ದಾವಣಗೆರೆ: ಬಿರು ಬೇಸಿಗೆಯಿಂದಾಗಿ ರಾಜ್ಯದ ಬಹುತೇಕ ಕಡೆ ಕುಡಿಯೋ ನೀರಿಗೂ ಪರದಾಡೋ ಸ್ಥಿತಿ ಇದೆ. ನೀರು ಕೊಡಿ ಸ್ವಾಮಿ ಅಂತಾ ಜನನಾಯಕರನ್ನ ಕೇಳಿದ್ರೆ ಕಿವಿನೇ ಕೇಳಿಸಲ್ಲ. ಇಂಥದ್ದರಲ್ಲಿ ವ್ಯಕ್ತಿಯೊಬ್ಬರು ಉಚಿತವಾಗಿ ಟ್ಯಾಂಕರ್ ಮೂಲಕ ಏರಿಯಾಗಳಿಗೆಲ್ಲಾ ನೀರು ಹಂಚ್ತಿದ್ದಾರೆ.
Advertisement
ದಾವಣಗೆರೆಯ ನಿಟ್ಟುವಳ್ಳಿ ಬಡಾವಣೆಯ ನಿವಾಸಿ ರಾಕೇಶ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ರಾಕೇಶ್ ಅವರಿಗೆ ಏನಾದರೂ ಸೇವೆ ಮಾಡಬೇಕೆಂಬ ಮಹದಾಸೆ. ಹೀಗಾಗಿ ಜನರ ನೀರಿನ ದಾಹ ತಣಿಸುವ ಕೆಲಸ ಮಾಡ್ತಿದ್ದಾರೆ. ತಮ್ಮ ಜಮೀನಿನಲ್ಲಿರುವ ಕೊಳವೆ ಬಾವಿಯಿಂದ ನೀರನ್ನು ತುಂಬಿಸಿಕೊಂಡು ಬಂದು, ನಿತ್ಯ 5 ಟ್ಯಾಂಕರ್ ಮೂಲಕ ನಗರದ ಪ್ರತಿಯೊಂದು ವಾರ್ಡ್‍ಗೂ ಪೂರೈಕೆ ಮಾಡುತ್ತಿದ್ದಾರೆ. ಪ್ರತಿ ನಿತ್ಯ ಸುಮಾರು 60 ಟ್ಯಾಂಕರ್ ನೀರನ್ನ ಜನರಿಗೆ ನೀಡುತ್ತಾರೆ. ರಾಕೇಶ್ ಸಮಾಜ ಸೇವೆಗೆ ಮನೆಯವರು ಹಾಗೂ ಸ್ನೇಹಿತರೂ ಸಾಥ್ ನೀಡಿದ್ದಾರೆ.
Advertisement
Advertisement
ಪ್ರತಿವರ್ಷ ದಾವಣಗೆರೆ ಜಿಲ್ಲೆಯ ಸುತ್ತಮುತ್ತ ಯಾವುದೇ ಜಾತ್ರೆ ನಡೆಯಲಿ, ರಾಜೇಶ್ ಅಲ್ಲಿಗೆ ಬರೋ ಜನರ ನೀರಿನ ದಾಹ ನೀಗಿಸ್ತಾರೆ. ತಂದೆಯ ಮಾರ್ಗದರ್ಶನದಲ್ಲಿ ಬೆಳೆದ ರಾಕೇಶ್ ಬಡ ಜನರಿಗೆ ತನ್ನ ಕೈಲಾದಷ್ಟು ಸಹಾಯ ಮಾಡ್ತಿದ್ದಾರೆ. ಇದಕ್ಕಾಗಿ ಆರ್‍ಎಸ್‍ಆರ್ ಅನ್ನೋ ಫೌಂಡೇಶನ್ ಸ್ಥಾಪನೆ ಮಾಡಿದ್ದಾರೆ. ರಾಕೇಶ್ ನಿಜಕ್ಕೂ ಆಧುನಿಕ ಭಗೀರಥರಂತೆ ಕಾಣುತ್ತಾರೆ.
Advertisement