ಹಾವೇರಿ: ಈ ವರ್ಷ ನದಿ, ಹಳ್ಳಗಳಲ್ಲೂ ಕುಡಿಯೋಕೆ ನೀರಿಲ್ಲ. ನೀರಿಗಾಗಿ ಜನ ಮತ್ತು ಜಾನುವಾರುಗಳು ನಿತ್ಯವೂ ಪರದಾಡು ಪರಿಸ್ಥಿತಿ ಇದೆ. ಆದ್ರೆ ಇಲ್ಲೊಬ್ಬ ರೈತ ತಮ್ಮ ಬೋರ್‍ವೆಲ್ ನೀರಲ್ಲಿ ಪೈರು ಬೆಳೆಯೋದು ಬಿಟ್ಟು, ನದಿಗೇ ನೇರವಾಗಿ ನೀರು ಬಿಡ್ತಿದಾರೆ. ಪ್ರತಿನಿತ್ಯವೂ ಸಾವಿರಾರು ಕುರಿ, ಮೇಕೆ, ಕಾಡುಪ್ರಾಣಿ ಹಾಗೂ ಪಕ್ಷಿಗಳು ದಾಹ ತಣಿಸುತ್ತಿದ್ದಾರೆ.
Advertisement
ಬೋರ್‍ವೆಲ್ ನೀರನ್ನು ನೇರವಾಗಿ ನದಿಗೇ ಬಿಡ್ತಿರೋ ರಾಜು ಸಿಂಗಣ್ಣನವರ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ರಾಜು ಅವರು ಜಿಲ್ಲೆಯ ವಣೂರು ತಾಲೂಕಿನ ಕಳಸೂರು ಗ್ರಾಮದ ನಿವಾಸಿ. ಈ ಬಾರಿ ವರದಾ ನದಿ ಬತ್ತಿ ಹೋಗಿರೋದ್ರಿಂದ ಜನ, ಜಾನುವಾರು ಪ್ರಾಣಿ, ಪಕ್ಷಿಗಳಿಗೆ ಕುಡಿಯುವ ನೀರಿಲ್ಲ. ಪ್ರಾಣಿ, ಪಕ್ಷಿ, ಜನರ ಕಷ್ಟ ನೋಡಿದ ರಾಜು ಪೈರು ಬೆಳೆಯಲು ಕೊರೆಸಿದ್ದ ಬೋರ್‍ವೆಲ್ ನೀರನ್ನೇ ನದಿಗೆ ಬಿಡ್ತಿದ್ದಾರೆ. ನದಿಯ ಗುಂಡಿಯಲ್ಲಿ ನಿಂತ ನೀರು ಕುಡಿದು ಮೂಕ ಪ್ರಾಣಿಗಳು ದಾಹ ನೀಗಿಸಿಕೊಳ್ತಿವೆ. ಮಳೆ ಬಂದು ನದಿಗೆ ನೀರು ಬರೋತನಕ ನದಿಗೆ ನೀರು ಬಿಡ್ತೀನಿ ಎಂದು ರಾಜು ಹೇಳುತ್ತಾರೆ.
Advertisement
Advertisement
ಪ್ರಾಣಿ, ಪಕ್ಷಿಗಳಿಗೆ ನೀರು ಕೊಡುವ ಉದ್ದೇಶದಿಂದಲೇ ಈ ಬಾರಿ ರಾಜು ಬೇಸಿಗೆ ಬೆಳೆ ಬೆಳೆದಿಲ್ಲ. ರಾಜು ಅವರ ಬೋರ್‍ವೆಲ್‍ನಿಂದ ಕಳಸೂರು, ದೇವಗಿರಿ, ಕೋಳೂರು ಸೇರಿದಂತೆ ಸುತಮುತ್ತಲಿನ ಗ್ರಾಮದ ರೈತರ ಜಾನುವಾರುಗಳು ತಮ್ಮ ದಾಹವನ್ನು ತಣಿಸಿಸೂಳ್ಳುತ್ತಿವೆ.
Advertisement
ಬೆಂಗಳೂರಂತಹ ಮಹಾನಗರಗಳಲ್ಲಿ ಹನಿ ನೀರಿಗೂ ದುಡ್ಡು ಕೊಡಬೇಕಾದ ಪರಿಸ್ಥಿತಿ ಇದೆ. ನೀರಿಗಾಗಿ ದಿನಗಟ್ಟಲೆ ಕೊಡ ಹಿಡಿದು ನಿಲ್ಲಬೇಕಾದ ದೃಶ್ಯ ಕಾಣ್ತಿವೆ. ಆದರೆ ರಾಜು ಅವರ ಈ ಕಾರ್ಯ ನೋಡಿದ್ರೆ ಜಾನುವಾರುಗಳಿಗೆ ಬರಗಾಲದ ಭಗೀರಥನಾಗಿದ್ದಾರೆ.