Connect with us

Chitradurga

ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸ್ತಿರೋ ಹಾಸ್ಟೆಲ್ ಸೂಪರಿಂಟೆಂಡೆಂಟ್ ರಾಜೇಂದ್ರ ಚಕ್ರವರ್ತಿ

Published

on

ಚಿತ್ರದುರ್ಗ: ಇವತ್ತಿನ ನಮ್ಮ ಪಬ್ಲಿಕ್ ಹೀರೋ ಸರ್ಕಾರಿ ಆಸ್ಪತ್ರೆಯನ್ನ ಮಾದರಿ ಆಸ್ಪತ್ರೆಯನ್ನಾಗಿ ಮಾಡ್ತಿದ್ದಾರೆ. ಆದರೆ ಆಸ್ಪತ್ರೆಯನ್ನ ಬದಲು ಮಾಡ್ತೀರೋದು ಡಾಕ್ಟರ್ ಅಲ್ಲ, ಬದಲಿಗೆ ಒಬ್ಬ ಸಾಮಾನ್ಯ ವ್ಯಕ್ತಿ.

ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜು ಹಾಸ್ಟೆಲ್‍ನ ಸುಪರಿಂಟೆಂಡೆಂಟ್ ರಾಜೇಂದ್ರ ಚಕ್ರವರ್ತಿ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ರಾಜೇಂದ್ರ ಚಕ್ರವರ್ತಿ ಮತ್ತು ತಂಡ ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಯನ್ನು ಮಾದರಿ ಆಸ್ಪತ್ರೆಯನ್ನಾಗಿಸುತ್ತಿದ್ದಾರೆ. ಚಕ್ರವರ್ತಿ ತಮ್ಮ ಸ್ನೇಹಿತರ ಜೊತೆ ಸೇರಿ ಸದ್ಯಕ್ಕೆ ನಾಲ್ಕು ವಾರ್ಡ್‍ಗಳನ್ನ ದತ್ತು ಪಡೆದು ಆಸ್ಪತ್ರೆಯ ಚಿತ್ರಣವನ್ನೇ ಬದಲಿಸಿದ್ದಾರೆ. ಆಸ್ಪತ್ರೆಗೆ ಬೆಡ್‍ಶೀಟ್‍ಗಳು, ದಿಂಬು ಮತ್ತಿತರರ ವಸ್ತುಗಳನ್ನ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯೋದು ಮಾತ್ರವಲ್ಲ, ಉತ್ತಮ ವಾತಾವರಣ ಇದ್ರೆ ಬಹುಬೇಗ ಡಿಸ್ಚಾರ್ಜ್ ಆಗ್ತಾರೆ ಎಂದು ರಾಜೇಂದ್ರ ಹೇಳುತ್ತಾರೆ.

ಗೋಡೆಗಳ ಮೇಲೆ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಗಾದೆ ಮಾತುಗಳು ಹಾಗು ಹೃದಯಸ್ಪರ್ಶಿ ಕಲಾ ಚಿತ್ರಗಳನ್ನೂ ಮೂಡಿಸಿದ್ದಾರೆ. ಇದ್ರಿಂದ ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ 2009-10ನೇ ಸಾಲಿನ ಅತ್ಯುತ್ತಮ ಆಸ್ಪತ್ರೆ ಎಂಬ ಪ್ರಶಸ್ತಿ ಕೂಡ ಬಂದಿದೆ.

ಆಸ್ಪತ್ರೆ ಮಾತ್ರವಲ್ಲದೆ ನಗರದ ಪ್ರಮುಖ ಬೀದಿ ಹಾಗೂ ಆಡುಮಲ್ಲೇಶ್ವರ ಕಿರುಮೃಗಾಲಯದ ಹೆಬ್ಬಾಗಿಲು, ಸರ್ಕಾರಿ ಬಸ್ ನಿಲ್ದಾಣದಲ್ಲಿ ಜನರಿಗೆ ಹಾಗೂ ಪ್ರವಾಸಿಗರಿಗೆ ಕುಳಿತುಕೊಳ್ಳಲು ಸಿಮೆಂಟ್ ಕುರ್ಚಿಗಳನ್ನ ಹಾಕಿಸಿದ್ದಾರೆ. ರಸ್ತೆ ಬದಿ ಗಿಡಗಳನ್ನೂ ನೆಟ್ಟಿದ್ದಾರೆ.

https://www.youtube.com/watch?v=X6V5fZ2ae7U

Click to comment

Leave a Reply

Your email address will not be published. Required fields are marked *