ಚಿತ್ರದುರ್ಗ: ಪರಿಸರ ರಕ್ಷಣೆ ಮಾಡುವುದು ನಮ್ಮೆಲ್ಲರ ಹೊಣೆ. ಇದು ಪುಸ್ತಕಕ್ಕೆ ಉಳಿದುಕೊಂಡುಬಿಟ್ಟಿದೆ. ಆದ್ರೆ, ಚಿತ್ರದುರ್ಗದ ಪಬ್ಲಿಕ್ ಹೀರೋ ಸ್ವಾಮಿ ಅವರು 10 ವರ್ಷಗಳಿಂದ ನಿರಂತರವಾಗಿ ಪರಿಸರ ರಕ್ಷಣೆ ಮಾಡೋದರ ಜೊತೆಗೆ ಜಾಗೃತಿ ಮೂಡಿಸ್ತಿದ್ದಾರೆ.
ಚಿತ್ರದುರ್ಗದ ಎಚ್.ಎ.ಕೆ. ಸ್ವಾಮಿ, ಪರಿಸರ ಸಂರಕ್ಷಣೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಸತತ 10 ವರ್ಷಗಳಿಂದಲೂ ಪರಿಸರ ಜಾಗೃತಿ ಮೂಡಿಸ್ತಿದ್ದಾರೆ. ವರ್ಷದ 365 ದಿನವೂ ವಾಯುಮಾಲಿನ್ಯ, ಜಲಮಾಲಿನ್ಯ ಹಾಗು ಶಬ್ದಮಾಲಿನ್ಯ ಮಾಡದಂತೆ ಶಾಲಾ, ಕಾಲೇಜುಗಳ ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಪರಿಸರ ಹಾನಿಗೆ ಕಡಿವಾಣ ಹಾಕಲು ವಿವಿಧ ಪರ್ಯಾಯ ಆಚರಣೆಗಳನ್ನು ಮಾಡುವಂತೆ ಜನನಿಬಿಡ ಪ್ರದೇಶಗಳಲ್ಲಿ 1,200ಕ್ಕೂ ಅಧಿಕ ಜಾಗೃತಿ ಕಾರ್ಯಕ್ರಮ ಮಾಡಿದ್ದಾರೆ.
ಕೆಮಿಕಲ್ ಮಿಶ್ರಿತ ಗಣಪತಿಗಳನ್ನು ವಿಸರ್ಜನೆ ಮಾಡದಂತೆ, ಪ್ಲಾಸ್ಟಿಕ್ ಬಳಸದಂತೆ ಕಾಳಜಿ ವಹಿಸ್ತಿದ್ದಾರೆ. ಪ್ಲಾಸ್ಟಿಕ್ ನಿರ್ಮೂಲನ ಆಂದೋಲನ ಅಪಾರ ಜನಮನ್ನಣೆ ಗಳಿಸಿದೆ. ಬರೀ ಹೇಳೋದಷ್ಟೇ ಅಲ್ಲ. ಇದನ್ನ ತಾವೂ ಪಾಲಿಸ್ತಿದ್ದಾರೆ. ಈಗಲೂ ಸೈಕಲ್ ಸವಾರಿ ಮಾಡುತ್ತಾರೆ. ಸ್ವದೇಶಿ ಉಡುಪುಗಳನ್ನೇ ಧರಿಸ್ತಾರೆ ಅಂತ ಸ್ಥಳೀಯ ನಾಗರಾಜ್ ಬೆದ್ರೆ ಹೇಳಿದ್ದಾರೆ.
https://www.youtube.com/watch?v=QEI5E4CL0pY
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv