕ್ ಹೀರೋ ಅಶೋಕ್ ಕುಮಾರ್.
ಕೋಲಾರದ ಶ್ರೀನಿವಾಸಪುರ ತಾಲೂಕಿನ ಆವಲಕುಪ್ಪೆಯ ಶ್ರೀಗಂಧದ ಕಾಡಿನಲ್ಲಿ ಕಣ್ಣು ಹಾಯಿಸಿದಷ್ಟುದ್ದಕ್ಕೂ ಶ್ರೀಗಂಧದ ಗಿಡಗಳು ಸೊಂಪಾಗಿ ಬೆಳೆದಿವೆ. ಅರಣ್ಯ ಇಲಾಖೆಯ ವಾಚರ್ ಅಶೋಕ್ ಕುಮಾರ್ ಅವರ ಹೆಚ್ಚಿನ ಮುತುವರ್ಜಿಯಿಂದ ಒಂದು ಗಿಡವೂ ಒಣಗಿ ಹೋಗದಂತೆ ಬೆಳೀತಿವೆ.
25 ಎಕರೆ ಪ್ರದೇಶದ ಕಾಡಿನ ನರ್ಸರಿಯಲ್ಲಿ ಶ್ರೀಗಂಧ, ರಕ್ತಚಂದನ, ಹೊನ್ನೆ, ಬೀಟೆ, ಸೇರಿ ಮಾವು-ಬೇವು-ಹಲಸು, ಹೆಬ್ಬೇವು-ಹೊಂಗೆ, ನೆಲ್ಲಿ-ನೇರಳೆ, ಬೀಟೆ ಹೀಗೆ ನಾನಾ ಜಾತಿಯ 25ಕ್ಕೂ ಹೆಚ್ಚು ಸಸಿಗಳನ್ನ ಬೆಳೆದು ರೈತರಿಗೆ ನೀಡಿ, ಕೋಟಿ ವೃಕ್ಷ ಆಂದೋಲನವನ್ನ ಆರಂಭಿಸಿದ್ದಾರೆ.
ಮಾವು ಬೇಸಾಯಕ್ಕೆ ಹೆಸರಾಗಿರೋ ಶ್ರೀನಿವಾಸಪುರದಲ್ಲಿ ಇದೀಗ ನೀಲಗಿರಿ ತೆಗೆದು ರೈತರು ಶ್ರೀಗಂಧ ಬೆಳೆಯಲು ಒಲವು ತೋರಿಸಿದ್ದಾರೆ. ಕಳ್ಳರಿಂದ ಗಿಡ ರಕ್ಷಿಸೋದು ಸವಾಲಾದರೂ ರೈತರ ಆರ್ಥಿಕ ಸಂಕಷ್ಟು ನಿವಾರಣೆ ಆಗ್ತಿದೆ. ಇದು ಅಶೋಕ್ ಅವರ ಸಾಧನೆ ಅಂತ ಅರಣ್ಯ ಇಲಾಖೆ ಅಧಿಕಾರಿ ಶ್ರೀನಾಥ್ ಹೇಳಿದ್ದಾರೆ.
ಒಟ್ಟಿನಲ್ಲಿ ಮಾವಿನ ತವರು ಶ್ರೀನಿವಾಸಪುರವನ್ನು, ಚಿನ್ನದ ನಾಡು ಕೋಲಾರವನ್ನೂ ಅಶೋಕ್ ಕುಮಾರ್ ಅವರು ಗಂಧದ ಗುಡಿ ಮಾಡೋಕೆ ಹೊರಟಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=j5AKJqQUH5g